Bones health: ಇತ್ತೀಚಿನ ದಿನಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲಿಯೇ ಮೂಳೆ ನೋವುಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ನಾವು ನಮ್ಮ ಮೂಳೆಗಳ ಬಗ್ಗೆ ಆರೈಕೆ ಮಾಡಿಕೊಳ್ಳದಿದ್ದರೆ, ನಿಮ್ಮ ಮೂಳೆಗಳು ದುರ್ಬಲಗೊಳ್ಳುತ್ತವೆ. ನಂತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪ್ರತಿನಿತ್ಯ ಆರೋಗ್ಯಕರ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳುವುದನ್ನು ಉತ್ತಮ ವಿಧಾನವಾಗಿದೆ. ಹಾಗಾಗಿ ನಾವಿಂದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುವ ಮೂರು ಆಹಾರ ಗುಂಪುಗಳ ಬಗ್ಗೆ ಮಾಹಿತಿ ಒದಗಿಸಲಿದ್ದೇವೆ.
ಮೂಳೆಗಳನ್ನು ಬಲಪಡಿಸುವುದು ಹೇಗೆ?
ನಿಮ್ಮ ಮೂಳೆಗಳನ್ನು ಬಲಪಡಿಸಿಕೊಳ್ಳಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಚೀಸ್, ಹಸಿರು ಎಲೆ ತರಕಾರಿಗಳಾದ ಪಾಲಕ್, ಕೇಸು, ಮೆಂತ್ಯ, ಮತ್ತು ಕೊಬ್ಬಿನ ಮೀನುಗಳನ್ನು ತಿನ್ನುವುದರಿಂದ ಇದು ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ.
ಅಲ್ಲದೆ, ಒಣ ಹಣ್ಣುಗಳಾದ ಬಾದಾಮಿ, ಗೋಡಂಬಿ, ದ್ರಾಕ್ಷಿ ಮತ್ತು ಖರ್ಜೂರವನ್ನು ಪ್ರತಿನಿತ್ಯದ ಆಹಾರದಿಂದ ಸೇವಿಸಿಕೊಳ್ಳುವುದರಿಂದ ಮೂಳೆಗಳ ಬಲವನ್ನು ಹೆಚ್ಚಿಸಿಕೊಳ್ಳಬಹುದು. ಇವೆಲ್ಲವೂ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿವೆ.
ಬಲವಾದ ಮೂಳೆಗಳಿಗಾಗಿ ಈ ಆಹಾರಗಳನ್ನು ಸೇವಿಸಿ
ಹಾಲು ಮತ್ತು ಡೈರಿ ಉತ್ಪನ್ನಗಳು
ಹಾಲು, ಮೊಸರು, ಚೀಸ್, ಪನೀರ್ಗಳನ್ನು ಬಳಸಿ ಇದು ಮೂಳೆಗಳಿಗೆ ಬಲಿಷ್ಟತೆಯನ್ನು ಕೊಡಲು ನಿರ್ಧರಿಸುತ್ತದೆ. ಕ್ಯಾಲ್ಸಿಯಂ ಬಲವಾದ ಮೂಳೆಗಳನ್ನು ನಿರ್ಮಿಸುವುದಲ್ಲದೇ, ಸ್ನಾಯುಗಳು, ಹೃದಯ ಮತ್ತು ನರಗಳು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯದ ಆಹಾರದಲ್ಲಿ ಈ ಪದಾರ್ಥಗಳನ್ನು ಬಳಸಿಕೊಳ್ಳುವುದು ಉತ್ತಮ ಸಂಯೋಜನೆಯಾಗಿದೆ.
ಹಸಿರು ಎಲೆ ತರಕಾರಿಗಳನ್ನು ಸೇವಿಸಿ
ಹಸಿರು ಎಲೆಗಳ ತರಕಾರಿಗಳು ಸೇವಿಸುವುದರಿಂದ ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಕೆ ಅನ್ನು ಒಳಗೊಂಡಿರುತ್ತವೆ. ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವುದರ ಜೊತೆಗೆ ಬಲವನ್ನು ನೀಡುತ್ತದೆ. ಹಾಗಾಗಿ ಪಾಲಕ್ ಸೊಪ್ಪು, ಮೆಂತ್ಯ, ಸಾಸಿವೆ ಸೊಪ್ಪು ಮತ್ತು ಬ್ರೊಕೊಲಿಯಂತಹ ಆಹಾರವನ್ನು ಪ್ರತಿನಿತ್ಯ ನಿಮ್ಮ ಆಹಾರ ಪದಾರ್ಥಗಳಲ್ಲಿ ಜೋಡಿಸಿಕೊಳ್ಳಿ. ಇದು ಮೂಳೆಗಳನ್ನು ಬಲಪಡಿಸಲು ಸಹಾಯವಾಗುತ್ತದೆ.
ಒಣಗಿದ ಹಣ್ಣುಗಳು, ಬೀಜಗಳು ಮತ್ತು ಧಾನ್ಯಗಳು
ಒಣಗಿದ ಹಣ್ಣುಗಳ ಸೇವನೆಯು ದೇಹಕ್ಕೆ ಮೆಗ್ನೀಸಿಯಮ್, ರಂಜಕ ಮತ್ತು ಮೂಳೆಗಳನ್ನು ಬೆಂಬಲಿಸುವ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ. ಇವುಗಳಲ್ಲಿ ಫೈಬರ್ ಹೇರಳವಾಗಿರುವುದರಿಂದ ಜೀರ್ಣಕ್ರಿಯೆ ಸುಧಾರಿಸಿ, ಮಲಬದ್ಧತೆ ತಡೆಗಟ್ಟುತ್ತದೆ. ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತದೊತ್ತಡ ನಿಯಂತ್ರಿಸುತ್ತದೆ.
ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು (E, B) ಇಮ್ಯೂನಿಟಿ ಹೆಚ್ಚಿಸಿ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತವೆ. ಇದು ಮೆಗ್ನೀಷಿಯಂ, ಕ್ಯಾಲ್ಸಿಯಂ, ಕಬ್ಬಿಣದಿಂದ ಮೂಳೆಗಳು ಬಲಪಡುತ್ತವೆ, ರಕ್ತಹೀನತೆ ತಡೆಗಟ್ಟುತ್ತದೆ. ಆರೋಗ್ಯಕರ ಕೊಬ್ಬುಗಳು ತೂಕ ನಿಯಂತ್ರಣಕ್ಕೆ ಸಹಾಯ ಮಾಡುವುದರ ಜೊತೆಗೆ ಡಯಾಬಿಟೀಸ್ ನಿಯಂತ್ರಣಕ್ಕೆ ಫೈಬರ್ ಮತ್ತು ಕಡಿಮೆ GIಯನ್ನು ಒದಗಿಸುತ್ತದೆ. ಹಾಗಾಗಿ ಪ್ರತಿದಿನ ನಿಯಮಿತವಾಗಿ ಈ ಪದಾರ್ಥಗಳನ್ನು ಸೇವಿಸುವುದು ಉತ್ತಮ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.