ಕತ್ತಲೆಯಲ್ಲೂ ಹೊಳೆಯುವ ಜೀವಿಗಳು WEB
ಫೋಟೋ ಗ್ಯಾಲರಿ

ನೀವು ನಂಬಲ್ಲ! ಕತ್ತಲೆಯಲ್ಲೂ ಹೊಳೆಯುವ ಜೀವಿಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಆಶ್ಚರ್ಯಕರ ಸಂಗತಿ. world wonders

ಸಂಪೂರ್ಣ ಕತ್ತಲೆಯಿರುವ ಸಮುದ್ರದ ಆಳದಲ್ಲಿ, ದಟ್ಟವಾದ ಕಾಡುಗಳಲ್ಲಿ ಬೆಳಕಿನ ಕಿರಣವೊಂದು ಕಾಣಿಸಿಕೊಂಡರೆ ಹೇಗಿರುತ್ತದೆ? ಅಲ್ಲಿ ವಿದ್ಯುತ್ ದೀಪಗಳಿಲ್ಲ, ಸೂರ್ಯನ ಬೆಳಕೂ ಇಲ್ಲ. ಆದರೂ ಕೆಲವು ಜೀವಿಗಳು ತಮ್ಮ ದೇಹದಿಂದಲೇ ಬೆಳಕನ್ನು ಹೊರಸೂಸುತ್ತವೆ! ಪ್ರಕೃತಿಯ ಈ ಅದ್ಭುತ ವಿದ್ಯಮಾನಕ್ಕೆ 'ಬಯೋಲ್ಯೂಮಿನೆಸೆನ್ಸ್'ಎಂದು ಕರೆಯಲಾಗುತ್ತದೆ. ದೇಹದಲ್ಲಿರುವ ಲೂಸಿಫೆರಿನ್ ಎಂಬ ರಾಸಾಯನಿಕ ಮತ್ತು ಲೂಸಿಫೆರೇಸ್ ಎಂಬ ಕಿಣ್ವದ ನಡುವಿನ ಕ್ರಿಯೆಯಿಂದ ಅನೇಕ ಜೀವಿಗಳಲ್ಲಿ ಬೆಳಕು ಉತ್ಪತ್ತಿಯಾಗುತ್ತದೆ. ಬೇಟೆ ಹಿಡಿಯಲು, ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಥವಾ ಸಂಗಾತಿಯನ್ನು ಆಕರ್ಷಿಸಲು ಈ ಬೆಳಕನ್ನು ಬಳಸುತ್ತವೆ. ಹಾಗಾದರೆ ಕತ್ತಲೆಯಲ್ಲೂ ಮಿಂಚುವ ಆ ಅದ್ಭುತ ಜೀವಿಗಳು ಯಾವುವು ಗೊತ್ತಾ?world womders

ವಿಜಯವಾಣಿ ಸುದ್ದಿ ಜಾಲ

ಮಿಂಚುಹುಳು

ಮಿಂಚುಹುಳು

ಮಳೆಗಾಲದ ರಾತ್ರಿ ಹೊತ್ತು ಹಸಿರು ಅಥವಾ ಹಳದಿ ಬೆಳಕಿನೊಂದಿಗೆ ಮಿಂಚುವ ಮಿಂಚುಹುಳುಗಳನ್ನು ನೀವು ನೋಡಿರಬಹುದು. ಇವುಗಳ ಹೊಟ್ಟೆಯ ಭಾಗದಲ್ಲಿರುವ ವಿಶೇಷ ಅಂಗಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಿಂದ ಬೆಳಕು ಉತ್ಪತ್ತಿಯಾಗುತ್ತದೆ. ಈ ಬೆಳಕನ್ನು ಸಂಗಾತಿಯನ್ನು ಆಕರ್ಷಿಸಲು ಸಂವಹನದ ಸಂಕೇತವಾಗಿ ಬಳಸುತ್ತವೆ. ವಿಶೇಷವೆಂದರೆ ಇವು ಹೊರಸೂಸುವ ಬೆಳಕಿನಲ್ಲಿ ಶಾಖದ ವ್ಯರ್ಥ ಉತ್ಪಾದನೆ ಬಹಳ ಕಡಿಮೆ.

ಆಂಗ್ಲರ್‌ಫಿಶ್

ಆಂಗ್ಲರ್‌ಫಿಶ್

ಸಮುದ್ರದ ಆಳದಲ್ಲಿ ವಾಸಿಸುವ ಈ ವಿಚಿತ್ರ ಮೀನು ನೋಡಲು ಭಯಾನಕವಾಗಿದ್ದರೂ ಇದರ ಬೇಟೆಯಾಡುವ ತಂತ್ರ ಇನ್ನಷ್ಟು ಅಚ್ಚರಿ ಮೂಡಿಸುತ್ತದೆ. ತಲೆಯ ಮೇಲಿರುವ ದೀಪದಂತಿರುವ ಅಂಗವು ಬೇಟೆಯನ್ನು ಆಕರ್ಷಿಸುವ ಸಾಧನವಾಗಿದೆ. ಕೆಲವು ಪ್ರಭೇದಗಳಲ್ಲಿ ಈ ಬೆಳಕು ಉತ್ಪತ್ತಿಯಾಗಲು ಅದರೊಂದಿಗೆ ಸಹಜೀವನ ನಡೆಸುವ ಬ್ಯಾಕ್ಟೀರಿಯಾಗಳು ನೆರವಾಗುತ್ತವೆ. ಸಂಪೂರ್ಣ ಕತ್ತಲೆಯ ಸಮುದ್ರದಲ್ಲಿ ಬೆಳಕನ್ನೇ ಬೇಟೆಯ ಬಲೆಯನ್ನಾಗಿ ಬಳಸುವ ಜೀವಿ ಇದು!

