Back pain ಸಾಂದರ್ಭಿಕ ಚಿತ್ರ
- ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಎಲ್ಲರಲ್ಲೂ ಸಾಮಾನ್ಯವಾಗಿರುವಂತಹದು
- ಯಾರೂ ಬೆನ್ನು ನೋವನ್ನು ಗಂಭೀರವಾಗಿ ಪರಿಗಣಿಸಲು ಬಯಸುವುದಿಲ್ಲ
- ಹಲವರು ಬೆನ್ನು ನೋವು ತಪ್ಪಾಗಿ ಕುಳಿತುಕೊಳ್ಳುವುದರಿಂದ ಆಗುತ್ತದೆ ಎಂದು ನಂಬಿರುತ್ತಾರೆ
- ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಪ್ರಮುಖ ಕಾರಣ
Back pain: ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಎಲ್ಲರಲ್ಲೂ ಸಾಮಾನ್ಯವಾಗಿರುವಂತಹದು. ಇದನ್ನು ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲು ಬಯಸುವುದಿಲ್ಲ. ಅನೇಕ ಜನರು ಬೆನ್ನು ನೋವು ತಪ್ಪಾಗಿ ಕುಳಿತುಕೊಳ್ಳುವುದು ಅಥವಾ ತಪ್ಪಾಗಿ ಮಲಗುವುದರಿಂದ ಉಂಟಾಗುತ್ತದೆ ಎಂದು ಭಾವಿಸುತ್ತಾರೆ.
ಆದರೆ ಸಾಕಷ್ಟು ವಿಶ್ರಾಂತಿ ಮತ್ತು ಔಷಧಿಗಳ ನಂತರವೂ ಬೆನ್ನು ನೋವು ಕಡಿಮೆಯಾಗದಿದ್ದರೆ, ಅದು ಕಳವಳಕಾರಿ ವಿಷಯವಾಗಿದೆ. ಅಂತಹ ಸಂದರ್ಭಗಳಲ್ಲಿ, ಬೆನ್ನು ನೋವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು ಎಂದು ಶಸ್ತ್ರಚಿಕಿತ್ಸಕ ಡಾ. ನೆವಿಲ್ಲೆ ಮೆನೆಜೆಸ್ ಅಭಿಪ್ರಾಯ ಪಟ್ಟಿದ್ದಾರೆ.
ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಆರನೇ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಈ ಸಮಸ್ಯೆಯನ್ನು ನಿರ್ಲಕ್ಷಿಸಲು ಯಾವುದೇ ಮಾರ್ಗವಿಲ್ಲ. ಮತ್ತೊಂದು ವಿಷಯವೆಂದರೆ ಈ ರೋಗವು ಹೆಚ್ಚಾಗಿ ತಡವಾಗಿ ಪತ್ತೆಯಾಗುತ್ತದೆ. ಈ ಕ್ಯಾನ್ಸರ್ ದೇಹದಲ್ಲಿ ನಿಧಾನವಾಗಿ ಬೆಳೆಯಲು ಆರಂಭಿಸುತ್ತದೆ. ಪ್ರಾರಂಭದಲ್ಲಿ ಇದರ ಲಕ್ಷಣಗಳು ಸುಲಭವಾಗಿ ಗೋಚರವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಬೆನ್ನು ನೋವಿಗೆ ಕಾರಣವೇನು?
ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಬೆನ್ನು ನೋವಿಗೆ ಕಾರಣವಾಗಬಹುದು. ಹೇಗಂತೀರಾ? ಇದು ಗೆಡ್ಡೆ ಬೆನ್ನು ಮೂಳೆಯ ಬಳಿಯ ನರಗಳ ಮೇಲೆ ಒತ್ತಡವನ್ನು ಹೇರಿ, ಸುತ್ತಮುತ್ತಲಿನ ಅಂಗಾಂಶಗಳಿಗೆ ಹರಡುತ್ತದೆ. ಮೇದೋಜೀರಕ ಗ್ರಂಥಿಯು ಹೊಟ್ಟೆಯ ಆಳದಲ್ಲಿದೆ ಮತ್ತು ಸೆಲಿಯಾಕ್ ಪ್ಲೆಕ್ಸಸ್‌ನಂತಹ ದೊಡ್ಡ ಹತ್ತಿರದ ನರಗಳನ್ನು ಸಂಕುಚಿತಗೊಳಿಸುತ್ತದೆ. ಇದು ನರಗಳ ಮೇಲೆ ಒತ್ತಿ, ಬೆನ್ನು ನೋವನ್ನು ಉಂಟು ಮಾಡುತ್ತದೆ.
