- ದೇಹವೆಂಬ ಮನೆ ಕೇವಲ ಉಗ್ರಾಣವಾಗಿ ಬದಲಾಗಿದೆ
- ದೇಹದಲ್ಲಿ ಮಾಂಸಕ್ಕಿಂತ ಹೆಚ್ಚು ಕೊಬ್ಬಿನಾಂಶವೇ ಶೇಕರಣೆಯಾಗುತ್ತಿದೆ
- ಹೊಟ್ಟೆ ಬೊಜ್ಜನ್ನು ಕರಗಿಸುವ ತಂತ್ರಗಳು ನಮ್ಮ ಯೋಗಶಾಸ್ತ್ರದಲ್ಲಿ ದಾಖಲಾಗಿದೆ
- ಯೋಗಾಸನದ ಜತೆ ನಿಯಮಿತ ಆಹಾರ ಸೇವನೆಯಿಂದ ಹೊಟ್ಟೆ ಬೊಜ್ಜನ್ನು ಕರಗಿಸಬಹುದು
Yoga : ಇಂದಿನ ವೇಗದ ಜೀವನದಲ್ಲಿ ಕೆಲಸದ ಒತ್ತಡದಿಂದಾಗಿ ಸರಿಯಾಗಿ ಊಟಮಾಡಲು, ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೆ ಕಣ್ಣಿಗೆ ಕಾಣಿಸಿದ, ಕೈಗೆ ಸಿಕ್ಕಿದನ್ನು ತಿಂದ ಪರಿಣಾಮವಾಗಿ ದೇಹವೆಂಬ ಮನೆ ಕೇವಲ ಉಗ್ರಾಣವಾಗಿ ಬದಲಾಗಿ ದೇಹದಲ್ಲಿ ಮಾಂಸಕ್ಕಿಂತ ಹೆಚ್ಚು ಕೊಬ್ಬಿನಾಂಶವೇ ಶೇಕರಣೆಯಾಗಿರುತ್ತದೆ.
ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು, ಕೊಬ್ಬನ್ನು ಕರಗಿಸಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಅವರಿಗೆ ಕೊಬ್ಬನ್ನು ಕರಗಿಸಲಿರುವ ಮಾರ್ಗಗಳ ಬಗ್ಗೆ ಮಾಹಿತಿಯ ಕೊರತೆ ಇರುತ್ತದೆ.
ಇನ್ನು ಕೆಲವೊಬ್ಬರು ವ್ಯಾಯಾಮ ಮಾಡಿದರೆ ಸಾಕು ಬೊಜ್ಜು ಕರಗುತ್ತದೆ ಎಂದು ಭಾವಿಸಿ ಜಿಮ್ಗೆ ಸೇರಿಬೀಡುತ್ತಾರೆ. ಆದರೆ ಹೊಟ್ಟೆ ಬೊಜ್ಜನ್ನು ಸುಲಭವಾಗಿ ಕರಗಿಸುವ ತಂತ್ರಗಳು ನಮ್ಮ ಪುರಾತನ ಶಾಸ್ತ್ರಗಳಲ್ಲಿ ಒಂದಾದ ಯೋಗಶಾಸ್ತ್ರದಲ್ಲಿ ದೇಹದಿಂದ ಕೊಬ್ಬನ್ನು ಕರಗಿಸಲು ಪ್ರಮುಖವಾದ 5 ಯೋಗಾಸನಗಳನ್ನು ಸೂಚಿಸಲಾಗಿದೆ, ಈ ಆಸನಗಳ ಜತೆ ಸರಿಯಾದ ಕ್ರಮದಲ್ಲಿ ಆಹಾರವನ್ನು ತೆಗೆದುಕೊಂಡೆ ಖಂಡಿತವಾಗಿ ಹೊಟ್ಟೆ ಬೊಜ್ಜನ್ನು ಕರಗಿಸಬಹುದು.
ಯೋಗಶಾಸ್ತ್ರದಲ್ಲಿ ಸೂಚಿಸಿರುವ 5 ಪ್ರಮುಖ ಯೋಗಾಸನಗಳು
1. ವೀರಭದ್ರಾಸನ
ಈ ಆಸನವನ್ನು ಮಾಡುವುದರಿಂದ ಹೊಟ್ಟೆಯ ಭಾಗದ ಶಕ್ತಿ ಮತ್ತು ಸಾಮರ್ಥ್ಯ ವೃದ್ಧಿಯಾಗುವುದರಿಂದ, ಜೀರ್ಣಕ್ರಿಯೆ ಉತ್ತಮವಾಗುತ್ತದೆ.
