ಇಲ್ಲಿವೆ ಒಂದಷ್ಟು ಉಪಯುಕ್ತ ಮಾಹಿತಿ 
ಫೋಟೋ ಗ್ಯಾಲರಿ

ಗೊರಕೆ ಶಬ್ದ, ನಿದ್ರೆಗೆ ಭಂಗ! ಈ ಸಮಸ್ಯೆಗೆ ಪರಿಹಾರವೇನು?

migrator

ಇಲ್ಲಿವೆ ಒಂದಷ್ಟು ಉಪಯುಕ್ತ ಮಾಹಿತಿ

Snoring: ಕೆಲವರು ಹೇಗೆ ಮಲಗಿದರೂ ಗೊರಕೆ ಶಬ್ದಕ್ಕೆ ಮಾತ್ರ ಅಡಚಣೆ ಇರುವುದಿಲ್ಲ. ಕಾರಣ, ಒಮ್ಮೆ ಅವರು ನಿದ್ರೆಗೆ ಜಾರಿದರೆ ಸಾಕು ಮನೆಯಲ್ಲಿರುವ ವಸ್ತುಗಳೇ ನಡುಗಬೇಕು. ಆ ಮಟ್ಟಿಗೆ ಜೋರಾದ ಗೊರಕೆ ಹೊಡೆಯುತ್ತಾರೆ

‘ಸ್ಲೀಪ್ ಅಪ್ನಿಯಾ’ದ ಸಂಕೇತ

ಸಾಮಾನ್ಯವಾಗಿ ನೀವು ಗೊರಕೆ ಹೊಡೆಯುತ್ತಿದ್ದರೆ, ಅದು ಪರವಾಗಿಲ್ಲ. ಆದರೆ, ವಿಪರೀತವಾಗಿ ಹೊಡೆಯುತ್ತಿದ್ದರೆ, ವೈದ್ಯರ ಸಲಹೆ ಮತ್ತು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಕೇವಲ ಒಂದು ಗೊರಕೆ ಶಬ್ದದಿಂದ ದಂಪತಿಗಳು ಒಟ್ಟಿಗೆ ನಿದ್ರಿಸಲು ಸಾಧ್ಯವಾಗದೆ, ದೂರ ಆದ ನಿದರ್ಶನಗಳು ನಮ್ಮಲ್ಲಿವೆ. ಜೋರಾಗಿ ಗೊರಕೆ ಹೊಡೆಯುವುದು ಕೆಲವೊಮ್ಮೆ ‘ಸ್ಲೀಪ್ ಅಪ್ನಿಯಾ’ದ ಸಂಕೇತ ಎನ್ನಲಾಗಿದೆ

ವೈದ್ಯರನ್ನು ಭೇಟಿಯಾಗಿ…

ನೀವು ನಿದ್ರೆಯಲ್ಲಿ ಜೋರಾಗಿ ಗೊರಕೆ ಹೊಡೆಯುತ್ತಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಹೀಗೆ ಮಾಡುತ್ತಿದ್ದರೆ, ವೈದ್ಯರು ಅದನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಸಲಹೆ ನೀಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ವೈದ್ಯರನ್ನು ಸಂಪರ್ಕಿಸಿ ಅಗತ್ಯ ತಪಾಸಣೆ ಮಾಡಿಸಿಕೊಳ್ಳಿ. ಇಲ್ಲವೇ ನಿಮ್ಮ ಮನೆಯಲ್ಲಿಯೇ ನಾವು ತಿಳಿಸಿರುವ ಒಂದಷ್ಟು ಸರಳ ಮಾಹಿತಿಯನ್ನು ಪಾಲಿಸಿ.

ಇವುಗಳನ್ನು ಪಾಲಿಸಿ

ನಿದ್ರೆಯ ಭಂಗಿ ಬದಲಿಸಿ, ನೀರು ಕುಡಿಯಿರಿ (ದಿನಕ್ಕೆ 8–10 ಗ್ಲಾಸ್), ತಲೆದಿಂಬು ಎತ್ತರಿಸಿ, ತೂಕ ಕಾಪಾಡಿಕೊಳ್ಳಿ (ಹೆಚ್ಚುವರಿ ತೂಕ ಇಳಿಸಿ), ಮದ್ಯಪಾನ ತ್ಯಜಿಸಿ, ನಿದ್ರೆಗೆ ಮುನ್ನ ಹೆಚ್ಚಿನ ಊಟ ತ್ಯಜಿಸಿ