ದೊಡ್ಡ ಗೆಡ್ಡೆಗಳು ಹೊಟ್ಟೆಯ ಹಿಂದಿರುವ ಇತರ ಅಂಗಗಳು ಮತ್ತು ಅಂಗಾಂಶಗಳ ಮೇಲೆ ಒತ್ತಡ ಹೇರುತ್ತವೆ. ಇದರಿಂದ ಬೆನ್ನು ನೋವು ಸಂಭವಿಸಬಹುದು. ಈ ನೋವು ಸಾಮಾನ್ಯವಾಗಿ ಕ್ಯಾನ್ಸರ್ ಹೊಟ್ಟೆಯ ಹಿಂದಿರುವ ರೆಟ್ರೊಪೆರಿಟೋನಿಯಲ್ ಜಾಗಕ್ಕೆ ಹರಡಿದೆ ಎಂದು ನಿಮಗೆ ಸೂಚನೆ ನೀಡುತ್ತದೆ. ಈ ನೋವು ಸಾಮಾನ್ಯವಾಗಿ ಹೊಟ್ಟೆಯ ಮೇಲ್ಭಾಗದಲ್ಲಿ ಪ್ರಾರಂಭವಾಗಿ ಬದಿಗೆ ಅಥವಾ ಬೆನ್ನಿಗೆ ಹರಡುತ್ತದೆ ಎಂದು ಡಾ. ಮೆನೆಜೆಸ್ ಹೇಳುತ್ತಾರೆ, ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ಯಾವುದೇ ನೋವು ಕಾಣಿಸಿಕೊಳ್ಳದೇ ಇರಬಹುದು.
ಕ್ಯಾನ್ಸರ್ ಸಂಬಂಧಿತ ಬೆನ್ನು ನೋವು ಹೇಗಿರುತ್ತದೆ?
ಡಾ. ಮೆನೆಜಸ್ ಅವರ ಪ್ರಕಾರ, ನೋವು ಹೊಟ್ಟೆಯ ಮೇಲ್ಭಾಗದಲ್ಲಿ ಪ್ರಾರಂಭವಾಗಿ ಬೆನ್ನಿಗೆ ಹರಡುತ್ತದೆ. ಈ ನೋವು ಸಾಮಾನ್ಯವಾಗಿ ಸೌಮ್ಯದಿಂದ ಮಧ್ಯಮವಾಗಿರುತ್ತದೆ ಮತ್ತು ಕೆಲವೊಮ್ಮೆ ಹೆಚ್ಚಾಗುವುದು ಕಡಿಮೆಯಾಗುತ್ತದೆ. ಕೆಲವೊಮ್ಮೆ ಮಲಗುವುದರಿಂದಲೂ ಈ ನೋವು ಹೆಚ್ಚಾಗುತ್ತದೆ. ಕೆಲವೊಮ್ಮೆ ಮುಂದಕ್ಕೆ ಬಾಗಿದಾಗ ನೋವು ನಿವಾರಣೆಯಾಗುತ್ತದೆ. ಕೆಲವೊಮ್ಮೆ ನೋವು ಇದ್ದಕ್ಕಿದ್ದಂತೆ ತೀವ್ರವಾಗಬಹುದು.
ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಇತರ ಲಕ್ಷಣಗಳು
* ಕಾಮಾಲೆ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು
* ಹೊಟ್ಟೆಯ ಮೇಲ್ಭಾಗದಲ್ಲಿ ನೋವು
* ಹೊಟ್ಟೆಯಲ್ಲಿ ಅನಿಲ ಅಥವಾ ಉಬ್ಬುವುದು
* ಹಠಾತ್ ತೂಕ ಕಳೆದುಕೊಳ್ಳುವುದು
ನಿರಂತರ ಬೆನ್ನು ನೋವನ್ನು ನಿರ್ಲಕ್ಷಿಸಬಾರದು. ವಿಶೇಷವಾಗಿ ಔಷಧಿ ಮತ್ತು ವಿಶ್ರಾಂತಿಯಿಂದ ಅದು ಕಡಿಮೆಯಾಗದಿದ್ದರೆ, ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕವಾಗಿರುತ್ತದೆ. ಆದಾಗ್ಯೂ, ಎಲ್ಲಾ ಬೆನ್ನು ನೋವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಸಂಕೇತವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಅನೇಕ ಸಂದರ್ಭಗಳಲ್ಲಿ, ಬೆನ್ನು ನೋವು ಸರಳ ಕಾರಣಗಳಿಂದ ಕೂಡ ಉಂಟಾಗಬಹುದು. ಆದಾಗ್ಯೂ, ಜಾಗರೂಕರಾಗಿರುವುದು ಮತ್ತು ತಕ್ಷಣ ಪರೀಕ್ಷೆಗೆ ಒಳಗಾಗುವುದು ಬಹಳ ಮುಖ್ಯ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.