30 ದಿನಗಳ ಕಾಲ ಮಾಂಸಾಹಾರವನ್ನು ತ್ಯಜಿಸಿ! 
ಫೋಟೋ ಗ್ಯಾಲರಿ

30 ದಿನಗಳ ಕಾಲ ಮಾಂಸಾಹಾರ ಬಿಟ್ಟರೆ ಏನಾಗುತ್ತೆದೆ? meat

ಸವಿನಾ ನಾಯ್ಕ

30 ದಿನಗಳ ಕಾಲ ಮಾಂಸಾಹಾರವನ್ನು ತ್ಯಜಿಸಿ!

ಮಾಂಸಾಹಾರವು ಸಂಪೂರ್ಣ ಪ್ರೋಟೀನ್ ಮೂಲವಾಗಿದ್ದು, ದೇಹಕ್ಕೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ನೀವು 30 ದಿನಗಳ ಕಾಲ ಮಾಂಸಾಹಾರವನ್ನು ತ್ಯಜಿಸಿ ಸಂಪೂರ್ಣ ಸಸ್ಯಾಹಾರವನ್ನು ಅನುಸರಿಸಿದರೆ, ನಿಮ್ಮ ದೇಹದಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ಜೀರ್ಣಕ್ರಿಯೆ

ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ದೇಹವು ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಸಸ್ಯಾಹಾರ ಸೇವಿಸಿದಾಗ ದೇಹಕ್ಕೆ ಸುಲಭವಾಗಿ ಶಕ್ತಿ ದೊರೆಯುತ್ತದೆ, ಇದರಿಂದ ನೀವು ದಿನವಿಡೀ ಹೆಚ್ಚು ಕ್ರಿಯಾಶೀಲರಾಗಿ ಮತ್ತು ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ.

ಹೃದಯದ ಆರೋಗ್ಯ

ಮಾಂಸದಲ್ಲಿರುವ ಪರ್ಯಾಪ್ತ ಕೊಬ್ಬು (Saturated Fat) ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಿಸಬಹುದು. 30 ದಿನಗಳ ಕಾಲ ಸಸ್ಯಾಹಾರ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟ ಕಡಿಮೆಯಾಗಿ, ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ತೂಕ ಇಳಿಕೆ

ಸಸ್ಯಾಹಾರಿ ಆಹಾರವು ಸಾಮಾನ್ಯವಾಗಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ಸಂಸ್ಕರಿಸಿದ ಆಹಾರವನ್ನು ಬಿಟ್ಟು ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಸೇವಿಸಿದರೆ, ಒಂದು ತಿಂಗಳೊಳಗೆ ಗಮನಾರ್ಹವಾಗಿ ತೂಕ ಇಳಿಸಿಕೊಳ್ಳಬಹುದು.

ಉರಿಯೂತ ಇಳಿಕೆ

ಅತಿಯಾದ ಮಾಂಸಾಹಾರವು ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಸಸ್ಯಾಹಾರಿ ಆಹಾರವು ದೇಹವನ್ನು ತಂಪಾಗಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.