- ಬೆಂಡೆಕಾಯಿಯ ಲೋಳೆಯಂತಹ ಅಂಶವು ರಕ್ತದಲ್ಲಿ ಸಕ್ಕರೆ ಏರಿಕೆಯನ್ನು ತಡೆಯುತ್ತದೆ
- ತೊಂಡೆಕಾಯಿ ಬೀಜಗಳು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ.
- ಬೆಂಡೆಕಾಯಿ ಮೂತ್ರಪಿಂಡದ ಆರೋಗ್ಯಕ್ಕೆ ಉತ್ತಮ, ತೊಂಡೆ ಹೃದಯದ ಆರೋಗ್ಯಕ್ಕೆ ಹಿತ
Bhindi vs Parwal: ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗುವುದರಿಂದ ಬರುವ ದೀರ್ಘಕಾಲದ ಕಾಯಿಲೆಯೇ ಮಧುಮೇಹ(Diabetics). ಇದನ್ನು ಸಕ್ಕರೆ ಕಾಯಿಲೆ ಎಂತಲೂ ಕರೆಯಲಾಗುತ್ತದೆ. ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಬಳಕೆಯಾಗದೆ ಇದ್ದಾಗ, ಬೊಜ್ಜು, ಆಧುನಿಕ ಜೀವನಶೈಲಿಯಿಂದಾಗಿ, ದೇಹಕ್ಕೆ ವ್ಯಾಯಾಮ ಇಲ್ಲದೆ ಇದು ಕಾಣಿಸಿಕೊಳ್ಳುತ್ತದೆ. ಭಾರತದ ಜನಸಂಖ್ಯೆಯ ಅನುಗುಣವಾಗಿ ಶೇ.11.4 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎನ್ನುವ ವರದಿ ರಿಲೀಸ್ ಆಗಿದೆ.
ಮೂರು ವಿಧದಲ್ಲಿ ಶುಗರ್ ಕಾಣಿಸಿಕೊಳ್ಳುತ್ತದೆ. ಒಂದು ಆಧುನಿಕ ಜೀವನ ಶೈಲಿಯಿಂದ ಬರುವುದು, ಎರಡನೇಯದಾಗಿ ಗರ್ಭಾವಸ್ಥೆ ಸಮಯದಲ್ಲಿ ಕಾಣಿಸಿಕೊಳ್ಳುವುದು, ಮೂರನೇಯದು ವಂಶಪಾರಂಪರ್ಯಾವಾಗಿ ಹುಟ್ಟಿದಾಗಿನಿಂದ ಮಧುಮೇಹ ಕಾಣಿಸಿಕೊಳ್ಳುತ್ತದೆ. ಎಂದಿಗೂ ಗುಣಪಡಿಸಲಾಗದ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯ. ನಾವು ದಿನವೂ ತಿನ್ನುವ ತರಕಾರಿಗಳನ್ನೇ ಇದಕ್ಕೆ ರಾಮಬಾಣ. ಹೌದು,ಬೆಂಡೆಕಾಯಿ ಮತ್ತು ತೊಂಡೆಕಾಯಿ ಮಧುಮೇಹಕ್ಕೆ ಬೆಸ್ಟ್ ಫುಡ್ ಎನ್ನುತ್ತಾರೆ. ಈ ಎರಡರಲ್ಲಿ ಯಾವುದು ಮಧುಮೇಹ ನಿಯಂತ್ರಣದಲ್ಲಿಡಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಬೆಂಡೆ ಕಾಯಿಯಿಂದಾಗುವ ಪ್ರಯೋಜನವೇನು?
ಬೆಂಡೆಕಾಯಿಯಲ್ಲಿರುವ ಜಿಗುಟುತನ ಅಥವಾ ಲೋಳೆಯಲ್ಲಿರುವ ಮ್ಯೂಸಿಲೆಜ್ ಗುಣವು, ದೇಹಕ್ಕೆ ಸಕ್ಕರೆ ಅಂಶ ತಲುಪಿಸುವುದನ್ನು ನಿಯಂತ್ರಿಸುತ್ತದೆ. ಬೆಂಡೆಕಾಯಿಯಲ್ಲಿರುವ ಕರಗುವ ನಾರು ಅಂಶವು ಕರುಳು ಸಕ್ಕರೆಯನ್ನು ಹೀರಿಕೊಳ್ಳೋದನ್ನು ನಿಧಾನಗೊಳಿಸುತ್ತದೆ. ಇದರಿಂದ ಊಟವಾದ ನಂತರ ರಕ್ತಕ್ಕೆ ಸಕ್ಕರೆ ಪ್ರಮಾಣವು ತ್ವರಿತವಾಗಿ ಏರಿಕೆಯಾಗೋದಿಲ್ಲ. ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಕಿಡ್ನಿ ಸಮಸ್ಯೆ ಕಾಡುತ್ತದೆ. ಬೆಂಡೆಕಾಯಿಯಲ್ಲಿರುವ Anti Accident ಅಂಶವು ಕಿಡ್ನಿಗೆ ಉಂಟಾಗುವ ಹಾನಿಯನ್ನು ತಡೆಹಿಡಿಯುತ್ತದೆ.
