ಸಾಂದರ್ಭಿಕ ಚಿತ್ರ 
ಆರೋಗ್ಯ

ಮಧುಮೇಹ ರೋಗಿಗಳಿಗೆ ಎಳನೀರು ಒಳ್ಳೆಯದಾ, ಕೆಟ್ಟದ್ದಾ? ಈ ಬಗ್ಗೆ ವೈದ್ಯರು ಹೇಳೋದೇನು...Coconut water

ಪ್ರಮುಖ ಮುಖ್ಯಾಂಶಗಳು

  • ತೆಂಗಿನ ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ
  • ಅನೇಕರು ದೇಹವನ್ನು ಡಿ ಹೈಡ್ರೇಟ್​ ಆಗಿರಿಸಲು ಕುಡಿಯುತ್ತಾರೆ
  • ಇದರಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಇದನ್ನು ಮಧುಮೇಹಿಗಳು ಕುಡಿಯಬಹುದೇ?
Coconut water: ತೆಂಗಿನ ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದನ್ನು ಅನೇಕರು ದೇಹವನ್ನು ಡಿ ಹೈಡ್ರೇಟ್​ ಆಗಿರಿಸಲು ಕುಡಿಯುತ್ತಾರೆ. ಅಂದಹಾಗೇ, ಇದರಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಇದನ್ನು ಮಧುಮೇಹಿಗಳು ಕುಡಿಯಬಹುದೇ? ಅಥವಾ ಇಲ್ಲವೇ ಎಂಬ ಗೊಂದಲದಲ್ಲಿರುತ್ತಾರೆ ಇದನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯೇ? ಎಂಬುದಕ್ಕೆ ಇಲ್ಲಿದೆ ಉಪಯುಕ್ತ ಮಾಹಿತಿ...

ಮಧುಮೇಹದಲ್ಲಿ ತೆಂಗಿನ ನೀರು ಕುಡಿಯುವುದು ಉತ್ತಮವೇ?

ಮಧುಮೇಹದಲ್ಲಿ ತೆಂಗಿನ ನೀರನ್ನು ಕುಡಿಯುವುದನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ನೀರಿನಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಬೊಜ್ಜು ಮತ್ತು ಕೊಲೆಸ್ಟ್ರಾಲ್​ ಹೆಚ್ಚಾಗುವುದಿಲ್ಲ. ಬಿಸಿಲಿನ ತಾಪ ಹೆಚ್ಚಾದಂತೆ ಇದನ್ನು ಸೇವಿಸುವುದರಿಂದ ದೇಹಕ್ಕೆ ತಂಪಾದ ಅನುಭವವನ್ನು ಪಡೆಯಲು ಸಾಧ್ಯಾವಾಗುತ್ತದೆ. ಏಕೆಂದರೆ, ಇದು ನಿರ್ಜಲೀಕರಣದಿಂದ ನಮ್ಮನ್ನು ರಕ್ಷಿಸುತ್ತದೆ. ಇಂತಹ ಸಮಯದಲ್ಲಿ ಎಳನೀರನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಹಾಗೆಯೇ ಇದು ದೇಹಕ್ಕೆ ನೀರಿನ ಅಗತ್ಯವನ್ನು ಪೂರೈಸುತ್ತದೆ.
ಮಧುಮೇಹ ರೋಗಿಗಳಿಗೆ ತೆಂಗಿನ ನೀರು ಮಾತ್ರವಲ್ಲದೆ ತೆಂಗಿನಕಾಯಿ ಕೂಡ ಪ್ರಯೋಜನಕಾರಿ ಎಂದು ವೈದ್ಯರು ಹೇಳುತ್ತಾರೆ. ಇದು ಆರೋಗ್ಯ ಪ್ರಯೋಜನಗಳನ್ನು ನೀಡುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಎಳನೀರನ್ನು ಮಿತವಾಗಿ ಸೇವಿಸುವುದರಿಂದ ದೇಹದ ಕೊಬ್ಬು ಕಡಿಮೆಯಾಗುತ್ತದೆ. ತೆಂಗಿನಕಾಯಿ ಹೃದಯದ ಆರೋಗ್ಯ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುವಲ್ಲಿ ಸಹ ಪರಿಣಾಮಕಾರಿಯಾಗಿರುತ್ತದೆ. ಆದರಿಂದ ತೆಂಗಿನ ಕಾಯಿಯನ್ನು ಆಹಾರದ ಭಾಗವಾಗಿ ಸೇವಿಸುವುದು ಬಹಳ ಪ್ರಯೋಜನಕಾರಿಯಾಗಿದೆ.

ತೆಂಗಿನ ನೀರನ್ನು ಯಾವಾಗ ಕುಡಿಯಬೇಕು?

