ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು 
ಫೋಟೋ ಗ್ಯಾಲರಿ

ಯಾರೀ ನಟಿ ಪ್ರತ್ಯುಷಾ? ಏನಿದು 2002ರ ಡೆತ್ ಕೇಸ್?

ಮೋಹನ್​ ಶೆಟ್ಟಿ

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕಳೆದ ಎರಡು ದಶಕಗಳ ಹಿಂದೆ ತೆಲುಗು ರಾಜ್ಯಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದ ನಟಿ ಪ್ರತ್ಯುಷಾ ಕೊಲೆ ಪ್ರಕರಣದಲ್ಲಿ ಇಂದು (ಫೆ.17) ಸುಪ್ರೀಂ ಕೋರ್ಟ್ ಅಂತಿಮ ಹಾಗೂ ಮಹತ್ವದ ತೀರ್ಪು ನೀಡಿದೆ.

ಆರೋಪಿ ಸಿದ್ಧಾರ್ಥ ರೆಡ್ಡಿ

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆರೋಪಿ ಸಿದ್ಧಾರ್ಥ ರೆಡ್ಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂ, ಮುಂದಿನ ನಾಲ್ಕು ವಾರಗಳಲ್ಲಿ ಶರಣಾಗುವಂತೆ ತಾಕೀತು ಮಾಡಿದೆ. ಮತ್ತೊಂದೆಡೆ, ಆರೋಪಿಯ ಜೈಲು ಶಿಕ್ಷೆಯನ್ನು ಕಡಿತಗೊಳಿಸದಂತೆ ಕೋರಿ ಪ್ರತ್ಯುಷಾ ತಾಯಿ ಸಲ್ಲಿಸಿದ್ದ ಅರ್ಜಿಯೂ ವಜಾಗೊಂ

ಏನಿದು ಪ್ರಕರಣ?

20ರ ದಶಕದಲ್ಲಿ ತೆಲುಗು ಅಂಗಳದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ನಟಿ ಪ್ರತ್ಯುಷಾ ಸಾವಿನ ಪ್ರಕರಣ ಇಡೀ ಟಾಲಿವುಡ್‌ ಮಾತ್ರವಲ್ಲದೆ ತೆಲುಗು ರಾಜ್ಯಗಳಲ್ಲಿಯೂ ಭಾರೀ ಸಂಚಲನ ಸೃಷ್ಟಿಸಿತು. ಟಾಲಿವುಡ್ ಉದ್ಯಮದಲ್ಲಿ ಅನೇಕ ಸಿನಿಮಾಗಳನ್ನು ಮಾಡಿ, ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದ ಪ್ರತ್ಯುಷಾ, ಸಿದ್ಧಾರ್ಥ್​ ರೆಡ್ಡಿಯೊಂದಿಗೆ ಪ್ರೀತಿಯಲ್ಲಿದ್ದರು.

ಆರ್ಗನೋಫಾಸ್ಫೇಟ್‌ನಿಂದ ಸಾವು

ಕೂಲ್​ ಡ್ರಿಂಕ್ಸ್​ನಲ್ಲಿ ಕೀಟನಾಶಕ ಬೆರೆಸಿರುವುದು ಲ್ಯಾಬ್​ ಟೆಸ್ಟ್​ಗಳಲ್ಲಿ ಬಹಿರಂಗವಾಯ್ತು. ಸರ್ಕಾರ ನೇಮಿಸಿದ 3 ವೈದ್ಯರ ತಂಡವು ಪ್ರತ್ಯೂಷ ಆರ್ಗನೋಫಾಸ್ಫೇಟ್‌ನಿಂದ ಮೃತಪಟ್ಟಿದ್ದಾರೆ. ಮತ್ತು ಸಾವಿಗೆ ಮುನ್ನ ಯಾವುದೇ ಉಸಿರುಗಟ್ಟುವಿಕೆ, ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ, ಸಿಬಿಐ ತನಿಖೆ ಕೈಗೊಂಡಿತು

5 ವರ್ಷ ಕಠಿಣ ಜೈಲುಶಿಕ್ಷೆ, 5,000 ರೂ. ದಂಡ

ಆರೋಪಿ ಸಿದ್ಧಾರ್ಥ ವಿರುದ್ಧ ಸಿಬಿಐ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಫೆ.23, 2004ರಂದು ಹೈದರಾಬಾದ್ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ಆರೋಪಿ​ಗೆ ಐದು ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದರು. ಇದರ ವಿರುದ್ಧ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದರು.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ

ಡಿಸೆಂಬರ್ 28, 2011ರಂದು ನ್ಯಾಯಾಲಯವು, ಜೈಲು ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿ ಮತ್ತು ದಂಡವನ್ನು 50,000 ರೂ.ಗೆ ಹೆಚ್ಚಿಸಿ ಎಂದು ತೀರ್ಪು ನೀಡಿತು. ಆದರೆ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಪ್ರತ್ಯೂಷ ಕೊಲೆ ಪ್ರಕರಣದಲ್ಲಿ ತಾನು ತಪ್ಪಿತಸ್ಥನಲ್ಲ ಎಂದು ಸುಪ್ರೀಂ ಕೋರ್ಟ್​ಗೆ ಸಿದ್ಧಾರ್ಥ್​ ಮೇಲ್ಮನವಿ ಸಲ್ಲಿಸಿದರು.

ಶಿಕ್ಷೆ ವಿಸ್ತರಿಸಿ...

ಇದೇ ಸಮಯದಲ್ಲಿ, ಪ್ರತ್ಯೂಷಾ ತಾಯಿ ಸರೋಜಿನಿ ದೇವಿ 2012ರಲ್ಲಿ ರೆಡ್ಡಿಗೆ ವಿಧಿಸಿರುವ ಜೈಲು ಶಿಕ್ಷೆಯನ್ನು ವಿಸ್ತರಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ತೀರ್ಪಿನಲ್ಲಿ, ಸಿದ್ಧಾರ್ಥ್​ ರೆಡ್ಡಿ ಮತ್ತು ಸರೋಜಿನಿ ದೇವಿ ಅವರ ಅರ್ಜಿಗಳನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