ಸಾಂದರ್ಭಿಕ ಚಿತ್ರ 
ಆರೋಗ್ಯ

ಕಿವಿಯನ್ನು ಸ್ವಚ್ಛಗೊಳಿಸಲು ಹತ್ತಿ ಸ್ವ್ಯಾಬ್​ಗಳ ಬಳಕೆಯನ್ನು ನಿಲ್ಲಿಸಿ! ಇದು ಈ ರೀತಿಯಾಗಿ ಅಪಾಯ ಮಾಡಬಹುದು Ears Safety

ಪ್ರಮುಖ ಮುಖ್ಯಾಂಶಗಳು

  • ದೇಹದ ಭಾಗದಂತೆ, ನಮ್ಮ ಕಿವಿಗಳನ್ನು ಕೂಡಾ ಸ್ವಚ್ಛ ಮಾಡುವುದು ಅಗತ್ಯ
  • ಕಿವಿಗೆ ಇಯರ್​ ವಾಕ್ಸ್,​ ಇಯರ್‌ಬಡ್‌ಗಳು ಅಥವಾ ಹತ್ತಿ ಸ್ವ್ಯಾಬ್‌ಗಳನ್ನು ಬಳಸುತ್ತಾರೆ
  • ಈ ರೀತಿಯ ಅಭ್ಯಾಸಗಳು ವಿವಿಧ ತೊಂದರೆಗಳಿಗೆ ಕಾರಣವಾಗಬಹುದು
  • ನಿಮ್ಮ ಕಿವಿಯೊಳಗಿನ ಮೇಣವು ಇನ್ನಷ್ಟು ಆಳವಾಗಿ ತಳ್ಳುತ್ತೀರಿ
Ears Safely : ದೇಹದ ಭಾಗದಂತೆ, ನಮ್ಮ ಕಿವಿಗಳನ್ನು ಕೂಡಾ ಸ್ವಚ್ಛ ಮಾಡುವುದು ಅಗತ್ಯವಾಗಿದೆ. ಅನೇಕರು ಕಿವಿಗೆ ಇಯರ್​ ವಾಕ್ಸ್,​ ಇಯರ್‌ಬಡ್‌ಗಳು ಅಥವಾ ಹತ್ತಿ ಸ್ವ್ಯಾಬ್‌ಗಳನ್ನು ಬಳಸುತ್ತಾರೆ. ಇದು ಆ ಕ್ಷಣಕ್ಕೆ ಕಸ ಹೊರಗೆ ಬರಬಹುದು. ಆದರೆ, ಹೀಗೆ ಮಾಡುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗುವ ಸಂಭವವೇ ಹೆಚ್ಚಾಗಿರುತ್ತದೆ.
ಈ ರೀತಿಯ ಅಭ್ಯಾಸಗಳು ವಿವಿಧ ತೊಂದರೆಗಳಿಗೆ ಕಾರಣವಾಗಬಹುದು. ಆದರೆ, ಅನೇಕ ಜನರಿಗೆ ಈ ತೊಡಕುಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಈ ವಿಚಾರದ ಬಗ್ಗೆ ಮಾಹಿತಿ ನೀಡಲು ಆರೋಗ್ಯ ತಜ್ಞ ಡಾ. ಸೌರಭ್ ಸೇಥಿ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜನರು ಕಿವಿಯೊಳಗೆ ಸಿಲುಕಿರುವ ಧೂಳನ್ನು ತೆಗೆಯಲು ಇಯರ್‌ವಾಕ್ಸ್ ಬಳಸುವುದನ್ನು ತಡೆಯುವಂತೆ ಒತ್ತಾಯಿಸಿದ್ದಾರೆ.
ಇಯರ್‌ವಾಕ್ಸ್ ಬಾಕ್ಸ್​ನ ಲೇಬಲ್​ ಅನ್ನು ಓದಿದರೆ, ಅಕ್ಷರಶಃ ಕಿವಿಯೊಳಗೆ ಹಾಕಬೇಡಿ ಎಂದು ಸೂಚಿಸಿರುತ್ತಾರೆ. ಆದರೂ ಹೆಚ್ಚಿನ ಜನರು ಈ ಕ್ರಿಯೆಯನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಕಿವಿಯೊಳಗಿನ ಮೇಣವು ಇನ್ನಷ್ಟು ಆಳವಾಗಿ ತಳ್ಳುತ್ತೀರಿ. ಇದು ಸೋಂಕು, ನೋವು ಅಥವಾ ಕಿವಿಗೆ ಗಾಯ ಮಾಡಬಹುದು ಎಂದು ಡಾ. ಸೇಥಿ ತಿಳಿಸಿದ್ದಾರೆ.
