ಕೂದಲಿನ ಆರೈಕೆ
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಶಾಖ ತೀವ್ರವಾಗಿ ಹೆಚ್ಚಾಗುತ್ತಿದೆ. ಇದರಿಂದ ಬೆವರು, ಶಾಖ ಮತ್ತು ಸೂರ್ಯನ ಬೆಳಕು ಆಗ್ಗಾಗ ಕೂದಲನ್ನು ತೊಳೆಯುವಂತೆ ಮಾಡುತ್ತದೆ. ಹೆಚ್ಚಾಗಿ ತಲೆಯನ್ನು ತೊಳೆಯುವುದರಿಂದ ಕೂದಲಿನ ಬೇರುಗಳು ದುರ್ಬಲಗೊಳ್ಳುತ್ತವೆ.ತೆಂಗಿನ ಎಣ್ಣೆ
ತೆಂಗಿನ ಎಣ್ಣೆ ಕೂದಲಿನ ಆರೋಗ್ಯಕ್ಕೆ ವ್ಯಾಪಕವಾಗಿ ಬಳಸಲಾಗುವ ಎಣ್ಣೆಗಳಲ್ಲಿ ಒಂದಾಗಿದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ಇದರಲ್ಲಿರುವ ಕೊಬ್ಬಿನಾಮ್ಲಗಳು ಕೂದಲಿನ ಬುಡದೊಳಗೆ ಆಳವಾಗಿ ಇಳಿದು ಪ್ರೋಟೀನ್ ಅನ್ನು ಹಚ್ಚಿಸುತ್ತದೆ. ಇದು ಬೇಸಿಗೆಯ ಶಾಖದಿಂದ ಉಂಟಾಗುವ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಈರುಳ್ಳಿ ಎಣ್ಣೆ
ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಎಣ್ಣೆ ಹೆಚ್ಚು ಪ್ರಚಲಿತದಲ್ಲಿದೆ. ಇದರಲ್ಲಿರುವ ಸಲ್ಫರ್ ಅಂಶವು ಕೂದಲು ಉದುರುವಿಕೆಯನ್ನು ತಡೆದು ಹೊಸ ಕೂದಲನ್ನು ಹುಟ್ಟಿಸಲು ಸಹಾಯ ಮಾಡುತ್ತದೆ.ನೆಲ್ಲಿಕಾಯಿ ಎಣ್ಣೆ
ವಿಟಮಿನ್ ಸಿ ಅಂಶ ಹೆಚ್ಚಿರುವ ನೆಲ್ಲಿಕಾಯಿ ಎಣ್ಣೆಯು ಅಕಾಲಿಕ ನರೆತವನ್ನು ತಡೆಯುತ್ತದೆ. ಇದು ಕೂದಲಿನ ಬೇರುಗಳಿಗೆ ಬಲ ನೀಡುವುದಲ್ಲದೆ, ತಲೆಯಲ್ಲಿನ ತುರಿಕೆಯನ್ನು ಕಡಿಮೆ ಮಾಡುತ್ತದೆ.ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಒಮೆಗಾ ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ಕೂದಲನ್ನು ಆರೋಗ್ಯಕರವಾಗಿ ಕಾಪಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಒಡೆಯುವಿಕೆಯನ್ನು ಕಡಿಮೆ ಮಾಡಿ, ಕೂದಲಿನ ಆರೈಕೆಯನ್ನು ಹೆಚ್ಚಿಸುತ್ತದೆ.ಭೃಂಗರಾಜ ಎಣ್ಣೆ
ಇದನ್ನು 'ಕೂದಲಿನ ರಾಜ' ಎಂದು ಕರೆಯಲಾಗುತ್ತದೆ. ಇದನ್ನು ನಿಯಮಿತವಾಗಿ ತಲೆಗೆ ಹಚ್ಚುವುದರಿಂದ ಕೂದಲಿನ ಕಿರುಚೀಲಗಳನ್ನು ಬಲಪಡಿಸಿ, ಒತ್ತಡದಿಂದ ಉದುರುತ್ತಿರುವ ಕೂದಲನ್ನು ತಡೆಯಲು ಸಹಾಯ ಮಾಡುತ್ತದೆ.