* ನೇರವಾಗಿ ನಿಂತು ನಿಮ್ಮ ಪಾದಗಳನ್ನು ಅಗಲವಾಗಿ ಹೆಜ್ಜೆ ಹಾಕಿ.
* ನಿಮ್ಮ ಬಲ ಮೊಣಕಾಲು ಬಗ್ಗಿಸಿ.
* ನಿಮ್ಮ ತೋಳುಗಳನ್ನು ನೆಲಕ್ಕೆ ಸಮಾನಾಂತರವಾಗಿ ವಿಸ್ತರಿಸಿ ಮತ್ತು ನಿಮ್ಮ ಬೆರಳ ತುದಿಯನ್ನು ನೋಡಿ.
2. ಉತ್ಕಟಾಸನ
ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿಯನ್ನೇ ಉತ್ಕಟಾಸನ ಎನ್ನುತ್ತಾರೆ. ಈ ಆಸನವನ್ನು ಮಾಡುವುದರಿಂದ ಪಾದ, ಕಾಲು ಮತ್ತು ಹೊಟ್ಟೆಯ ಭಾಗಕ್ಕೆ ಶಾಖ ದೊರೆಯುವುದರಿಂದ ಹೊಟ್ಟೆಭಾಗದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ.
* ಮೊದಲು ನೇರವಾಗಿ ನಿಂತುಕೊಳ್ಳಿ, ನಂತರ ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ನೀವು ಕುರ್ಚಿಯಲ್ಲಿ ಕುಳಿತಿರುವಂತೆ ನಿಮ್ಮ ಸೊಂಟವನ್ನು ಕೆಳಕ್ಕೆ ಇಳಿಸಿ.
* ನಿಮ್ಮ ತೋಳುಗಳನ್ನು ತಲೆಯ ಮೇಲಿಟ್ಟು, ದೇಹವನ್ನು ಸಮತೋಲನದಲ್ಲಿ ಇರಿಸಿ.
* ಐದು ಬಾರಿ ಉಸಿರಾಟ ಮಾಡುವವರೆಗೆ ಇದೇ ಭಂಗಿಯಲ್ಲಿರಿ.
3. ಭುಜಂಗಾಸನ
ಹಾವಿ ಹೆಡೆ ಎತ್ತುವಂತೆ ತಲೆಯನ್ನು ಎತ್ತುವುದೇ ಭುಜಂಗಾಸನ. ಈ ಆಸನವನ್ನು ಮಾಡುವುದರಿಂದ ಉಸಿರಾಟದ ಪ್ರಮಾಣ ಹೆಚ್ಚುತ್ತದೆ ಇದರಿಂದ ಹೊಟ್ಟೆಯಲ್ಲಿರುವ ಆಹಾರ ಬಹುಬೇಗ ಜೀರ್ಣವಾಗುತ್ತದೆ.
* ಮುಖ ಕೆಳಗೆ ಮಲಗಿ ನಿಮ್ಮ ಕೈಗಳನ್ನು ನಿಮ್ಮ ಭುಜಗಳ ಕೆಳಗೆ ಇರಿಸಿ.
* ನೀವು ಉಸಿರಾಡುವಾಗ, ನಿಮ್ಮ ಅಂಗೈಗಳನ್ನು ನಿಮ್ಮ ಎದೆಗೆ ಒತ್ತಿ ಅದನ್ನು ಮೇಲಕ್ಕೆತ್ತಿ.
* ನಿಮ್ಮ ಮೊಣಕೈಗಳನ್ನು ನಿಮ್ಮ ದೇಹಕ್ಕೆ ಹತ್ತಿರ ಇರಿಸಿ ಮತ್ತು ನಿಮ್ಮ ಭುಜಗಳನ್ನು ವಿಶ್ರಾಂತಿ ಮಾಡಿ.
4. ಸೇತುಬಂಧಾಸನ
ಈ ಸೇತುಬಂಧಾಸನವನ್ನು ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮಗೊಂಡು ದೇಹದಲ್ಲಿರುವ ಕೊಬ್ಬಿನಾಂಶ ಕರಗಲು ಸಹಾಯಕವಾಗುತ್ತದೆ.
