ಸಾಂದರ್ಭಿಕ ಚಿತ್ರ 
ಆರೋಗ್ಯ

ನೀವು ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಾ? ಈ ಸಮಸ್ಯೆ ಇಗ್ನೋರ್ ಮಾಡಿದ್ರೆ ಏನಾಗುತ್ತೆ ಗೊತ್ತಾ? Urinary Tract Infection

Urinary Tract Infection: ಮೂತ್ರ ಮಾಡುವುದು ಒಂದು ಸಹಜ ಪ್ರಕ್ರಿಯೆ. ಕೆಲವೊಮ್ಮೆ ನಾವು ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸುತ್ತೇವೆ. ಒಮ್ಮೊಮ್ಮೆ ಈ ರೀತಿ ಮಾಡುವುದನ್ನು ನಾವು ಅಪಾಯಕಾರಿ ಎಂದು ಭಾವಿಸುತ್ತೇವೆ. ಆದರೆ, ಈ ಅಭ್ಯಾಸವು ಅಪಾಯಕಾರಿಯಲ್ಲ ಎಂದು ವೈದ್ಯರು ವಿವರಿಸಿದ್ದಾರೆ. ಆದರೆ, ಪ್ರತಿನಿತ್ಯ ಈ ರೀತಿಯ ಸಮಸ್ಯೆ ಕಂಡುಬಂದರೆ, ಅಥವಾ ಮೂತ್ರ ವಿಸರ್ಜಿಸುವಾಗ ನೋವು, ರಕ್ತ, ತೂಕ ನಷ್ಟ ಅಥವಾ ಮಧುಮೇಹದಂತಹ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮುಖ್ಯವಾಗಿರುತ್ತದೆ.
ಕೆಲವೊಮ್ಮೆ ಹೊರಗಡೆ ಹೋದಾಗ, ಪಾರ್ಟಿ ಮಾಡಿದಾಗ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿದಾಗ ಹೆಚ್ಚು ಮೂತ್ರ ವಿಸರ್ಜನೆ ಮಾಡುವುದು ಸಹಜ. ಆದರೆ, ಈ ಯಾವುದೇ ಕಾರಣಗಳಿಲ್ಲದೇ, ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡರೆ, ಇದು ದೇಹದ ಸಮಸ್ಯೆಯಾಗಿರಬಹುದು. ಹಾಗಿದ್ದರೆ, ಈ ಅಭ್ಯಾಸವು ಯಾವ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂದು ನೋಡೋಣ ಬನ್ನಿ...

ಮೂತ್ರನಾಳದ ಸೋಂಕು

ಕೆಲವೊಮ್ಮೆ ಮೂತ್ರನಾಳದ ಸೋಂಕುಗಳು (UTIs), ಮಧುಮೇಹ, ಪುರುಷರಲ್ಲಿ ಹಿಗ್ಗಿದ ಪ್ರಾಸ್ಟೇಟ್ ಗ್ರಂಥಿ, ಅತಿಯಾದ ಮೂತ್ರಕೋಶ, ಗರ್ಭಧಾರಣೆ ಮತ್ತು ಕೆಲವು ಔಷಧಿಗಳು ಪದೇ ಪದೇ ಮೂತ್ರ ಮಾಡುವಂತೆ ಮಾಡುತ್ತದೆ. ಹಾಗಾಗಿ ನೀವೇನಾದರೂ, ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇದರ ಬಗ್ಗೆ ಗಮನ ಹರಿಸುವುದು ಉತ್ತಮ.

ಮೂತ್ರಪಿಂಡದ ಸಮಸ್ಯೆ ಸಂಕೇತ

ಮೂತ್ರ ವಿಸರ್ಜನೆ ವೇಳೆ ನಿಮ್ಮ ಮುಖ ಅಥವಾ ಕಾಲುಗಳಲ್ಲಿ ಊತ, ನೊರೆ ರೂಪದಲ್ಲಿ ಮೂತ್ರ, ಮೂತ್ರದಲ್ಲಿ ರಕ್ತ ಸೋರುವುದು, ಸುಡುವಿಕೆ, ನೋವು, ಜ್ವರ, ತೀವ್ರ ಆಯಾಸದಂತಹ ಲಕ್ಷಣಗಳು ಕಂಡುಬಂದರೆ, ಅದು ಮೂತ್ರಪಿಂಡದ ಸಮಸ್ಯೆಯ ಸಂಕೇತವಾಗಿರಬಹುದು.

ಮೂತ್ರ ವಿಸರ್ಜನೆಗೆ ತೊಂದರೆ

ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಮೂತ್ರದಲ್ಲಿ ರಕ್ತ, ಮೂತ್ರ ವಿಸರ್ಜಿಸುವಾಗ ಉರಿ ಅಥವಾ ನೋವು, ಜ್ವರ ಅಥವಾ ಶೀತ, ನಿಮ್ಮ ಬೆನ್ನಿನ ಕೆಳಭಾಗ ಅಥವಾ ಬದಿಯಲ್ಲಿ ನೋವು, ಬಲವಾದ ವಾಸನೆ ಕಂಡುಬಂದರೆ ಈ ಸಮಸ್ಯೆಗೆ ಔಷಧ ತೆಗೆದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ, ಅಪಾಯ ಹೆಚ್ಚಾಗುವ ಸಂಭವ ಜಾಸ್ತಿ ಇರುತ್ತದೆ.

ತೂಕ ನಷ್ಟ

ಪದೇ ಪದೇ ಮೂತ್ರ ಮಾಡುವುದರಿಂದ ಹಠಾತ್​ ತೂಕ ನಷ್ಟ ಕಂಡುಬಂದರೆ, ಅಥವಾ ಅತಿಯಾದ ಬಾಯಾರಿಕೆ, ಪುರುಷರಲ್ಲಿ, ಮೂತ್ರ ವಿಸರ್ಜನೆಯ ತೊಂದರೆ ಅಥವಾ ತೆಳುವಾದ ಹರಿವು ಪ್ರಾಸ್ಟೇಟ್ ಸಮಸ್ಯೆಗಳು ಇವು ತೂಕವನ್ನು ಕಡಿಮೆ ಮಾಡುವಂತೆ ಮಾಡುತ್ತದೆ. ಹಾಗಾಗಿ ಎಚ್ಚರಿಕೆ ವಹಿಸುವುದು ಉತ್ತಮ.

ಮೂತ್ರ ವಿಸರ್ಜನೆ ಅಪಾಯಕಾರಿಯಲ್ಲ

ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಯಾವಾಗಲೂ ಅಪಾಯಕಾರಿಯಲ್ಲ. ಆದಾಗ್ಯೂ, ಯಾವುದೇ ವ್ಯಕ್ತಿಯು ನಿರಂತರವಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ನೋವು, ರಕ್ತ, ತೂಕ ನಷ್ಟ, ಮಧುಮೇಹ ಸಮಸ್ಯೆಗಳು ಕಂಡುಬಂದರೆ, ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ. ಇಲ್ಲದಿದ್ದರೆ, ಮೂತ್ರಪಿಂಡದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.