ಫೆ.01ರ ಕೇಂದ್ರ ಬಜೆಟ್ 11 ಗಂಟೆಗೆ
ಫೆ.01ರ ಕೇಂದ್ರ ಬಜೆಟ್ 11 ಗಂಟೆಗೆ
ದೇಶದ ಜನತೆಯ ಕಣ್ಣು ಸದ್ಯ ಫೆ.01ರ ಕೇಂದ್ರ ಬಜೆಟ್ ಮೇಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 9ನೇ ಬಾರಿಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿರುವುದು ವಿಶೇಷ. ಪ್ರತಿವರ್ಷ ಬೆಳಗ್ಗೆ 11 ಗಂಟೆಗೆ ಮಂಡನೆಯಾಗುವ ಬಜೆಟ್, 1999ಕ್ಕೂ ಹಿಂದೆ ಸಂಜೆ 5 ಗಂಟೆಗೆ ನಡೆಯುತ್ತಿತ್ತು ಎಂಬ ಸಂಗತಿಯೇ ರೋಚಕ.ದಿಢೀರ್ ಬದಲಾವಣೆ
ಈ ಮೊದಲು, ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಆದರೆ, ನಂತರದಲ್ಲಿ ಈ ಸಂಪ್ರದಾಯ ಇದ್ದಕ್ಕಿದ್ದಂತೆ ಬದಲಾಯಿತು. ಅಷ್ಟಕ್ಕೂ ಸಮಯದಲ್ಲಿ ಏಕೆ ದಿಢೀರ್ ಬದಲಾವಣೆಗೊಂಡಿತು? ವಾಸ್ತವವಾಗಿ ಈ ನಿರ್ಧಾರವನ್ನು ಕೈಗೊಂಡವರು ಯಾರು? ಎಂಬ ಒಂದಷ್ಟು ಕುತೂಹಲಕಾರಿ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ವಿವರವಾದ ಉತ್ತರ.ಬ್ರಿಟಿಷ್ ಸಮಯಕ್ಕೆ ತಕ್ಕಂತೆ ಬಜೆಟ್ ಮಂಡನೆ
ಸ್ವಾತಂತ್ರ್ಯದ ಬಳಿಕ ಸುಮಾರು 53 ವರ್ಷಗಳ ಕಾಲ, ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಈ ಸಂಪ್ರದಾಯವು ಬ್ರಿಟಿಷ್ ಕಾಲದ್ದು. ಆ ಸಮಯದಲ್ಲಿ, ಭಾರತದಲ್ಲಿ ಸಂಜೆ 5 ಗಂಟೆಯಾಗಿದ್ದರೆ, ಬ್ರಿಟನ್‌ನಲ್ಲಿ ಬೆಳಗ್ಗೆ 11 ಗಂಟೆಯಾಗಿರುತ್ತಿತ್ತು.ಅಲ್ಲಿನ ಸಮಯಕ್ಕೆ ಹೊಂದಾಣಿಕೆ
ಹೀಗಾಗಿ, ನಮ್ಮ ಬಜೆಟ್ ಸಂಬಂಧಿತ ಮಾಹಿತಿಯನ್ನು ಅಲ್ಲಿನ ಸಂಸತ್ತಿಗೆ ಅನುಗುಣವಾಗಿ, ಅಧಿಕಾರಿಗಳೊಂದಿಗೆ ಸುಲಭವಾಗಿ ಹಂಚಿಕೊಳ್ಳಲು ಸರ್ಕಾರ ಲಂಡನ್ ಸಮಯಕ್ಕೆ ತಕ್ಕಂತೆ ನಿಗದಿಪಡಿಸುತ್ತಿತ್ತು ಎನ್ನಲಾಗಿದೆ.1999ರಲ್ಲಿ ಬ್ರಿಟಿಷ್ ಸಂಪ್ರದಾಯ ರದ್ದು
ಸ್ವಾತಂತ್ರ್ಯದ ನಂತರ ಈ ವ್ಯವಸ್ಥೆಯು ದೀರ್ಘಕಾಲದವರೆಗೆ ಮುಂದುವರೆಯಿತು. ಕಾಲಾನಂತರದಲ್ಲಿ, ಅದರ ಅಗತ್ಯತೆ ಕುಸಿಯಲಾರಂಭಿಸಿತು. ಆದರೆ, ಸಂಪ್ರದಾಯ ಮಾತ್ರ ಬದಲಾಗಲಿಲ್ಲ. ಅಂತಿಮವಾಗಿ, ಇದನ್ನು 1999ರಲ್ಲಿ ಕೈಬಿಡಲಾಯಿತು.ವಾಜಪೇಯಿ ಸರ್ಕಾರದಲ್ಲಿ....
ಆ ಸಮಯದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಯಶವಂತ್ ಸಿನ್ಹಾ ಅವರು ಹಣಕಾಸು ಸಚಿವರಾಗಿದ್ದರು. ಅವರು ಮೊದಲ ಬಾರಿಗೆ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸುವುದು ಸರಿ ಎಂದು ನಿರ್ಧರಿಸಿದರು. ಈ ಮೂಲಕ ದಶಕಗಳಷ್ಟು ಹಳೆಯದಾದ ಸಂಪ್ರದಾಯಕ್ಕೆ ಕೊನೆ ಹಾಡಿದರು.ಬಜೆಟ್ ದಿನಾಂಕ, ಸಮಯ ಎರಡೂ ಬದಲು
2017ರಲ್ಲಿ ಬಜೆಟ್ ಸಮಯ ಮಾತ್ರವಲ್ಲ, ದಿನಾಂಕವೂ ಬದಲಾಯಿತು. ಈ ಮೊದಲು ಕೇಂದ್ರ ಬಜೆಟ್ ಫೆಬ್ರವರಿ ಕೊನೆಯ ವಾರದಲ್ಲಿ ಮಂಡಿಸಲಾಗುತ್ತಿತ್ತು. ಈ ಸಂಪ್ರದಾಯವು ಬ್ರಿಟಿಷ್ ಯುಗದಿಂದಲೂ ನಡೆದುಕೊಂಡು ಬಂದಿತ್ತು. ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳು ಮತ್ತು ತೆರಿಗೆ ಬದಲಾವಣೆಗಳ ಅನುಷ್ಠಾನ ವಿಳಂಬವಾಗುತ್ತದೆ ಎಂದು ಭಾವಿಸಿ, ಫೆ.01ಕ್ಕೆ ಬೆಳಗ್ಗೆ 11 ಗಂಟೆಗೆ ನಿಗದಿ ಮಾಡಲಾಯಿತು