* ಬೆನ್ನಿನ ಮೇಲೆ ನೇರವಾಗಿ ಮಲಗಿ, ನಿಮ್ಮ ಕಾಲುಗಳನ್ನು ಮಂಡಿಗಳನ್ನು ಬಗ್ಗಿಸಿ, ಪಾದಗಳನ್ನು ನೆಲದ ಮೇಲೆ ಸಮತಟ್ಟಾಗಿ ಇರಿಸಿ.
* ನಿಮ್ಮ ಕೈಗಳನ್ನು ದೇಹದ ಪಕ್ಕದಲ್ಲಿ ನೆಲದ ಮೇಲೆ ಇರಿಸಿ, ಅಂಗೈಗಳನ್ನು ಕೆಳಕ್ಕೆ ಇರಿಸಿ.
* ನಿಮ್ಮ ಬೆನ್ನನ್ನು ಸಾಧ್ಯವಾದಷ್ಟು ಮೇಲಕ್ಕೆ ಎತ್ತಿ, ನಿಮ್ಮ ಕುತ್ತಿಗೆ ಮತ್ತು ತಲೆಯನ್ನು ನೆಲದ ಮೇಲೆ ಇರಿಸಿ.
* ನಿಮ್ಮ ಬೆನ್ನನ್ನು ಸಾಧ್ಯವಾದಷ್ಟು ಮೇಲಕ್ಕೆ ಎತ್ತಿ, ನಿಮ್ಮ ಕುತ್ತಿಗೆ ಮತ್ತು ತಲೆಯನ್ನು ನೆಲದ ಮೇಲೆ ಇರಿಸಿ.
* ಕೆಲವು ನಿಮಿಷಗಳ ಕಾಲ ಈ ಭಂಗಿಯಲ್ಲಿ ಇರಿ.
5. ಮಾರ್ಜರ್ಯಾಸನ - ಬಿತಿಲಾಸನ
ಹಸು ಮತ್ತು ಬೆಕ್ಕಿನ ಭಂಗಿಯಲ್ಲಿ ನಿರತವಾಗುವ ಆಸನವೇ ಮಾರ್ಜರ್ಯಾಸನ - ಬಿತಿಲಾಸನ. ಇದನ್ನು ಮಾಡುವುದರಿಂದ ಹೊಟ್ಟೆಯ ಭಾಗಕ್ಕೆ ಹೆಚ್ಚಿನ ಶಕ್ತಿ ದೊರೆಯುವದರಿಂದ ಅಲ್ಲಿ ಶೇಖರನೆಯಾಗಿರುವ ಕೊಬ್ಬು ಕಡಿಮೆಯಾಗುತ್ತದೆ.
* ನಿಮ್ಮ ಕೈಗಳು ಮತ್ತು ಮಂಡಿಗಳನ್ನು ಟೇಬಲ್ ಟಾಪ್ ಭಂಗಿಯಲ್ಲಿ ಇಟ್ಟುಕೊಳ್ಳುವಂತೆ ಇರಿಸಿ.
* ನಿಮ್ಮ ಮಣಿಕಟ್ಟುಗಳನ್ನು ಭುಜಗಳ ಕೆಳಗೆ ಇಟ್ಟುಕೊಂಡು ಮಂಡಿಗಳನ್ನು ಸೊಂಟದ ಕೆಳಗೆ ಇರಿಸಿ.
* ಈಗ ಹಿಂಬದಿಗೆ ಬಾಗುತ್ತ ಉಸಿರನ್ನು ಒಳಗೆ ತೆಗೆದುಕೊಳ್ಳಿ. ನಿಮ್ಮ ಸೊಂಟ ವನ್ನು ನೆಲದ ಕಡೆಗೆ ತಂದು ನಿಮ್ಮ ದೃಷ್ಟಿಯನ್ನು ಮೇಲಕ್ಕೆ ಹಾಯಿಸಿ.
* ನಿಮ್ಮ ಗಲ್ಲವನ್ನು ನಿಮ್ಮ ಎದೆಯ ಭಾಗಕ್ಕೆ ತಂದು ಉಸಿರನ್ನು ಹೊರಗೆ ಬಿಡುತ್ತಾ ಬೆಕ್ಕಿನ ಭಂಗಿಯಲ್ಲಿ ಐದರಿಂದ ಹತ್ತು ಬಾರಿ ಉಸಿರಾಟ ನಡೆಸಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).