ತೂಕ ಹೆಚ್ಚಾಗುವುದು
ಹೆಚ್ಚು ಹೊತ್ತು ಕುಳಿತಾಗ ದೇಹದಲ್ಲಿ ಕ್ಯಾಲರಿ ಸುಡುವ ಪ್ರಮಾಣ ತೀರಾ ಕಡಿಮೆಯಾಗುತ್ತದೆ ಇದರಿಂದ ಕೊಬ್ಬು ಹೆಚ್ಚಾಗಿ ಮಧುಮೇಹ ಬರುವ ಸಾಧ್ಯತೆ ಇರುತ್ತದೆ.ಹೃದಯ ಸಂಬಂಧಿ ಕಾಯಿಲೆಗಳು
ಯಾವುದೇ ವ್ಯಕ್ತಿಯು ಹೆಚ್ಚು ಕುಳಿತಾಗ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿಯಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಒಳಗಾಗಬೇಕಾಗುತ್ತದೆ.ಕುತ್ತಿಗೆ- ಬೆನ್ನು-ಸೊಂಟ ನೋವು
ಸ್ಪೈನಲ್ ಡಿಸ್ಕ್ ಮೇಲೆ ನಿರಂತರ ಒತ್ತಡ ಬೀಳುವುದರಿಂದ ಇದು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಹಾಗೆಯೇ ಕುತ್ತಿಗೆ-ಭುಜದ ನೋವನ್ನು ಉಂಟು ಮಾಡುತ್ತದೆ.ರಕ್ತನಾಳಗಳ ಸಮಸ್ಯೆ
ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಕಾಲುಗಳಲ್ಲಿ ಸರಿಯಾಗಿ ರಕ್ತ ಓಡಾಡದೇ ಗಡ್ಡೆ ಆಗುತ್ತದೆ. ಇದರಿಂದ ಕಾಲು ಊದಿಕೊಳ್ಳುವುದು, ತೀವ್ರ ನೋವು, ಕೆಲವೊಮ್ಮೆ ರಕ್ತನಾಳ ತಡೆಯಾಗಿ ಸಾವಿಗೂ ಕಾರಣವಾಗಬಹುದು.ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಹೆಚ್ಚು ಓಡಾದದೇ ಇರುವುದರಿಂದ ಮೆದುಳಿಗೆ ರಕ್ತ-ಆಮ್ಲಜನಕ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ಖಿನ್ನತೆ, ಆತಂಕ 2 ಪಟ್ಟು ಹೆಚ್ಚಾಗುತ್ತದೆ.