Almond Powder And Rock Sugar Drink For Sinus Relief
- ಸೈನಸ್ ಸಮಸ್ಯೆಯಿಂದ ನಿತ್ಯ ಬಳಲುತ್ತಿದ್ದೀರಾ? ಈ ಆಯುರ್ವೇದ ಮದ್ದು ಟ್ರೈ ಮಾಡಿ.
- ಕುದಿಯುವ ಹಾಲಿಗೆ ಕಲ್ಲು ಸಕ್ಕರೆ, ಮೆಣಸು, ಬಾದಾಮಿ ಹಾಕಿ ಮೂರುದಿನ ಕುಡಿಯಿರಿ.
- ಮಳೆಗಾಲದಲ್ಲಿ ಕಾಡುವ ಸೈನಸ್ ಸಮಸ್ಯೆಗೆ ನೈಸರ್ಗಿಕ ಮದ್ದು ಬಗ್ಗೆ ಮಾಹಿತಿ ಇಲ್ಲಿದೆ.
Almond Powder And Rock Sugar Drink For Sinus Relief:
ಕೆಲಸದೊತ್ತಡ ಹಾಗೂ ಸಂಬಂಧಗಳೊಂದಿಗಿನ ಕಲಹ ಸೇರಿದಂತೆ ನಾನಾ ವಿಚಾರಕ್ಕೆ ಇತ್ತೀಚಿನ ದಿನಗಳಲ್ಲಿ ತಲೆನೋವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಸಮಯ ಸ್ಕ್ರೀನ್ ನೋಡುವುದು, ಆಹಾರ ಶೈಲಿಯು ಸಹ ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಹೆಚ್ಚಿನ ಜನರಿಗೆ ಆಹಾರ ತಯಾರಿಸಿಕೊಂಡು ತಿನ್ನುವಷ್ಟು ಸಮಯವೂ ಇರೋದಿಲ್ಲ. ಹೀಗಾಗಿ ಶೀತ, ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಪದಾರ್ಥಗಳನ್ನು ಸೇವನೆ ಮಾಡಿ.
ಮಳೆಗಾಲದಲ್ಲಿ ಥಂಡಿ ವಾತಾವರಣದಿಂದ ಕೂಡಿರುತದತದೆ. ಹೀಗಾಗಿ ಬ್ಯಾಕ್ಟೀರಿಯಾಗಳಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ರೋಗನಿರೋಧ ಶಕ್ತಿ ಕಡಿಮೆಯಾದಾಗ ಶೀತ, ವೈರಲ್ ಜ್ವರ ಕಾಡೋದು ತಪ್ಪಿದ್ದಲ್ಲ. ಸೈನಸ್ ಸಮಸ್ಯೆಯಿಂದಲೂ ಹೆಚ್ಚು ಜನರು ಇದೇ ಮಾಸದಲ್ಲಿ ಬಳಲುತ್ತಾರೆ. ಹೀಗಾಗಿ ಬಾದಾಮಿ, ಬೆಲ್ಲ ಹಾಗೂ ಹಾಲು ಬಾದಾಮಿ ಪೇಯವನ್ನು ಆಗಾಗ್ಗೆ ಹೊಟ್ಟೆಗಿಳಿಸಿಕೊಳ್ಳೋದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಈ ಪದಾರ್ಥ ನಿಮ್ಮ ತಲೆಗೆ ಮದ್ದು
ಸೈನಸ್ನಿಂದಾಗಿ ನಿಮಗೆ ತಲೆ ನೋವು ಪ್ರಾಣ ಹೋಗುವಷ್ಟು ಸಮಸ್ಯೆಯನ್ನುಂಟು ಮಾಡುತ್ತಿದ್ದರೆ, ಮೊದಲಿಗೆ ಹಾಲಿಗೆ ಬಾದಾಮಿಯನ್ನು ತುರಿದು ಹಾಕಿ, ಆನಂತರ ಚೆನ್ನಾಗಿ ಕುದಿಯುತ್ತಿದ್ದಾಗ ಅದಕ್ಕೆ ಕಲ್ಲು ಸಕ್ಕರೆ ಹಾಕಿ ಜೊತೆಗೆ ಬೆಲ್ಲ ಹಾಕಿ ಕುದಿಸಿ ಸೋಸಿ ಕುಡಿಯಿರಿ. ಇದೇ ಅಭ್ಯಾಸವನ್ನು ಕ್ರಮೇಣವಾಗಿ ಮೂರು ದಿನಗಳ ಕಾಲ ಮಾಡುವುದರಿಂದ ನಿಮಗೆ ನಿತ್ಯ ಕಾಡುವ ಸೈನಸ್ ಸಮಸ್ಯೆಯಿಂದ ಸುರಕ್ಷಿತವಾಗಿಟ್ಟುಕೊಳ್ಳಬಹುದಾಗಿದೆ.
ಮತ್ತೊಂದು ಪರಿಹಾರ
ಶುಂಠಿ ಮತ್ತು ಅರಿಶಿನ ಭಾರತೀಯ ಮಸಾಲ ಪದಾರ್ಥವಾಗಿದೆ. ನೀವೇನಾದ್ರು ಸೈನಸ್ನಿಂದ ಬಳಲುತ್ತಿದ್ದರೆ ನೀರಿಗೆ ಶುಂಠಿ ಮತ್ತು ಅರಿಶಿನದ ಪುಡಿ ಹಾಕಿ ಕುದಿಲು ಇಟ್ಟು ಆನಂತರ ಸೇವನೆ ಮಾಡು ಇದು ಉರಿಯೂತ ಕಡಿಮೆ ಮಾಡಿ ಉಸಿರಾಟಕ್ಕೆ ಸಹಾಯ ಮಾಡುತ್ತದೆ.
ಸೈನಸ್ ಸಮಸ್ಯೆ ಎಂದರೇನು?
ಸೈನಸ್ ಎಂದರೆ ಮೂಗಿನ ಹಾದಿಯ ಸುತ್ತ ಇರುವ ಮೂಳೆಯ ಒಳಗಿನ ಖಾಲಿ ಜಾಗದಲ್ಲಿ ಉಂಟಾಗುವ ಉರಿಯೂತ ಅಥವಾ ಸೋಂಕನ್ನು ಸೈನಸ್ ಎಂದುರ ಕರೆಯಲಾಗುತ್ತದೆ. ಇದರಿಂದಾಗಿ ತೀವ್ರ ತಲೆ ನೋವು, ಮುಖದಲ್ಲಿ ಒತ್ತಡ, ಮೂಗು ಕಟ್ಟಿಕೊಳ್ಳೋಕೆ ಶುರುವಾಗುತ್ತದೆ.
ಸೈನಸ್ ಲಕ್ಷಣಗಳೇನು?
ವಿಪರೀತ ತಲೆನೋವು, ಮೂಗು ಕಟ್ಟುವಿಕೆ, ಉಸಿರಾಟದ ತೊಂದರೆ, ಸೀನುವಾಗ ಹಳದಿ ಅಥವಾ ಹಸಿರುಬ ಬಣ್ಣ ಕಾಣಿಸಿಕೊಳ್ಳುವುದು, ವಾಸನೆ ಗ್ರಹಿಸುವಲ್ಲಿ ಉಂಟಾಗುವ ಸಮಸ್ಯೆಯೇ ಇದರ ಲಕ್ಷಣ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯು ಜಾಗೃತಿ ಉದ್ದೇಶಕ್ಕಾಗಿ ಮಾ
ತ್ರ. ನೀವು ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.