Benefits Of Poppy Seeds how to make payasam
- ಹಬ್ಬಕ್ಕೆ ರುಚಿಯಾದ ಗಸಗಸೆ ಪಾಯಸ ಮಾಡೋದು ಹೇಗೆ?
- ಗಸಗಸೆ ಪಾಯಸದಿಂದ ಸಿಗುತ್ತೆ ಸಾಕಷ್ಟು ಆರೋಗ್ಯ ಲಾಭ ಗೊತ್ತಾ?
- ನಿದ್ರಾ ಹೀನತೆ, ಬಾಡಿ ಹೀಟ್ ತಡೆಗೆ ಸಹಕಾರಿ ಈ ಸಣ್ಣ ಬೀಜಗಳು
Benefits Of Poppy Seeds how to make payasam:
ಉತ್ತಮ ನಿದ್ರೆ, ಜೀರ್ಣಕ್ರಿಯೆ ಹಾಗೂ ಬಾಡಿ ಹೀಟ್ ಕಡಿಮೆ ಮಾಡಲು ಸಹಕಾರಿಯಾಗಿರುವ ಈ ಗಸಗಸೆ
ಲ್ಲಿ ಖನಿಜ ಮತ್ತು ನಾರಿನಾಂಶ ಹೇರಳವಾಗಿದೆ. ಇದರಲ್ಲಿರುವ ಮೆಗ್ನೀಶಿಯಮ್ ನಿಮ್ಮ ಮನಸ್ಸನ್ನು ಶಾಂತಿಗೊಳಿಸಿ, ನಿದ್ರಾಹೀನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಇದರಲ್ಲಿರುವ ಕ್ಯಾಲ್ಶಿಯಂ ಮತ್ತು ಪಾಸ್ಪರಸ್ ಅಂಶವು ಮೂಳೆಯನ್ನು ಬಲಗೊಳಿಸುತ್ತದೆ. ಅಲ್ಲದೇ ನಿಮ್ಮ ದೇಹದ ಉಷ್ಣಾಂಶ ಹೆಚ್ಚಾದಾಗ ಅದರ ಇಳಿಕೆಗೆ ಗಸಗಸೆ ಸಹಾಯ ಮಾಡುತ್ತದೆ. ಇಷ್ಟೆಲ್ಲ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಗಸಗಸೆಯಿಂದ ಏನೆಲ್ಲ ಅಡುಗೆ ತಯಾರಿ ಮಾಡಬಹುದು. ಇದರ ಪಾಯಸ ಹೇಗೆ ಮಾಡುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಏನೆಲ್ಲ ಆರೋಗ್ಯ ಪ್ರಯೋಜನವಿದೆ?
ಒತ್ತಡ ಹಾಗೂ ಮಾನಸಿಕ ಸಮಸ್ಯೆ, ಸುತ್ತಮುತ್ತಲಿನ ಪರಿಸರದಿಂದ ಕಾಡುವ ಸಮಸ್ಯೆಯಿಂದ ದೇಹದ ಉಷ್ಣಾಂಶ ಕಾಡುತ್ತದೆ. ಹೀಗಾಗಿ ಇದನ್ನು ದೂರ ಮಾಡಿಕೊಳ್ಳಲು ಗಸಗಸೆ ಪಾಯಸ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ
ಗಸಗಸೆ ಪಾಯಸ ಮಾಡೋದು ಹೇಗೆ?
ಬೇಕಾಗುವ ಸಾಮಗ್ರಿ
- ಗಸಗಸೆ 2 ಚಮಚ
- ಕೊಬ್ಬರಿ 2 1/2 ಚಮಚ
- ಏಲಕ್ಕಿ -2 ಇರಲಿ
- ಬೆಲ್ಲ ರುಚಿಗೆ ತಕ್ಕಷ್ಟು
- ಹಾಲು 1 ಲೋಟ ಬಳಕೆ ಮಾಡಿಕೊಳ್ಳಿ
- ಕೊಂಚ ಉಪ್ಪು ಹಾಕಿ
ಮೊದಲು ಗಸಗಸೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ಆನಂತರ ನೀರಿನಲ್ಲಿ ಗಸಗಸೆ ಮತ್ತು ಕೊಬ್ಬರಿಯನ್ನು ನೆನೆಯಲು ಬಿಡಿ. ಎರಡು ಚೆನ್ನಾಗಿ ನೆಂದ ಬಳಿಕ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು ಸಣ್ಣದಾಗಿ ಕುದಿಯಲು ಇಡಿ. ಇದು ಕುದಿಯುವಾಗಲೇ, ಏಲಕ್ಕಿ, ಬೆಲ್ಲ, ಚಿಟಿಕೆ ಉಪ್ಪು ಹಾಕಿ ಕಡಿಮೆ ಫ್ಲೇಮ್ನಲ್ಲಿ ಕುದಿಯಲು ಇಡಿ. ಇದಾದ ಬಳಿಕೆ ಕೊನೆಗೆ ಕುದಿಸಿದ ಹಾಲನ್ನು ಈ ಮಿಶ್ರಣಕ್ಕೆ ಹಾಕಿ.
ಗಸಗಸೆಯಲ್ಲಿರುವ ಕಬ್ಬಿಣ, ಜಿಂಕ್, ಕ್ಯಾಲ್ಸಿಯಂಗಳು ರಕ್ತದೊತ್ತಡ, ಕೊಬ್ಬಿನ ಸಮಸ್ಯೆ, ಅಜೀರ್ಣದಂತಹ ಸಮಸ್ಯೆಗೆ ಮದ್ದು. ಇಷ್ಟೇ ಅಲ್ಲದೆ ರಕ್ತ ಶುದ್ಧೀಕರಣ ಹಾಗೂ ರೋಗನಿರೋಧಕ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ.
ಗಸಗಸೆ ಹೀಗೆ ತಿನ್ನಬಹುದು
ನೆನಸಿಟ್ಟ ಗಸಗಸೆಯನ್ನು ಬೆಳಗೆದ್ದು ರುಬ್ಬಿ ಆ ಹಾಲಿಗೆ ಜೇನುತುಪ್ಪ ಸೇರಿಸಿ ಕುಡಿಯಬಹುದು. ಇದು ಬಾಯಲ್ಲಾಗುವ ಹುಣ್ಣು, ಜೀರ್ಣಕ್ರಿಯೆ ಸಹಾಯ ಮಾಡುತ್ತದೆ, (ಏಜೆನ್ಸೀಸ್).