ಹಣ ಮತ್ತು ಬಂಗಾರ
ವಾಸ್ತು ಶಾಸ್ತ್ರದ ಪ್ರಕಾರ ಫ್ರಿಜ್ಡ್ ಮೇಲೆ ಬಂಗಾರ ಮತ್ತು ಹಣವನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ನಕರಾತ್ಮಕ ಪರಿಣಾಮ ಬೀರುತ್ತದೆ. ಹಾಗೆಯೇ, ಇದರಿಂದ ಆರ್ಥಿಕ ನಷ್ಟ, ವ್ಯವಹಾರದಲ್ಲಿ ತೊಂದರೆ, ಕುಟುಂಬದಲ್ಲಿ ಗಲಭೆ ಉಂಟಾಗುತ್ತದೆ ಎಂದು ತಿಳಿಸಲಾಗುತ್ತದೆ.ಬಾಂಬೂ ಸಸ್ಯ (ಬಿದಿರಿನ ಸಸ್ಯಗಳು)
ಅನೇಕ ಜನರು (Bamboo plant) ಬಿದಿರಿನ ಗಿಡವನ್ನು ತಂದು ಮನೆಯಲ್ಲಿಡುತ್ತಾರೆ. ಇದು ಮನೆಗೆ ಸಕರಾತ್ಮಕತೆಯನ್ನು ಬೀರುತ್ತದೆ. ಆದರೆ, ಈ ಗಿಡವನ್ನು ಟೇಬಲ್ ಅಥವಾ ಫ್ರಿಜ್ಡ್ ಮೇಲೆ ಇಡುವುದರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ. ಇದು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತದೆ. ಹಾಗೆಯೇ, ಆರ್ಥಿಕವಾಗಿ ಕುಗ್ಗಿಸುತ್ತದೆ.ಟ್ರೋಫಿಗಳು ಮತ್ತು ಪ್ರಶಸ್ತಿಗಳು
ವಾಸ್ತು ಶಾಸ್ತ್ರದ ಪ್ರಕಾರ, ಫ್ರಿಜ್ ಮೇಲೆ ಟ್ರೋಫಿ ಅಥವಾ ಪ್ರಶಸ್ತಿಗಳನ್ನು ಇಡುವುದು ಒಳ್ಳೆಯದಲ್ಲ. ಫ್ರಿಜ್ಡ್ ನೀರು ತತ್ವಕ್ಕೆ ಸಂಬಂಧಿಸಿದ್ದರೆ, ಟ್ರೋಫಿಗಳು ಲೋಹ ತತ್ವಕ್ಕೆ ಸೇರಿವೆ. ಈ ತತ್ವಗಳಿಂದ ಸಂಘರ್ಷ ಉಂಟಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ, ಕುಟುಂಬದಲ್ಲಿ ಜಗಳಗಳು, ಆರೋಗ್ಯದಲ್ಲಿ ಏರುಪೇರು, ಒತ್ತಡ, ಉಂಟಾಗುತ್ತದೆ.ಅಕ್ವೇರಿಯಂ
ಇಂದಿನ ದಿನಗಳಲ್ಲಿ ಜನರು ಆದಷ್ಟು ಮನೆ ಸುಂದರವಾಗಿ ಕಾಣಬೇಕೆಂದು ಹಲವಾರು ರೀತಿಯ ವಸ್ತುಗಳನ್ನು ತಂದು ಮನೆಯಲ್ಲಿಡುತ್ತಾರೆ. ಅದರಲ್ಲಿ ಹೆಚ್ಚು ಆಕರ್ಷಕವಾಗುವಂತೆ ಅಕ್ವೇರಿಯಂನ್ನು ಫ್ರಿಜ್ಡ್ ಮೇಲೆ ಇಟ್ಟಿರುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ಮೀನುಗಳು ಬೇಗ ಸಾಯುತ್ತವೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಇದು ನಿಮ್ಮ ಮನೆಗೆ ನಕರಾತ್ಮಕ ಪರಿಣಾಮ ಬೀರುತ್ತದೆ.