ವೈದ್ಯರು ಸೂಚಿಸುವಂತೆ, ಖಾಲಿ ಹೊಟ್ಟೆಯಲ್ಲಿ ಕುಡಿಯಲು ಸಾಧ್ಯವಾಗದಿದ್ದರೆ, ಅದನ್ನು ಬೆಳಿಗ್ಗೆ ಪಾನೀಯವಾಗಿ ಸೇವಿಸಬೇಕು ಎಂದು ತಿಳಿಸಿದ್ದಾರೆ. ನಿಮ್ಮ ಹಸಿವನ್ನು ನೀಗಿಸಲು ಬೆಳಿಗ್ಗೆ ತಿಂಡಿಯ ಸಮಯದಲ್ಲಿ ಕುಡಿಯಬಹುದು. ಇಲ್ಲವೇ ಸಂಜೆಯ ಸಮಯದಲ್ಲಿ ಕುಡಿಯಿರಿ. ಯಾವುದೇ ಕಾರಣಕ್ಕೂ ಊಟದ ಸಮಯದಲ್ಲಿ ತೆಂಗಿನ ನೀರನ್ನು ಸೇವಿಸಬೇಡಿ. ಇದು ನಿಮ್ಮ ಹೊಟ್ಟೆಯನ್ನು ತುಂಬಿಸುವುದರಿಂದ ಊಟ ಮಾಡಲು ಬಿಡುವುದಿಲ್ಲ.
ನೀವು ಖಾಲಿ ಹೊಟ್ಟೆಯಲ್ಲಿ ತೆಂಗಿನ ನೀರನ್ನು ಕುಡಿಯಲು ಸಾಧ್ಯವಾಗದಿದ್ದರೆ, ಅದನ್ನು ಬೆಳಿಗ್ಗೆ ಪಾನೀಯವಾಗಿ ಕುಡಿಯಿರಿ. ನಿಮ್ಮ ಹಸಿವನ್ನು ನೀಗಿಸಲು ನೀವು ಬೆಳಿಗ್ಗೆ 11 ಗಂಟೆಗೆ ತೆಂಗಿನ ನೀರನ್ನು ಕುಡಿಯಬಹುದು. ಆದರೆ ಮಧ್ಯಾಹ್ನ ಅಥವಾ ಉಪಾಹಾರದೊಂದಿಗೆ ತೆಂಗಿನ ನೀರನ್ನು ಎಂದಿಗೂ ಕುಡಿಯಬೇಡಿ. ಈ ರೀತಿಯಾಗಿ, ತೆಂಗಿನ ನೀರನ್ನು ಶಾಖದಲ್ಲಿ ತಂಪಾಗಿಸಲು ಮತ್ತು ಹೈಡ್ರೇಟ್ ಮಾಡಲು ಬಳಸಬಹುದು. ಆದರೆ ಮಧುಮೇಹದಲ್ಲಿ, ತೆಂಗಿನ ನೀರನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
ಮಧುಮೇಹ ರೋಗಿಗಳು ಎಳನೀರನ್ನು ಮಿತಿಯಲ್ಲಿ ಸೇವಿಸುವುದನ್ನು ಅಭ್ಯಾಸ ಮಾಡಬೇಕು. ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಎಲೆಕ್ಟ್ರೋಲೈಟ್‌ಗಳು ಇರುತ್ತವೆ. ಇದು ಹೈಡ್ರೇಷನ್‌ಗೆ ಒಳ್ಳೆಯದು ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು, ರಕ್ತದ ಸಕ್ಕರೆಯನ್ನು ತೀವ್ರವಾಗಿ ಹೆಚ್ಚಿಸುವುದಿಲ್ಲ. ಆದರೆ ಹೆಚ್ಚಾಗಿ ಕುಡಿದರೆ ಸಕ್ಕರೆ ಮಟ್ಟ ಏರಬಹುದು.
ದಿನಕ್ಕೆ ಸಣ್ಣ ಗ್ಲಾಸ್ ಅಥವಾ ಒಂದು ಎಳನೀರಿನ ಅರ್ಧಭಾಗ ಮಾತ್ರ ಕುಡಿಯಿರಿ. ಹಾಗೆಯೇ ನೀವು ಕುಡಿಯಲು ಪ್ರಯತ್ನಿಸಿದರೆ, ತಾಜಾ ಎಳನೀರನ್ನು ಆಯ್ಕೆ ಮಾಡಿಕೊಳ್ಳಿ. ಶೇಖರಿಸಿಟ್ಟ ಎಳನೀರನ್ನು ಸೇವಿಸಬೇಡಿ ಇದು ಆರೋಗ್ಯಕ್ಕೆ ಹಾನಿಯನ್ನು ಮಾಡಬಹುದು. ಈ ನೀರನ್ನು ಕುಡಿದ ನಂತರ ಸಕ್ಕರೆ ಮಟ್ಟವನ್ನು ಪರಿಶೀಲಿಸಿಕೊಳ್ಳಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.