ಇಯರ್‌ಬಡ್‌ಗಳನ್ನು ಕಿವಿಗೆ ಹಾಕುವಾಗ ಕಿವಿಯ ಒಳಗೆ ತುಂಬಾ ದೂರ ನೂಕಿಸಬಾರದು ಎಂದು ತಿಳಿಸಿದ್ದಾರೆ. ಇದು ಕಿವಿಯೊಳಗೆ ರಂಧ್ರ ಉಂಟಾಗಿ ಇದರಿಂದ ನೋವಿನ ಜೊತೆ ಶ್ರವಣವನ್ನು ಕಳೆದುಕೊಳ್ಳಬಹುದು.
ಕ್ರಿಮಿನಾಶಕವಲ್ಲದ ವಸ್ತುಗಳನ್ನು ಬಳಸುವುದರಿಂದ ಬ್ಯಾಕ್ಟೀರಿಯಾಗಳು ಕಿವಿಯೊಳಗೆ ಪ್ರವೇಶಿಸಿ, ಕಿವಿಯೊಳಗೆ ಸೋಂಕುಗಳನ್ನು ಉತ್ಪತ್ತಿಸುವಂತೆ ಮಾಡುತ್ತದೆ. ಇದು ನೋವು ಹಾಗೂ ಊತ ಉಂಟು ಮಾಡುತ್ತದೆ.
ಕಿವಿಗಳನ್ನು ಸ್ವಚ್ಛಗೊಳಿಸಲು ಸರಿಯಾದ ಮಾರ್ಗ ಯಾವುದು?
ಇಯರ್​​ವಾಕ್ಸ್​​ ಇದು ಕಿವಿಯನ್ನು ಸ್ವಚ್ಛಗೊಳಿಸುತ್ತದೆ ಹಾಗೆಯೇ ಬ್ಯಾಕ್ಟೀರಿಯಾಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ಬಳಸುವುದರಿಂದ ಕಿವಿಯ ಕಾಲುವೆಯನ್ನು ರಕ್ಷಿಸುವುದರಿಂದ, ಒಳಗೆ ಶೇಖರಣೆಯಾಗಿರುವ ಧೂಳು ತನ್ನದೇ ಆದ ರೂಪದಲ್ಲಿ ಹೊರಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಕಿವಿಯಲ್ಲಿ ಅತಿಯಾದ ಮೇಣದ ಶೇಖರಣೆ, ಶ್ರವಣ ನಷ್ಟ ಅಥವಾ ನೋವಿನಂತಹ ಲಕ್ಷಣಗಳು ಕಂಡುಬಂದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅವರು ವಿಶೇಷ ಉಪಕರಣಗಳನ್ನು ಬಳಸಿಕೊಂಡು ಕಿವಿಯ ಮೇಣವನ್ನು ಸುರಕ್ಷಿತವಾಗಿ ತೆಗೆದುಹಾಕುತ್ತಾರೆ. ಇದರಿಂದ ಕಿವಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಕಿವಿಯ ಕಾಲುವೆಯೊಳಗೆ ಹತ್ತಿ ಕಡ್ಡಿಗಳು, ಬೆರಳು, ಪೆನ್ಸಿಲ್​, ಇನ್ನಿತರ ವಸ್ತುಗಳನ್ನು ಎಂದಿಗೂ ಸೇರಿಸಬೇಡಿ. ಇದು ಕಿವಿಯ ಒಳಗೆ ಹಾನಿ ಮಾಡಿ. ಕಿವಿ ಕೇಳದೆ ಇರುವಂತೆ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.