Banana vs Date (ಸಾಂದರ್ಭಿಕ ಚಿತ್ರ)
Banana vs Date: ಪ್ರತಿಯೊಬ್ಬ ಮನುಷ್ಯನಿಗೂ ಬೆಳಗಿನ ಉಪಹಾರವು ದಿನದ ಅತ್ಯಂತ ಪ್ರಮುಖ ಆಹಾರವಾಗಿದೆ. ಖಾಲಿ ಹೊಟ್ಟೆಯಲ್ಲಿ ನಾವು ಸೇವಿಸುವ ಮೊದಲ ಆಹಾರವು ನಮ್ಮ ಇಡೀ ದಿನದ ಚಟುವಟಿಕೆ ಮತ್ತು ಆರೋಗ್ಯವನ್ನು ನಿರ್ಧರಿಸುತ್ತದೆ. ಅದರಂತೆ, ನೀವು ಆಯ್ಕೆ ಮಾಡಿಕೊಳ್ಳುವ ಆಹಾರಗಳು ಜೀರ್ಣಕ್ರಿಯೆ, ಶಕ್ತಿಯ ಮಟ್ಟಗಳು ಮತ್ತು ಒಟ್ಟಾರೆ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಆದಾಗ್ಯೂ, ಬಾಳೆಹಣ್ಣು ಮತ್ತು ಖರ್ಜೂರ ಎರಡೂ ಪೌಷ್ಟಿಕ ಹಣ್ಣುಗಳಾಗಿವೆ. ಈ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಇದು ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಬಾಳೆಹಣ್ಣು ಪೊಟ್ಯಾಸಿಯಮ್, ವಿಟಮಿನ್ ಬಿ6, ಮೆಗ್ನೀಸಿಯಮ್ ಮತ್ತು ಕರಗುವ ನಾರಿನಂತಹ ಪೌಷ್ಟಿಕಾಂಶಗಳನ್ನು ಹೊಂದಿದ್ದರೆ, ಖರ್ಜೂರವು ನೈಸರ್ಗಿಕ ಸಕ್ಕರೆಗಳು, ಕಬ್ಬಿಣ, ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿರುತ್ತದೆ. ಇದು ಜೀರ್ಣಿಸಿಕೊಳ್ಳಲು ಕಷ್ಟಕರವಾಗುತ್ತದೆ.
ಬಾಳೆಹಣ್ಣುಗಳು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಬಾಳೆಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳ ಸೇವನೆಯು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆಯ ಒಳಪದರಕ್ಕೆ ಮೃದುವಾಗಿರುತ್ತದೆ. ಇದು ಕರಗುವ ಫೈಬರ್ ಪೆಕ್ಟಿನ್ ಕರುಳಿನ ಚಲನೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ತುಂಬಾ ಸಮಯದವರೆಗೆ ಹೊಟ್ಟೆ ತುಂಬಿದ ಹಾಗೆ ಮಾಡುವುದರ ಜೊತೆಗೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುವವರು ಬೆಳಿಗ್ಗೆ ಬಾಳೆ ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
ಖರ್ಜೂರವು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಹೆಚ್ಚಿನ ಫೈಬರ್ ಅಂಶದಿಂದಾಗಿ, ಖರ್ಜೂರವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಇದರಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವುದರಿಂದ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟವು ಹೆಚ್ಚಾಗಬಹುದು. ಅನೇಕರಿಗೆ ಇದನ್ನು ಸೇವಿಸಿದ ನಂತರ, ಹೊಟ್ಟೆ ಭಾರ, ಆಮ್ಲೀಯತೆಯಂತಹ ಸಮಸ್ಯೆಯನ್ನು ಅನುಭವಿಸಬಹುದು.
ರಕ್ತದಲ್ಲಿನ ಸಕ್ಕರೆ ಮತ್ತು ಶಕ್ತಿಯ ಮೇಲೆ ಪರಿಣಾಮ
ಬಾಳೆಹಣ್ಣುಗಳು ಮಧ್ಯಮ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ತ್ವರಿತ ಸಕ್ಕರೆ ಇಲ್ಲದೆ ಸ್ಥಿರವಾದ ಶಕ್ತಿಯನ್ನು ನೀಡುತ್ತವೆ. ಖರ್ಜೂರವು ತ್ವರಿತ ಶಕ್ತಿಯನ್ನು ಒದಗಿಸುವಂತೆ ಮಾಡುತ್ತದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದು ದೇಹದಲ್ಲಿರುವ ಶಕ್ತಿಯನ್ನು ಕಕಸಿದುಕೊಳ್ಳಬಹುದು.
ಖಾಲಿ ಹೊಟ್ಟೆಯಲ್ಲಿ ಯಾವುದು ಉತ್ತಮ?
ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯದ ದೃಷ್ಟಿಕೋನದಿಂದ ನೋಡುವುದಾದರೆ, ಬಾಳೆಹಣ್ಣುಗಳನ್ನು ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಉತ್ತಮವಾಗಿರುತ್ತದೆ. ಇದು ಹೊಟ್ಟೆಯನ್ನು ಹಗುರವಾಗಿರಿಸುತ್ತದೆ. ಹಾಗೆಯೇ ಜೀರ್ಣಕ್ರಿಯೆಯ ಒತ್ತಡವನ್ನು ಕಡಿಮೆ ಮಾಡಲು, ಖರ್ಜೂರವನ್ನು ಸಣ್ಣ ಪ್ರಮಾಣದಲ್ಲಿ, ಹಾಲು ಅಥವಾ ನೀರಿನೊಂದಿಗೆ ಬೆರೆಸಿ ಸೇವಿಸುವುದು ಉತ್ತಮ.
ಯಾವುದನ್ನು ಆರಿಸಬೇಕು?
ಜೀರ್ಣಕಾರಿ ಸಮಸ್ಯೆಗಳು, ಆಮ್ಲೀಯತೆ ಮತ್ತು ಐಬಿಎಸ್ನಿಂದ ಬಳಲುತ್ತಿರುವವರು ಬೆಳಿಗ್ಗೆ ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಆದಾಗ್ಯೂ, ಮಲಬದ್ಧತೆ ಅಥವಾ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರು ಖರ್ಜೂರ ಸೇವಿಸಿರಿ. ಇವು ಆರೋಗ್ಯವನ್ನು ಕಾಪಾಡುತ್ತವೆ.
ಎರಡೂ ಹಣ್ಣುಗಳು ಆರೋಗ್ಯಕರವಾಗಿವೆ, ಆದರೆ , ಜೀರ್ಣಕ್ರಿಯೆ ಮತ್ತು ಖಾಲಿ ಹೊಟ್ಟೆಯಲ್ಲಿ ನಿರಂತರ ಶಕ್ತಿಗಾಗಿ, ಬಾಳೆಹಣ್ಣುಗಳು ಖರ್ಜೂರಕ್ಕಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಹಾಗಾಗಿ ದೇಹದಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾದರೆ, ಈ ರೀತಿಯ ಹಣ್ಣುಗಳ ಆಯ್ಕೆ ಮಾಡಿಕೊಳ್ಳಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.