ಬೆಂಗಳೂರು: ಇಂದಿನ ಫಿಟ್‌ನೆಸ್ ಜಗತ್ತಿನಲ್ಲಿ ಎರಡು ಪ್ರಮುಖ ಮಂತ್ರಗಳು ಪ್ರಚಾರದಲ್ಲಿವೆ ದಿನಕ್ಕೆ 10,000 ಹೆಜ್ಜೆಗಳು ನಡೆಯುವುದು ಅಥವಾ 45 ನಿಮಿಷಗಳ ರಚನಾತ್ಮಕ ವ್ಯಾಯಾಮ. ಆದರೆ ಯಾವುದು ನಿಜವಾಗಿಯೂ ಆರೋಗ್ಯವನ್ನು ಸುಧಾರಿಸುತ್ತದೆ? ಎಂಬುದು ತಿಳಿಯೋಣ..
ಇತ್ತೀಚಿನ ಅಧ್ಯಯನಗಳ ಪ್ರಕಾರ, ಇವೆರಡೂ ಒಂದೇ ರೀತಿಯ ಲಾಭಗಳನ್ನು ನೀಡುತ್ತವೆ, ಆದರೆ ವಿಭಿನ್ನ ರೀತಿಯಲ್ಲಿ.10,000 ಹೆಜ್ಜೆಗಳು ಸಾಮಾನ್ಯವಾಗಿ ಕಡಿಮೆ ತೀವ್ರತೆಯ ನಡಿಗೆಯಾಗಿದ್ದು, ದಿನಪೂರ್ತಿ ಕೈ-ಕಾಲು ನೋವು ಕಡಿಮೆ ಮಾಡುತ್ತದೆ. ಇದು ಹೃದಯ ಆರೋಗ್ಯ, ರಕ್ತದೊತ್ತಡ ನಿಯಂತ್ರಣ, ಮಧುಮೇಹ ಅಪಾಯ ಕಡಿಮೆಗೊಳಿಸುವುದು ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ.
ಆದರೆ, 2025ರ ಅಧ್ಯಯನಗಳು (ಲ್ಯಾನ್ಸೆಟ್) ಹೇಳುವಂತೆ, 7,000-8,000 ಹೆಜ್ಜೆಗಳಲ್ಲೇ ಹೆಚ್ಚಿನ ಲಾಭಗಳು ಸಿಗುತ್ತವೆ. 10,000ಕ್ಕಿಂತ ಹೆಚ್ಚು ಹೆಜ್ಜೆಗಳು ಹೆಚ್ಚುವರಿ ಲಾಭ ನೀಡದು. ಇನ್ನು 45 ನಿಮಿಷಗಳ ವರ್ಕೌಟ್ (ಜಿಮ್, ರನ್ನಿಂಗ್ ಅಥವಾ ಸ್ಟ್ರೆಂತ್ ಟ್ರೈನಿಂಗ್) ಹೆಚ್ಚು ತೀವ್ರತೆಯದ್ದು. ಇದು ಸ್ನಾಯು ಬಲ, ಹೃದಯ ಸಾಮರ್ಥ್ಯ, ಮೆಟಾಬಾಲಿಕ್ ಆರೋಗ್ಯ ಮತ್ತು ಮೂಳೆ ಸಾಂದ್ರತೆಯನ್ನು ಗಣನೀಯವಾಗಿ ಸುಧಾರಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ.
WHO ಮಾರ್ಗಸೂಚಿಗಳ ಪ್ರಕಾರ, ವಾರಕ್ಕೆ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಸಾಕು – ಇದು ದಿನಕ್ಕೆ ಸುಮಾರು 30-45 ನಿಮಿಷಗಳಿಗೆ ಸಮಾನ. ತಜ್ಞರು ಹೇಳುವಂತೆ, ಇವೆರಡನ್ನು "ಅಥವಾ" ಎಂದು ಆಯ್ಕೆ ಮಾಡಬೇಕಿಲ್ಲ. ನಡಿಗೆ ದಿನಪೂರ್ತಿ ಚಟುವಟಿಕೆಯನ್ನು ಉತ್ತೇಜಿಸುತ್ತದೆ, ವರ್ಕೌಟ್ ಆಳವಾದ ಲಾಭಗಳನ್ನು ನೀಡುತ್ತದೆ ಎಂದು ಹೇಳುತ್ತಾರೆ.
45 ನಿಮಿಷಗಳ ತೀವ್ರ ವ್ಯಾಯಾಮ + ದಿನಪೂರ್ತಾ ಸಕ್ರಿಯವಾಗಿರುವುದು (7,000+ ಹೆಜ್ಜೆಗಳು).ಕೊನೆಯಲ್ಲಿ, ಯಾವುದೇ ಚಟುವಟಿಕೆ ಇಲ್ಲದಿರುವುದಕ್ಕಿಂತ ಯಾವುದಾದರೂ ಒಂದು ಉತ್ತಮ. ನಿಮ್ಮ ಜೀವನಶೈಲಿಗೆ ತಕ್ಕಂತೆ ಆಯ್ಕೆ ಮಾಡಿ ಮತ್ತು ಸ್ಥಿರವಾಗಿರಿ,(ಏಜೆನ್ಸೀಸ್).