ಮಾತಿನ ಭರಾಟೆ ಜೋರಾಗುವುದೇಕೆ? ಇಲ್ಲಿದೆ ನೋಡಿ ಉತ್ತರ
ಮಾತಿನ ಭರಾಟೆ ಜೋರಾಗುವುದೇಕೆ? ಇಲ್ಲಿದೆ ನೋಡಿ ಉತ್ತರ
ಕಂಠಪೂರ್ತಿ ಕುಡಿದಾಗ ತಮ್ಮ ಸ್ನೇಹಿತರ ಬಳಿ ಇಂಗ್ಲಿಷ್‌ನಲ್ಲಿ ಡೈಲಾಗ್ ಹೊಡೆಯುವುದೇನು? ಮಾತಿನ ಭರಾಟೆ ಜೋರಾಗಿಸುವುದೇನು? ಫುಲ್ ಕಾನ್ಫಿಡೆನ್ಸ್ನಲ್ಲಿ ಮಾತಿಗಿಳಿಯುತ್ತಾರೆ. ಕುಡಿಯುವ ಮೊದಲು ಹೆದರುವವರು, ಅದ್ಹೇಗೆ ಕುಡಿದ ಮತ್ತಿನಲ್ಲಿ ಅಷ್ಟು ಧೈರ್ಯದಿಂದ ಮಾತಾಡ್ತಾರೆ ಗೊತ್ತಾ?ಮದ್ಯ ಆರೋಗ್ಯಕ್ಕೆ ಹಾನಿಕಾರಕ
ಅಸಲಿಗೆ ಅನೇಕ ಅಧ್ಯಯನಗಳು ಮದ್ಯ ಎಷ್ಟು ಹಾನಿಕಾರಕ ಎಂಬುದನ್ನು ಈಗಾಗಲೇ ಬಹಿರಂಗಪಡಿಸಿವೆ. ಕುಡಿತದಿಂದ ಲಿವರ್ ಡ್ಯಾಮೇಜ್ ಮತ್ತು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದಾಗ್ಯೂ, ಕೆಲವರು ಕುಡಿತಕ್ಕೆ ದಾಸರಾಗಿದ್ದಾರೆ.ಏಕಾಏಕಿ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಗಮನಿಸಿದ್ದೀರಾ?
ಅಷ್ಟೋ-ಇಷ್ಟೋ ಆಂಗ್ಲ ಭಾಷೆ ಗೊತ್ತಿರುವ ಇವರು, ಸಾಮಾನ್ಯವಾಗಿ ಎಲ್ಲರ ಎದುರು ಧೈರ್ಯದಿಂದ ಮಾತನಾಡಲು ಹಿಂಜರಿಯುತ್ತಾರೆ. ಕಾರಣ, ಎಲ್ಲಿ ತಪ್ಪಾಗಿ ಮಾತಾಡಿ, ಇತರರ ಮುಂದೆ ನಗೆಪಾಟಲಿಗೆ ಸಿಲುಕುತ್ತೇನೆ ಎಂಬ ಅಂಜಿಕೆ ಅವರನ್ನು ಕಾಡುತ್ತಿರುತ್ತದೆ. ಅಷ್ಟಕ್ಕೂ ಕುಡಿದಾಗ ಹೀಗೆ ಧೈರ್ಯದಿಂದ ಮಾತನಾಡುವುದು ಯಾಕೆ? ಎಂಬುದಕ್ಕೆ ಹೀಗಿದೆ ನೋಡಿ ಉತ್ತರ.ಅಧ್ಯಯನದ ಪ್ರಕಾರ
‘ಜರ್ನಲ್ ಆಫ್ ಸೈಕೋಫಾರ್ಮಕಾಲಜಿ’ ಎಂಬ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮದ್ಯಪಾನ ಮಾಡಿದ ನಂತರ ಬರುವ ಅಮಲು ಬೇರೆ ಭಾಷೆಯನ್ನು ಮಾತನಾಡಲು ಸಹಾಯ ಮಾಡುತ್ತದೆ.ಅರಿವಿಗೆ ಬಾರದಂತೆ ಬದಲಾಗುತ್ತದೆ
ಅತಿಯಾಗಿ ಕುಡಿಯುವವರು ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಮದ್ಯದ ಅಮಲಿನಲ್ಲಿರುವ ಈ ಜನರು ತಮ್ಮ ಅಭಿಪ್ರಾಯವನ್ನು ಇತರರ ಮುಂದೆ ಪೂರ್ಣ ಆತ್ಮವಿಶ್ವಾಸದಿಂದ ಬಿಚ್ಚಿಡುತ್ತಾರೆ. ಹೊಸ ಭಾಷೆಯನ್ನು ಕಲಿಯಲು ಹೆದರುವವರಿಗೆ, ಕುಡಿತವು ಆ ಹೊಸ ಭಾಷೆಯನ್ನು ಮಾತನಾಡಲು ಮತ್ತು ಕಲಿಯಲು ದೂಡುತ್ತದೆ.