ಕೂದಲನ್ನು ಸರಿಯಾಗಿ ಬಾಚಿ ಕತ್ತಿನ ಕೆಳಭಾಗದಲ್ಲಿ ಪೋನಿಟೇಲ್ ಕಟ್ಟಿಕೊಳ್ಳಿ. ಮುಂದೆ ಕೆಲವು ಕೂದಲಿನ ಎಳೆಗಳನ್ನು ಸಡಿಲವಾಗಿ ಬಿಟ್ಟರೆ ಇನ್ನಷ್ಟು ಸಹಜ ಹಾಗೂ ಸ್ಟೈಲಿಶ್ ಲುಕ್ ಸಿಗುತ್ತದೆ. ಸಿಂಪಲ್ ಕುರ್ತಾ ಅಥವಾ ಸೀರೆಯ ಜತೆಯಲ್ಲೂ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ.
ತುಂಬಾ ಅಚ್ಚುಕಟ್ಟಾಗಿ ಮಾಡಬೇಕಿಲ್ಲ. ಕೂದಲನ್ನು ಹಿಂದಕ್ಕೆ ತೆಗೆದುಕೊಂಡು ಸಡಿಲವಾಗಿ ಬನ್ ಕಟ್ಟಿಕೊಳ್ಳಿ. ಮುಖದ ಎರಡೂ ಬದಿಯಲ್ಲಿ ಕೆಲವು ಕೂದಲಿನ ಎಳೆಗಳನ್ನು ಬಿಡುವುದರಿಂದ ಸರಳವಾಗಿಯೇ ಆಕರ್ಷಕ ಲುಕ್ ಸಿಗುತ್ತದೆ. ಸಣ್ಣ ಕಿವಿಯೋಲೆ ಅಥವಾ ಜುಮ್ಕಾ ಜೊತೆ ಈ ಸ್ಟೈಲ್ ಇನ್ನಷ್ಟು ಸುಂದರವಾಗಿ ಕಾಣುತ್ತದೆ
ಮುಂಭಾಗದ ಕೂದಲಿನ ಒಂದು ಭಾಗವನ್ನು ತೆಗೆದುಕೊಂಡು ಹಿಂದಕ್ಕೆ ಕ್ಲಿಪ್ ಮಾಡಿ, ಉಳಿದ ಕೂದಲನ್ನು ಹಾಗೆಯೇ ಬಿಡಿ. ಕೂದಲಿನ ಉದ್ದವನ್ನು ತೋರಿಸುವ ಈ ಸ್ಟೈಲ್ ದಿನನಿತ್ಯದ ಬಳಕೆಗೆ ಸೂಕ್ತವಾಗಿದ್ದು, ಫೋಟೋಗಳಲ್ಲೂ ಚೆನ್ನಾಗಿ ಕಾಣುತ್ತದೆ.
ಕೂದಲನ್ನು ಒಂದು ಬದಿಗೆ ತೆಗೆದುಕೊಂಡು ಸರಳವಾಗಿ ಜಡೆ ಹಾಕಿ. ಜಡೆಯನ್ನು ಸ್ವಲ್ಪ ಸಡಿಲವಾಗಿ ಮಾಡಿದರೆ ಹೆಚ್ಚು ನೈಸರ್ಗಿಕ ಹಾಗೂ ಸುಂದರವಾದ ಲುಕ್ ಸಿಗುತ್ತದೆ. ಸಾಂಪ್ರದಾಯಿಕ ಉಡುಪುಗಳ ಜೊತೆಗೆ ಈ ಹೇರ್‌ಸ್ಟೈಲ್ ವಿಶೇಷವಾಗಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕಾಲೇಜು ಹುಡುಗಿಯರಿಗೆ ಇದು ತುಂಬಾ ಉಪಯುಕ್ತ.
ಕೂದಲನ್ನು ಮೇಲಕ್ಕೆ ತೆಗೆದುಕೊಂಡು ಚೆನ್ನಾಗಿ ಬಿಗಿಯಾಗಿ ಪೋನಿಟೇಲ್ ಕಟ್ಟಿಕೊಳ್ಳಿ. ಇದು ಮುಖಕ್ಕೆ ಸ್ಪಷ್ಟವಾದ ಲುಕ್ ನೀಡುವುದರ ಜೊತೆಗೆ ಸರಳ ಉಡುಪಿಗೂ ಸ್ಟೈಲಿಶ್ ಟಚ್ ನೀಡುತ್ತದೆ. ಕಾಲೇಜು ಅಥವಾ ಹೊರಗೆ ಹೋಗುವಾಗ ಕಡಿಮೆ ಸಮಯದಲ್ಲಿ ಮಾಡಿಕೊಳ್ಳಬಹುದಾದ ಸುಲಭ ಹೇರ್‌ಸ್ಟೈಲ್ ಇದಾಗಿದೆ.