ಬೆಂಗಳೂರು: ನಿದ್ರಾಹೀನತೆ(insomnia)ಅಥವಾ ಸರಿಯಾಗಿ ನಿದ್ರೆ ಬಾರದಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಂತೆ ಕಂಡರೂ, ಇದು ದೀರ್ಘಕಾಲದಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ರಾತ್ರಿ ಪೂರ್ತಿ ಹಾಸಿಗೆಯಲ್ಲಿದ್ದರೂ ಬೆಳಿಗ್ಗೆ ಎದ್ದಾಗದಣಿದ ಅನುಭವವಾಗುತ್ತಿದ್ದರೆ ಅಥವಾ ಕೆಲಸದಲ್ಲಿ ಗಮನಹರಿಸಲು ಸಾಧ್ಯವಾಗದಿದ್ದರೆ, ನೀವು ನಿದ್ರಾಹೀನತೆಯಬಗ್ಗೆ ಎಚ್ಚರ ವಹಿಸಬೇಕಾದ ಸಮಯ ಬಂದಿದೆ ಎಂದರ್ಥ.
ಇದು ಕೇವಲ ನಿದ್ರಿಸಲುಕಷ್ಟವಾಗುವುದು ಮಾತ್ರವಲ್ಲ, ನಿದ್ರೆಯ ನಡುವೆ ಪದೇ ಪದೇ ಎಚ್ಚರಗೊಳ್ಳುವುದು ಅಥವಾ ಬೆಳಿಗ್ಗೆ ಬೇಗಎಚ್ಚರಗೊಂಡು ಮತ್ತೆ ನಿದ್ರಿಸಲು ಸಾಧ್ಯವಾಗದಿರುವುದನ್ನೂ ಒಳಗೊಂಡಿರುತ್ತದೆ. ಇದು ವ್ಯಕ್ತಿಯ ಶಕ್ತಿ,ಮನಸ್ಥಿತಿ ಮತ್ತು ಜೀವನದ ಗುಣಮಟ್ಟವನ್ನು ಕುಂದಿಸುತ್ತದೆ.
ನಿದ್ರೆಯಕೊರತೆಗೆ ಕಾರಣಗಳೇನು?
ಮಾಯೋಕ್ಲಿನಿಕ್ಪ್ರಕಾರ, ಒಬ್ಬ ವಯಸ್ಕನಿಗೆ ದಿನಕ್ಕೆ 7 ರಿಂದ 9 ಗಂಟೆಗಳ ನಿದ್ರೆ ಅತ್ಯಗತ್ಯ. ನಿದ್ರೆಯ ಸಮಸ್ಯೆಗಳುಮುಖ್ಯವಾಗಿ ಈ ಕೆಳಗಿನ ಕಾರಣಗಳಿಂದ ಉಂಟಾಗುತ್ತವೆ.
ಒತ್ತಡ ಮತ್ತುಆತಂಕ: ಕೆಲಸದ ಒತ್ತಡ ಅಥವಾವೈಯಕ್ತಿಕ ಜೀವನದ ಭಾವನಾತ್ಮಕ ಘಟನೆಗಳು ನಿದ್ರೆಗೆ ಅಡ್ಡಿಪಡಿಸುತ್ತವೆ.
ಆರೋಗ್ಯ ಸಮಸ್ಯೆಗಳು: ಆಸ್ತಮಾ, ಥೈರಾಯ್ಡ್, ಆಮ್ಲೀಯತೆ(Acidity), ದೀರ್ಘಕಾಲದ ನೋವು ಅಥವಾ 'ಸ್ಲೀಪ್ ಅಪ್ನಿಯಾ' ನಂತಹ ಸಮಸ್ಯೆಗಳು.
ಔಷಧಿಗಳ ಪ್ರಭಾವ: ಕೆಲವು ಕಾಯಿಲೆಗಳಿಗೆ ತೆಗೆದುಕೊಳ್ಳುವ ಔಷಧಿಗಳಅಡ್ಡಪರಿಣಾಮವಾಗಿ ನಿದ್ರೆ ಕಡಿಮೆಯಾಗಬಹುದು.
ವಯಸ್ಸು: ವಯಸ್ಸಾದಂತೆ ನಿದ್ರೆಯ ಪ್ರಮಾಣ ನೈಸರ್ಗಿಕವಾಗಿಕಡಿಮೆಯಾಗುತ್ತದೆ.
ದೀರ್ಘಕಾಲದನಿದ್ರಾಹೀನತೆ
ನಿದ್ರೆಯ ಸಮಸ್ಯೆಗಳು3 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಅದನ್ನು 'ದೀರ್ಘಕಾಲದ ನಿದ್ರಾಹೀನತೆ' ಎಂದುಕರೆಯಲಾಗುತ್ತದೆ. ಇದು ಸ್ವತಃ ಒಂದು ಕಾಯಿಲೆಯಾಗಿರಬಹುದು ಅಥವಾ ಇತರ ದೈಹಿಕ ಸಮಸ್ಯೆಗಳ ಸಂಕೇತವಾಗಿರಬಹುದು.
ವೈದ್ಯರನ್ನುಯಾವಾಗ ಭೇಟಿ ಮಾಡಬೇಕು?
ನಿಮ್ಮ ನಿದ್ರೆಯಸಮಸ್ಯೆ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.ಈ ಕೆಳಗಿನ ಲಕ್ಷಣಗಳಿದ್ದರೆ ಎಚ್ಚರವಹಿಸಿ.
ಹಗಲಿನಲ್ಲಿ ಅತಿಯಾದಆಯಾಸ ಮತ್ತು ಕಿರಿಕಿರಿ.
ಕೆಲಸದಲ್ಲಿ ಪದೇಪದೇ ತಪ್ಪುಗಳನ್ನು ಮಾಡುವುದು ಅಥವಾ ಏಕಾಗ್ರತೆಯ ಕೊರತೆ.
ಖಿನ್ನತೆ ಅಥವಾಅತಿಯಾದ ಚಿಂತನೆ,(ಏಜೆನ್ಸೀಸ್).