ಮಿಸ್ ಆಯ್ತು ಶತಕ
ನಿನ್ನೆ (ಜ.11) ಗುಜರಾತಿನ ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ದಾಖಲೆಗಳ ಸರದಾರ, ಚೇಸ್ ಮಾಸ್ಟರ್, 'ರನ್ ಮಷಿನ್' ಆದ ವಿರಾಟ್ ಕೊಹ್ಲಿ (93 ರನ್, 91 ಎಸೆತ, 8 ಬೌಂಡರಿ, 1 ಸಿಕ್ಸರ್) ಸ್ಫೋಟಕ ಇನ್ನಿಂಗ್ಸ್ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ
ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವಿರಾಟ್, "ಶತಕವನ್ನು ಕಳೆದುಕೊಂಡಿದ್ದಕ್ಕೆ ನನಗೆ ಸ್ವಲ್ಪವೂ ಬೇಸರವಿಲ್ಲ. ತಂಡದ ಗೆಲುವಷ್ಟೇ ನನಗೆ ತುಂಬಾ ಮುಖ್ಯ ಎಂದರು.ಲೆಕ್ಕ ನಾನಿಡಲ್ಲ
ಇದೇ ವೇಳೆ ನೀವೆಷ್ಟು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕಿಂಗ್ ಕೊಹ್ಲಿ, ನಿಜಕ್ಕೂ ಎಷ್ಟಿದೆ? ಎಷ್ಟು ಬಂದಿವೆ ಎಂಬುದರ ಲೆಕ್ಕ ನಾನಿಡಲ್ಲ. ಅಷ್ಟಕ್ಕೂ, ನನಗೆ ಬಂದ ಪ್ರಶಸ್ತಿಗಳನ್ನು ನಾನು ನನ್ನೊಂದಿಗೆ ಇಟ್ಟುಕೊಳ್ಳುವುದಿಲ್ಲ" ಎಂದು ಹೇಳಿದರು.ಅಮ್ಮನಿಗೆ ಕಳುಹಿಸುವೆ
ಪಂದ್ಯಗಳಿಂದ ಬಂದಿರುವ ಪ್ರತಿಯೊಂದು ಪ್ರಶಸ್ತಿಗಳನ್ನು ಗುರುಗ್ರಾಮ್ನಲ್ಲಿರುವ ನನ್ನ ತಾಯಿಗೆ ಕಳುಹಿಸುತ್ತೀನಿ. ಇದನ್ನೆಲ್ಲ ನೋಡುತ ಅವರು ಖುಷಿ ವ್ಯಕ್ತಪಡಿಸುತ್ತಾರೆ. ಅವರಿಗೆ ನನ್ನ ಅವಾರ್ಡ್ಗಳನ್ನು ನೋಡುವುದೇ ಒಂದು ಸಂತಸ ಎಂದರು.ಬಯಸಿದ್ದಕ್ಕಿಂತ ಹೆಚ್ಚಿನದನ್ನು ದೇವರು ಕೊಟ್ಟಿದ್ದಾನೆ
ಇಲ್ಲಿಯವರೆಗಿನ ಪಯಣವನ್ನು ಒಮ್ಮೆ ಮೆಲಕು ಹಾಕಿದಾಗ ಎಷ್ಟು ದೂರ ಸಾಗಿ ಬಂದಿದ್ದೀನಿ. ಇದೊಂದು ಕನಸು ಎಂದೇ ಅನಿಸುತ್ತೆ. ನನ್ನ ಸಾಮರ್ಥ್ಯ ಏನೆಂಬುದು ನನಗೆ ಮೊದಲೇ ತಿಳಿದಿತ್ತು. ಆದರೂ, ನಾನು ಈ ಹಂತಕ್ಕೆ ಬರಲು ತುಂಬಾ ಶ್ರಮಿಸಬೇಕಾಯಿತು. ನಾನು ಬಯಸಿದ್ದಕ್ಕಿಂತ ಹೆಚ್ಚಿನದನ್ನು ದೇವರು ನೀಡಿದ್ದಾನೆ. ಅದಕ್ಕಾಗಿ ನಾನು ದೇವರಿಗೆ ಎಂದಿಗೂ ಕೃತಜ್ಞ ಎಂದು ಕೊಹ್ಲಿ ಹೇಳಿದರು.