ದಿಂಬಿನ ಕೆಳಗೆ ಈ ವಸ್ತು ಇರಿಸಲು ಮರೆಯಬೇಡಿ!
ದಿಂಬಿನ ಕೆಳಗೆ ಈ ವಸ್ತು ಇರಿಸಲು ಮರೆಯಬೇಡಿ!
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಮುನ್ನ ಕೆಲವು ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗೆ ಇಡುವುದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಜೊತೆಗೆ ಉತ್ತಮ ನಿದ್ರೆ ಸಿಗುತ್ತದೆ. ನಿಮ್ಮ ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲೂ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎನ್ನಲಾಗುತ್ತದೆ. ಈ ಕುರಿತಾಗಿ ನಾವು ಇಂದು ತಿಳಿಸುಕೊಳ್ಳೋಣ.ನೀರನ್ನು ತುಂಬಿದ ಪಾತ್ರೆ
ನೀವು ಮಲಗುವ ಮುನ್ನ ನಿಮ್ಮ ತಲೆಯಿಂದ ಸ್ವಲ್ಪ ದೂರದಲ್ಲಿ ನೀರಿನಿಂದ ತುಂಬಿದ ಪಾತ್ರೆಯನ್ನು ಇಡಬೇಕು. ಈ ಸಣ್ಣ ವಾಸ್ತು ಸಲಹೆಗಳು ನಿಮ್ಮ ಜೀವನದ ದಿಕ್ಕನ್ನು ಧನಾತ್ಮಕವಾಗಿ ಬದಲಾಯಿಸಬಹುದು.ಬೆಳ್ಳುಳ್ಳಿ
ವಾಸ್ತು ಪ್ರಕಾರ, ನಿಮ್ಮ ದಿಂಬಿನ ಕೆಳಗೆ ಒಂದು ಬೆಳ್ಳುಳ್ಳಿ ಎಸಳನ್ನು ಇಡುವುದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರುವುದಲ್ಲದೆ, ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಬೆಳ್ಳುಳ್ಳಿ ಎಸಳು ಸಂಪತ್ತನ್ನು ಆಕರ್ಷಿಸುತ್ತದೆ.ನವಿಲು ಗರಿ ದುಃಸ್ವಪ್ನಗಳನ್ನು ತಡೆಯುತ್ತದೆ!
ನಿಮ್ಮ ದಿಂಬಿನ ಕೆಳಗೆ ನವಿಲು ಗರಿಯನ್ನು ಇಡುವುದರಿಂದ ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುವುದಲ್ಲದೆ, ಎಲ್ಲಾ ನಕಾರಾತ್ಮಕತೆಗಳನ್ನು ಹೋಗಲಾಡಿಸುತ್ತದೆ. ನಿಮ್ಮ ದಿಂಬಿನ ಕೆಳಗೆ ನವಿಲು ಗರಿಯನ್ನು ಇಡುವುದರಿಂದ ರಾಹುವಿನ ನಕಾರಾತ್ಮಕ ಪರಿಣಾಮಗಳು ದೂರವಾಗುತ್ತವೆ ಮತ್ತು ದುಃಸ್ವಪ್ನಗಳನ್ನು ತಡೆಯುತ್ತದೆ.ತುಳಸಿ ಎಲೆ
ದಿಂಬಿನ ಕೆಳಗೆ ಕೆಲವು ತುಳಸಿ ಎಲೆಗಳನ್ನು ಇಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ. ತುಳಸಿ ಎಲೆಗಳು ನಕಾರಾತ್ಮಕತೆಯನ್ನು ದೂರ ಮಾಡಿ ನಿಮಗೆ ಶಾಂತಿಯುತವಾಗಿ ಮಲಗಲು ಅನುವು ಮಾಡಿಕೊಡುತ್ತದೆ.ನೀವು ತುಳಸಿ ಮಾತೆಯ ಆಶೀರ್ವಾದ ಮತ್ತು ಜೀವನದಲ್ಲಿ ಆರ್ಥಿಕ ಲಾಭವನ್ನು ಪಡೆಯುತ್ತೀರಿ.