ಚಳಿಗಾಲದಲ್ಲಿ ಶೀತ ವಾತಾವರಣ
ಚಳಿಗಾಲದಲ್ಲಿ ಶೀತ ವಾತಾವರಣ ಇರುವುದರಿಂದ ಜನರು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ತಿಳಿಯದೆ ಮಾಡುವ ಕೆಲವು ತಪ್ಪುಗಳಿಂದ ಅನೇಕ ಜನರು ತೊಂದರೆಗೆ ಸಿಲುಕುತ್ತಾರೆ. ಚಳಿಗಾಲದಲ್ಲಿ ಶೀತ, ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತವೆ. ನೀವು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ, ಅದು ನಿಮ್ಮ ಆರೋಗ್ಯ ಮತ್ತು ಜೀವನಶೈಲಿಯ ಮಅತಿಯಾದ ಚಹಾ/ಕಾಫಿ ಸೇವನೆ ಬೇಡ
ಚಳಿಗಾಲದಲ್ಲಿ ಬಿಸಿ ಬಿಸಿ ಚಹಾ-ಕಾಫಿ ಕುಡಿಯಲು ಇಷ್ಟವಾಗುತ್ತದೆ. ಆದರೆ ಅತಿಯಾದ ಕೆಫೀನ್ ಸೇವನೆಯಿಂದ ದೇಹದಲ್ಲಿ ನಿರ್ಜಲೀಕರಣ (Dehydration) ಉಂಟಾಗಬಹುದು.ಎಣ್ಣೆಯಲ್ಲಿ ಕರಿದ ಪದಾರ್ಥಗಳು
ಬೋಂಡಾ, ಬಜ್ಜಿ, ಸಮೋಸಾಗಳನ್ನು ಅತಿಯಾಗಿ ತಿನ್ನಬೇಡಿ. ಚಳಿಗಾಲದಲ್ಲಿ ಜೀರ್ಣಾಂಗವ್ಯೂಹವು ಸ್ವಲ್ಪ ನಿಧಾನವಾಗಿ ಕೆಲಸ ಮಾಡುವುದರಿಂದ, ಇವು ಗ್ಯಾಸ್ ಅಥವಾ ಅಜೀರ್ಣಕ್ಕೆ ಕಾರಣವಾಗಬಹುದು.ನೀರು ಕುಡಿಯುವುದನ್ನು ಕಡಿಮೆ ಮಾಡುವುದು
ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಇರುತ್ತದೆ, ಹಾಗೆಂದು ನೀರು ಕುಡಿಯುವುದನ್ನು ಬಿಡಬೇಡಿ. ದೇಹದಲ್ಲಿನ ಕಶ್ಮಲಗಳನ್ನು ಹೊರಹಾಕಲು ನೀರು ಅತ್ಯಗತ್ಯ.ಮಾಯಿಶ್ಚರೈಸರ್ ಹಾಕದಿರುವುದು
ಚಳಿಗಾಲದಲ್ಲೂ ಸೂರ್ಯನ ಕಿರಣಗಳು ಚರ್ಮಕ್ಕೆ ಹಾನಿ ಮಾಡಬಹುದು, ಸ್ನಾನದ ನಂತರ ಚರ್ಮ ತೇವಾಂಶದಿಂದಿರುವಾಗಲೇ ಮಾಯಿಶ್ಚರೈಸರ್ ಅಥವಾ ತೆಂಗಿನೆಣ್ಣೆ ಹಚ್ಚುವುದನ್ನು ಮರೆಯಬೇಡಿ.ಹಸಿ ತರಕಾರಿ ಸೇವನೆ!
ಸೌತೆಕಾಯಿ, ಕ್ಯಾರೆಟ್‌ನಂತಹ ಹಸಿ ತರಕಾರಿಗಳು ದೇಹವನ್ನು ತಂಪಾಗಿಸುತ್ತವೆ. ಇದರ ಬದಲು ಬೇಯಿಸಿದ ತರಕಾರಿ ಅಥವಾ ಬಿಸಿ ಸೂಪ್ ಸೇವಿಸುವುದು ಉತ್ತಮ.