ಬಿಳಿ ಬಣ್ಣಗಳು ಉಳಿತಾಯದ ಸಂಕೇತ
ಬಿಳಿ ಬಣ್ಣಗಳು ಉಳಿತಾಯದ ಸಂಕೇತ
ವಿಮಾನಯಾನ ಸಂಸ್ಥೆಗಳು ಪ್ರಾಯೋಗಿಕ ಕಾರಣಗಳಿಂದಾಗಿ ಬಿಳಿ ಬಣ್ಣಕ್ಕೆ ಸೀಮಿತವಾಗಿವೆ. ಆದ್ರೆ, ಏರ್ ನ್ಯೂಜಿಲೆಂಡ್ ಮಾತ್ರ ಭಿನ್ನವಾಗಿದ್ದು, ಪೂರ ಕಪ್ಪು ಬಣ್ಣದಲ್ಲೇ ರೂಪಿಸಲಾಗಿದೆ. ವಾಸ್ತವವಾಗಿ, ಇದು ವಿಶ್ವದಲ್ಲೇ ಅತಿ ಹೆಚ್ಚು ಕಪ್ಪು ಬಣ್ಣ ಬಳಿದ ವಾಣಿಜ್ಯ ವಿಮಾನಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆ ಎಂದು ಗುರುತಿಸಲಾಗಿದೆ.ಬಿಳಿ ಬಣ್ಣವೇ ತಮ್ಮ ಡೀಫಾಲ್ಟ್ ಕಲರ್
ನ್ಯೂಜಿಲೆಂಡ್ ವಿಮಾನಗಳು ಕಪ್ಪು ಬಣ್ಣದಲ್ಲೇ ಏಕಿದೆ? ಎಂಬ ಪ್ರಶ್ನೆಗಿಂತಲೂ ಬಹುತೇಕ ಸಂಸ್ಥೆಗಳು ತಮ್ಮ ಫ್ಲೈಟ್ಗಳಿಗೆ ಬಿಳಿ ಬಣ್ಣವನ್ನೇ ಏಕೆ ಬಳಕೆ ಮಾಡಿಕೊಂಡಿದೆ ಎಂಬುದರ ಬಗ್ಗೆ ತಿಳಿಯೋಣ. ವಿಮಾನಕ್ಕೆ ಬಣ್ಣ ಬಳಿಯುವುದು ಕೇವಲ ಲುಕ್ಗೆ ಮಾತ್ರ ಸಂಬಂಧಿಸಿದ್ದಲ್ಲ. ಪ್ರತಿಯೊಂದು ಕಲರ್ನ ಆಯ್ಕೆಯು ಅದರ ವೆಚ್ಚ, ಸುರಕ್ಷತೆ, ದಕ್ಷತೆ ಮತ್ತು ದೀರ್ಘಕಾಲೀನ ನಿರ್ವಹಣೆಯ ಮೇಲಕಪ್ಪು-ಬಿಳಿ ಬಣ್ಣದ ಬಳಕೆ ನಡುವಿನ ವ್ಯತ್ಯಾಸಗಳಿವು
ಬಿಳಿ ಬಣ್ಣಗಳು ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವುದಿಲ್ಲ. ಇದು ವಿಮಾನವನ್ನು ಆದಷ್ಟು ಕೂಲ್ ಆಗಿರಿಸುತ್ತದೆ. ಕಪ್ಪು ಬಣ್ಣಗಳು ಬಿಸಿಲಿನ ಶಾಖವನ್ನು ಬೇಗ ಆವರಿಸುತ್ತವೆ. ಅದರಲ್ಲೂ, ಹೆಚ್ಚು ಸಮಯ ರನ್ವೇಯಲ್ಲಿ ನಿಲ್ಲಿಸಿದ್ದಾಗ ತಾಪ ಕಾಡಲಾರಂಭಿಸುತ್ತೆ. ಬಣ್ಣದ ತೂಕ ವಿಮಾನ ಇಂಧನದ ಮೇಲೆ ಹೊಡೆತ ಬೀಳುತ್ತೆ.ಬಿಳಿ ಬಣ್ಣಗಳು ಹಗುರ
