ಒಣಗಿಸುವ ಗಾಳಿ ಮತ್ತು ಕಡಿಮೆ ತೇವಾಂಶ 
ಫೋಟೋ ಗ್ಯಾಲರಿ

ಚಳಿಗಾಲದಲ್ಲಿ ಕೂದಲು ಉದುರಲು ಕಾರಣಗಳೇನು? Hair health

ಭಾನುಪ್ರಿಯ ಡಿ.ಕೆ

ಒಣಗಿಸುವ ಗಾಳಿ ಮತ್ತು ಕಡಿಮೆ ತೇವಾಂಶ

ಚಳಿಗಾಲದ ಗಾಳಿಯಲ್ಲಿ ತೇವಾಂಶ ಕಡಿಮೆ ಇರುತ್ತದೆ. ಇದು ಸ್ಕಾಲ್ಪ್ ಮತ್ತು ಕೂದಲು ಒಣಗಿ, ಒಡೆಯಲು ಶುರುವಾಗಿಸುತ್ತದೆ. ಒಣಗಿದ ಸ್ಕಾಲ್ಪ್‌ನಲ್ಲಿ ಫಾಲಿಕಲ್ಸ್ ದುರ್ಬಲವಾಗಿ ಕೂದಲು ಬೇರಿನಿಂದಲೇ ಉದುರುತ್ತದೆ.

ಅತಿಯಾಗಿ ತಲೆಸ್ನಾನ ಮಾಡುವುದು

ಚಳಿಯಲ್ಲಿ ಬಿಸಿನೀರಿನಲ್ಲಿ ತಲೆಸ್ನಾನ ಮಾಡುವುದರಿಂದ ಕೂದಲಿನ ನೈಸರ್ಗಿಕ ಎಣ್ಣೆ ತೆಗೆದುಹಾಕಲ್ಪಡುತ್ತದೆ. ಹಾಗೆಯೇ ಹೆಚ್ಚು ಹೆಚ್ಚು ಶಾಂಪು ಬಳಸುವುದರಿಂದ ಸ್ಕಾಲ್ಪ್‌ನಲ್ಲಿ ಧೂಳು, ಡೆಡ್ ಸೆಲ್ಸ್ ಮತ್ತು ಎಣ್ಣೆ ಸಂಗ್ರಹವಾಗಿ ಫಾಲಿಕಲ್ಸ್ ಬ್ಲಾಕ್ ಆಗಿ ಕೂದಲು ಉದುರುತ್ತದೆ.

ಹೇರ್​ ಡ್ರೈಯರ್‌ನ ಅತಿಯಾದ ಬಳಕೆ

ತಲೆ ಸ್ನಾನ ಮಾಡಿದ ತಕ್ಷಣ ಕೂದಲನ್ನು ಒಣಗಿಸಿಕೊಳ್ಳಲು ಹೇರ್​ ಡ್ರೈಯರ್​ ಬಳಸುವುದರಿಂದ ಕೂದಲು ಒಣಗಿ, ಒಡೆಯುತ್ತದೆ. ಹಾಗೆಯೇ ಉದುರಲು ಪ್ರಾರಂಭಿಸುತ್ತದೆ.

ಆಹಾರದಲ್ಲಿ ಪೌಷ್ಟಿಕಾಂಶ ಕಡಿಮೆ

ಚಳಿಗಾಲದಲ್ಲಿ ಹಣ್ಣು-ತರಕಾರಿ ಕಡಿಮೆ ತಿನ್ನುವುದು, ಜಂಕ್​ ಫುಡ್​ ಜಾಸ್ತಿ ತಿನ್ನುವುದು, ವಿಟಮಿನ್ D, ಕಬ್ಬಿಣ, ಜಿಂಕ್, ಪ್ರೋಟೀನ್ ಕೊರತೆ ಉಂಟಾಗುತ್ತದೆ. ಇದು ನೇರವಾಗಿ ಕೂದಲಿನ ಬೇರು ದುರ್ಬಲಗೊಳಿಸುತ್ತದೆ.

ಜಲಸಂಚಯನದ ಕೊರತೆ

ಚಳಿಗಾಲದಲ್ಲಿ ಹೆಚ್ಚಿನ ಜನರು ನೀರನ್ನು ಕುಡಿಯುವುದನ್ನು ನಿಲ್ಲಿಸುತ್ತಾರೆ. ಇದು ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಕೂದಲು ಒಡೆಯುವುದು ಮತ್ತು ಉದುರುವುದು ಕಂಡುಬರುತ್ತದೆ.