ತೊಂಡೆಕಾಯಿಯಿಂದಾಗುವ ದೇಹಕ್ಕಾಗುವ ಲಾಭಗಳೇನು?
ತೊಂಡೆಕಾಯಿಯಲ್ಲಿ ಕಡಿಮೆ ಕ್ಯಾಲೋರಿಯಿದೆ. ಇದು ಲಘುತ್ವವನ್ನು ನೀಡುತ್ತದೆ. ಇದರ ಬೀಜದಲ್ಲಿರುವ ಸಂಯುಕ್ತಗಳು ಇನ್ಸುಲಿನ್ ದೇಹದಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿ. ಜೊತೆಗೆ ರಕ್ತದಲ್ಲಿನ ಶೇ.14ರಷ್ಟು ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಸಂಶೋದಕರು. ತೊಂಡೆಕಾಯಿಯಲ್ಲಿರುವ ಕಡಿಮೆ ಕ್ಯಾಲೋರಿಯು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೊಂಡೆ ವರ್ಸಸ್ ಬೆಂಡೆಕಾಯಿ ಎರಡರಲ್ಲೂ ಯಾವುದು ಬೆಸ್ಟ್?
ತೊಂಡೆಕಾಯಿ ಮತ್ತು ಬೆಂಡೆಕಾಯಿ ತರಕಾರಿಯಲ್ಲಿ ಯಾವುದು ಬೆಸ್ಟ್ ಎಂದು ಹೇಳೋದು ಸಾಧ್ಯವಿಲ್ಲ. ಆದರೆ, ಎರಡೂ ತರಕಾರಿ ದೇಹದ ಆರೋಗ್ಯವನ್ನು ಸಂಪನ್ನವಾಗಿ ಮಾಡುತ್ತದೆ. ಇವು ವಿಭಿನ್ನ ರೀತಿಯಲ್ಲಿ ದೇಹಕ್ಕೆ ಆರೋಗ್ಯವನ್ನು ನೀಡುತ್ತದೆ. ಎರಡು ಪೌಷ್ಠಿಕಾಂಶಗಳ ಗಣಿ ಎನ್ನುತ್ತಾರೆ ವೈದ್ಯರು.
ನಿಮಗೆ ಊಟವಾದ ತಕ್ಷಣ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಮಸ್ಯೆ ಇದ್ದರೆ ಅಥವಾ ಕಿಡ್ನಿ ಆರೋಗ್ಯಕ್ಕೆ ಒತ್ತು ನೀಡಬೇಕಿದ್ದರೆ ಬೆಂಡೆಕಾಯಿ ಉತ್ತಮ. ನೀವು ತೂಕ ಇಳಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಬಯಸಿದರೆ ತೊಂಡೆಕಾಯಿ ಸೂಕ್ತ ತರಕಾರಿ.
ಹೇಗೆ ತಿನ್ಬೇಕು?
ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿದು ತಿನ್ನುವುದರಿಂದ ಅದರ ಪೋಷಕಾಂಶಗಳು ನಾಶವಾಗುತ್ತವೆ. ಹಬೆಯಲ್ಲಿ ಬೇಯಿಸಿದ ಅಥವಾ ಕಡಿಮೆ ಎಣ್ಣೆಯಲ್ಲಿ ಮಾಡಿದ ಪಲ್ಯಗಳು ಹೆಚ್ಚು ಗುಣಕಾರಿ, (ಏಜೆನ್ಸೀಸ್).
ತರಕಾರಿಗಳನ್ನು ಮಾತ್ರ ಸೇವನೆ ಮಾಡುವುದು ಔಷಧಿಗಳಿಗೆ ಪರ್ಯಾಯ ಮಾರ್ಗವಲ್ಲ. ಆಹಾರದಲ್ಲಿ ದೊಡ್ಡ ಬದಲಾವಣೆ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.