ಬಿಳಿ ಬಣ್ಣಗಳು ಹಗುರವಾಗಿರುತ್ತೆ. ಹೀಗಾಗಿ, ಇದು ವಿಮಾನಗಳ ಹಾರಾಟವನ್ನು ಸುಗುಮವಾಗಿಸುತ್ತೆ. ಜತೆಗೆ ಇಂಧನ ಬಳಕೆಯನ್ನು ಕಡಿಮೆ ಮಾಡುತ್ತೆ. ಅದೇ ಕಪ್ಪು ಬಣ್ಣ ದೀರ್ಘಕಾಲ ಇರಬೇಕು ಎಂಬ ನಿಟ್ಟಿನಲ್ಲಿ 2 ಕೋಟಿಂಗ್ನಲ್ಲಿ ಬಳೆಯಲಾಗುತ್ತೆ. ಇದು ವಿಮಾನದ ತೂಕದ ಮೇಲೆ ಪ್ರಭಾವ ಬೀರುತ್ತೆ. ಇದರಿಂದ ಅಧಿಕ ಇಂಧನ ಬಳಕೆ ಹಾಗೂ ಖರ್ಚು-ವೆಚ್ಚಗಳು ಜಾಸ್ತಿಯಾಗುತ್ತೆಬಿಳಿ ಬಣ್ಣ ಡ್ಯಾಮೇಜ್ ಪತ್ತೆಹಚ್ಚಲು ಸುಲಭ
ವಿಮಾನಗಳಲ್ಲಿ ಸೇಫ್ಟಿ ಚೆಕಿಂಗ್ಗಳು ದಿನನಿತ್ಯದ ಬಹುಮುಖ್ಯ ಕಾರ್ಯ. ಇಂಜಿನಿಯರ್ಗಳು ಆಯಾ ಫ್ಲೈಟ್ಗಳಲ್ಲಿ ಬಿರುಕು, ಆಯಿಲ್ ಲೀಕ್ ಸೇರಿದಂತೆ ಒಂದಷ್ಟು ಸಮಸ್ಯೆಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇದು ಸಮಯ ಉಳಿಸುತ್ತದೆ ಹಾಗೂ ಸಿಬ್ಬಂದಿಗಳ ಕೆಲಸವನ್ನು ವೇಗವಾಗಿ ಮುಗಿಸಲು ಅನುವು ಮಾಡಿಕೊಡುತ್ತದೆ.ಕಪ್ಪು ಬಣ್ಣ ಬೇಗ ಫೇಡ್
ಬಿಸಿಲಿನ ಹೊಡೆತಕ್ಕೆ ಕಪ್ಪು ಬಣ್ಣಗಳು ಬೇಗ ಮಾಸುತ್ತದೆ. ಇದು ವಿಮಾನಕ್ಕೆ ರೀ-ಪೇಂಟಿಂಗ್ ಅಗತ್ಯವನ್ನು ಹೆಚ್ಚಿಸುತ್ತದೆ. ವಿಮಾನ ಹೊಸತು ಅಥವಾ ಚೆನ್ನಾಗಿದೆ ಎಂಬುದನ್ನು ಕಾಪಾಡಿಕೊಳ್ಳಲು ಆಗಾಗ್ಗೆ ಬಣ್ಣ ಹೊಡೆಯುವ ಅವಶ್ಯಕತೆಯಿದೆ. ಅದೇ ಬಿಳಿ ಕಲರ್ ಒಂದು ಬಾರಿ ಬಳಕೆ ಮಾಡಿದರೆ ದೀರ್ಘಕಾಲ ಬಾಳಿಕೆ ಬರುತ್ತದೆ.ನ್ಯೂಜಿಲೆಂಡ್ ಡೋಂಟ್ ಕೇರ್
ಇದು ಅನಗತ್ಯ ಖರ್ಚು-ವೆಚ್ಚವನ್ನು ಕಡಿತಗೊಳಿಸುತ್ತದೆ. ಈ ಎಲ್ಲ ಕಾರಣಗಳಿಂದಲೇ ಬಹುತೇಕ ವಾಯುಯಾನ ಸಂಸ್ಥೆಗಳು ಬಿಳಿ ಬಣ್ಣದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದ್ರೆ, ನ್ಯೂಜಿಲೆಂಡ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನದೇ ದಾಟಿಯನ್ನು ಅನುಸರಿಸುತ್ತಿದೆ