ಹಾಗಲಕಾಯಿ ಜ್ಯೂಸ್​ನಲ್ಲಿರುವ ಜೀವಸತ್ವಗಳು 
ಫೋಟೋ ಗ್ಯಾಲರಿ

ಹಾಗಲಕಾಯಿ ಜ್ಯೂಸ್​ನಿಂದಾಗುವ ಅಡ್ಡಪರಿಣಾಮಗಳೇನು..? ಇದನ್ನೊಮ್ಮೆ ಓದಿ | Bitter gourd juice

ಮಣಿಕಂಠ ಪಾ ಹಿರೇಮಠ

ಹಾಗಲಕಾಯಿ ಜ್ಯೂಸ್​ನಲ್ಲಿರುವ ಜೀವಸತ್ವಗಳು

ಹಾಗಲಕಾಯಿ ಜ್ಯೂಸ್​ನಲ್ಲಿ ಫೋಲೇಟ್, ಸತು, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ. ಇದು ನಿಮ್ಮಲ್ಲಿ ರೋಗನಿರೋಧಕ ಶಕ್ತಿ, ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ಮಧುಮೇಹ ಸುಧಾರಣೆ

ಹಾಗಲಕಾಯಿ ಜ್ಯೂಸ್​ನ್ನು ಪ್ರತಿದಿನ ಸೇವಿಸುವುದರಿಂದ ಮಧುಮೇಹಿಗಳಿಗೆ ತುಂಬಾ ಸಹಾಯಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಮೂತ್ರಪಿಂಡದ ಆರೋಗವ್ಯವನ್ನು ಸಹ ಸುಧಾರಿಸುತ್ತದೆ ಎಂದು ಅನೇಕ ವರದಿಗಳು ಹೇಳುತ್ತವೆ.

ಚರ್ಮದ ಹೊಳಪು ಹೆಚ್ಚಳ

ಹಾಗಲಕಾಯಿ ಜ್ಯೂಸ್​ನ್ನು ವಿವಿಧ ಸೌಂದರ್ಯ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ. ಇದು ಚರ್ಮಕ್ಕೆ ಪ್ರಯೋಜನಗಳನ್ನು ನೀಡುವುದರೊಂದಿಗೆ, ಚರ್ಮದ ಹೊಳಪಿಗೆ ಸಹಾಯ ಮಾಡುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಹಾಗಲಕಾಯಿ ಜ್ಯೂಸ್​ ಅಡ್ಡಪರಿಣಾಮಗಳು

ಹಾಗಲಕಾಯಿ ಜ್ಯೂಸ್​ ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಹಾನಿಕಾರಕ. ಇದನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ನೋವು, ಅತಿಸಾರ ಮತ್ತು ಇತರ ಹಲವಾರು ಹೊಟ್ಟೆ ಸಮಸ್ಯೆಗಳು ಉಂಟಾಗಬಹುದು.