- ಮೂತ್ರಪಿಂಡಗಳು ಮಾನವ ದೇಹದ ಅತ್ಯಂತ ಮುಖ್ಯ ಅಂಗಗಳು
- ಇವು ರಕ್ತದಲ್ಲಿರುವ ತ್ಯಾಜ್ಯವನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತವೆ
- ರಕ್ತದೊತ್ತಡ ನಿಯಂತ್ರಿಸಲು ರೆನಿನ್ ಹಾರ್ಮೋನ್ ಬಿಡುಗಡೆ ಮಾಡುತ್ತವೆ
Kidney health: ಮೂತ್ರಪಿಂಡಗಳು ಮಾನವ ದೇಹದ ಅತ್ಯಂತ ಮುಖ್ಯ ಅಂಗಗಳು. ಇದು ದೇಹದಲ್ಲಿ ಅನೇಕ ಜವಬ್ದಾರಿಯನ್ನು ವಹಿಸುತ್ತದೆ. ಇವು ರಕ್ತದಲ್ಲಿರುವ ತ್ಯಾಜ್ಯವನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತವೆ. ಹಾಗೆಯೇ ದೇಹದ ನೀರು-ಉಪ್ಪು ಸಮತೋಲನ ಕಾಯ್ದುಕೊಳ್ಳುತ್ತವೆ. ಇವು ರಕ್ತದೊತ್ತಡ ನಿಯಂತ್ರಿಸಲು ರೆನಿನ್ ಹಾರ್ಮೋನ್ ಬಿಡುಗಡೆ ಮಾಡುತ್ತವೆ.
ದೇಹದಲ್ಲಿ ನೀರು ಅಥವಾ ಖನಿಜಗಳ ಪ್ರಮಾಣ ಹೆಚ್ಚಾದಾಗ, ಮೂತ್ರಪಿಂಡಗಳು ಅವುಗಳನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಹಾಗೆಯೇ ಪ್ರಮಾಣ ಕಡಿಮೆಯಾದರೆ, ಇದು ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಮೂತ್ರಪಿಂಡವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ನೀವೇನಾದರೂ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ, ಈ ರೀತಿಯ ಆಹಾರ ಸೇವಿಸಿರಿ..
ನೀವೇನಾದರೂ ಸಸ್ಯಾಹಾರಿಗಳಾಗಿದ್ದರೆ, ಮೊಟ್ಟೆಯ ಬಿಳಿಭಾಗವು ಉತ್ತಮ ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ರಂಜಕ ಕಡಿಮೆಯಿದ್ದು, ಗುಣಮಟ್ಟದ ಪ್ರೋಟೀನ್ನ್ನು ಹೊಂದಿರುತ್ತದೆ. ಕೆಲವು ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ವಿಟಮಿನ್‌ಗಳನ್ನು ಹೊಂದಿರುವುದರಿಂದು ಇದು ಮೂತ್ರಪಿಂಡಗಳ ಆರೋಗ್ಯ ಮಾಡುತ್ತದೆ.
ಎಲ್ಲಾ ರೀತಿಯ ಹಣ್ಣುಗಳು, ಚೆರ್ರಿಗಳು, ಸೇಬುಗಳು ಮತ್ತು ಪೇರಳೆ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಇರುವುರಿಂದ ಇದು ದೇಹದಲ್ಲಿ ಆಕ್ಸಿಡೆಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇವುಗಳ ಸೇವನೆಯು ದೇಹಕ್ಕೆ ವಿಟಮಿನ್ ಎ, ಸಿ ಮತ್ತು ಬಿ 6 ನಂತಹ ಪೋಷಕಾಂಶಗಳನ್ನು ನೀಡುತ್ತದೆ.
ಹೂಕೋಸು, ಎಲೆಕೋಸು, ಈರುಳ್ಳಿ, ಕೆಂಪು ಕ್ಯಾಪ್ಸಿಕಂ, ಬಿಳಿ ಬದನೆಕಾಯಿಯಂತಹ ತರಕಾರಿಗಳಲ್ಲಿ ಪೊಟ್ಯಾಸಿಯಮ್, ರಂಜಕ ಮತ್ತು ಸೋಡಿಯಂನಲ್ಲಿ ಕಡಿಮೆ ಇರುತ್ತವೆ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಮೃದ್ಧವಾಗಿರುವುದರಿಂದ ಇವುಗಳ ಸೇವನೆಯು ಪ್ರಯೋಜನಕಾರಿಯಾಗಿದೆ.
ನಿಮ್ಮ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಅವು ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನೀವು ಬಾಳೆಹಣ್ಣು, ಕಿತ್ತಳೆ, ಟೊಮೆಟೊ ಮತ್ತು ಸಿಹಿ ಗೆಣಸು ತಿನ್ನುವುದನ್ನು ತಪ್ಪಿಸಬೇಕು. ಈ ಆಹಾರಗಳು ಮೂತ್ರಪಿಂಡದ ಹಾನಿಯ ಅಪಾಯವನ್ನು ಹೆಚ್ಚಿಸುತ್ತವೆ.
ಉಪ್ಪು, ರಂಜಕ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರಗಳು, ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಪಾನೀಯಗಳನ್ನು ಸೇವಿಸುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಹಾಗಾಗಿ ಮೂತ್ರಪಿಂಡದ ಸಮಸ್ಯೆ ಇರುವಂತಹವರು ಯಾವುದೇ ಕಾರಣಕ್ಕೂ ಈ ಪದಾರ್ಥಗಳನ್ನು ಸೇವಿಸಬೇಡಿ.
ಹಾಲು, ಚೀಸ್ ಮತ್ತು ಮೊಸರಿನಂತಹ ಹಾಲಿನ ಉತ್ಪನ್ನಗಳಲ್ಲಿ ರಂಜಕ ಹೆಚ್ಚಾಗಿರುತ್ತದೆ. ಹಾಗಾಗಿ ಕಡಿಮೆ ರಂಜಕವಿರುವ ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.