ಬಯೋಲ್ಯೂಮಿನೆಸೆಂಟ್ ಜೆಲ್ಲಿ ಮೀನು

ಬಯೋಲ್ಯೂಮಿನೆಸೆಂಟ್ ಜೆಲ್ಲಿ ಮೀನು

ಸಮುದ್ರದ ನೀರಿನಲ್ಲಿ ತೇಲಾಡುವ ಜೆಲ್ಲಿ ಮೀನುಗಳು ಬೆಳಕು ಹೊರಸೂಸುವ ಮೂಲಕ ನೋಡುಗರನ್ನು ಬೆರಗುಗೊಳಿಸುತ್ತವೆ. ಕೆಲವು ಪ್ರಭೇದಗಳು ನೀಲಿ ಅಥವಾ ಹಸಿರು ಬಣ್ಣದ ಬೆಳಕನ್ನು ಹೊರಸೂಸುತ್ತವೆ. ಅಪಾಯ ಎದುರಾದಾಗ ಅಥವಾ ಸ್ಪರ್ಶಕ್ಕೆ ಪ್ರತಿಕ್ರಿಯೆಯಾಗಿ ಬೆಳಕು ಕಾಣಿಸಿಕೊಳ್ಳಬಹುದು. ಇವುಗಳ ಪಾರದರ್ಶಕ ದೇಹದೊಂದಿಗೆ ಹೊಳೆಯುವ ಬೆಳಕು ಸಮುದ್ರದೊಳಗೆ ಅದ್ಭುತ ದೃಶ್ಯವನ್ನು ಸೃಷ್ಟಿಸುತ್ತದೆ.

ಗ್ಲೋವರ್ಮ್

ಗ್ಲೋವರ್ಮ್

ಕತ್ತಲೆಯ ಗುಹೆಗಳು ಮತ್ತು ತೇವಾಂಶವಿರುವ ಪ್ರದೇಶಗಳಲ್ಲಿ ಕಂಡುಬರುವ ಗ್ಲೋವರ್ಮ್‌ಗಳು ತಮ್ಮ ಬೆಳಕಿನಿಂದಲೇ ಗಮನ ಸೆಳೆಯುತ್ತವೆ. ಇವುಗಳ ಲಾರ್ವಾ ಹಂತದಲ್ಲಿರುವ ಜೀವಿಗಳು ಬೆಳಕನ್ನು ಹೊರಸೂಸುತ್ತವೆ. ಕೆಲವು ಗ್ಲೋವರ್ಮ್‌ಗಳು ಬೆಳಕಿನ ಜೊತೆಗೆ ಅಂಟಿಕೊಳ್ಳುವ ದಾರದಂತಹ ರಚನೆಗಳನ್ನು ನಿರ್ಮಿಸಿ ಸಣ್ಣ ಕೀಟಗಳನ್ನು ಬಲೆಗೆ ಬೀಳಿಸುತ್ತವೆ. ಕತ್ತಲೆಯ ಗುಹೆಯೊಳಗೆ ನಕ್ಷತ್ರಗಳು ಮಿನುಗುತ್ತಿರುವಂತೆ ಕಾಣುವ ದೃಶ್ಯಕ್ಕೆ ಇವೇ ಕಾರಣ!

ರೈಲ್ರೋಡ್ ವರ್ಮ್

ರೈಲ್ರೋಡ್ ವರ್ಮ್

ಹೆಸರಿನಲ್ಲೇ ರೈಲು ಇದ್ದರೂ ಇದಕ್ಕೂ ರೈಲಿಗೂ ಯಾವುದೇ ಸಂಬಂಧವಿಲ್ಲ ಈ ವಿಶಿಷ್ಟ ಕೀಟದ ದೇಹದ ವಿವಿಧ ಭಾಗಗಳಲ್ಲಿ ಬೆಳಕು ಉತ್ಪತ್ತಿಯಾಗುತ್ತದೆ. ಇದರ ದೇಹದ ಬದಿಗಳಲ್ಲಿ ಹಸಿರು ಅಥವಾ ಹಳದಿ ಬಣ್ಣದ ಬೆಳಕು ಕಾಣಿಸಿಕೊಂಡರೆ, ತಲೆಯ ಭಾಗದಲ್ಲಿ ಕೆಂಪು ಬಣ್ಣದ ಬೆಳಕು ಕಾಣಿಸಿಕೊಳ್ಳಬಹುದು. ರೈಲಿನ ಕಿಟಕಿಗಳಲ್ಲಿ ದೀಪಗಳು ಸಾಲಾಗಿ ಹೊಳೆಯುವಂತೆ ಇದರ ದೇಹದಲ್ಲಿನ ಬೆಳಕಿನ ಸಾಲುಗಳು ಕಾಣುವುದರಿಂದ ಇದಕ್ಕೆ ರೈಲ್ರೋಡ್ ವರ್ಮ್ ಎಂಬ ಹೆಸರು ಬಂದಿದೆ. ಶತ್ರುಗಳಿಗೆ ಎಚ್ಚರಿಕೆ ನೀಡಲು ಈ ಬೆಳಕು ಸಹಾಯ ಮಾಡುತ್ತದೆ, (ಏಜೆನ್ಸೀಸ್​).