ದೀಪಾವಳಿ ಹಬ್ಬವನ್ನು ಭಾರತದಲ್ಲಿ ಭಾರೀ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಹಬ್ಬಕ್ಕೂ ಮುನ್ನವೇ ಮನೆಯನ್ನು ಸ್ವಚ್ಛಗೊಳಿಸಿ ಅಂದವಾಗಿಡುತ್ತೇವೆ. ಹಬ್ಬದ ದಿನ ಹೊಸ ಬಟ್ಟೆ ಖರೀದಿಸಿ..ಫೋಟೋ ಶೂಟ್ಗಳನ್ನು ಮಾಡಿಕೊಳ್ಳುತ್ತೇವೆ. ದೀಪ ಹಚ್ಚಿ ಸಂಭ್ರಮಿಸುತ್ತೇವೆ. ದೇವರಿಗೆ ನಮಿಸುತ್ತೇವೆ. ಅದರೊಂದಿಗೆ ಸಿಹಿ ತಯಾರಿಸಿ..ನೆಂಟರಿಸ್ಟರಿಗೆ ಹಂಚುತ್ತೇವೆ.
ಈ ಬಾರಿ ನೀವು ನಿಮ್ಮ ಮನೆಯಲ್ಲಿ ಹೋಳಿಗೆ, ಕಜ್ಜಾಯ ಮಾಡುವ ಜೊತೆಗೆ ಹೊಸದಾಗಿ ಹಳೆಯ ಶೈಲಿಯ ಹೆಸರು ಬೇಳೆ ಹಲ್ವಾ ತಯಾರಿಸಿ. ಇದನ್ನು ತುಪ್ಪದಲ್ಲಿ ಮಾಡಿ ಬಾಯಲ್ಲಿಟ್ಟರೆ ಕರಗೋದಂತು ಗ್ಯಾರಂಟಿ. ಹಲ್ವಾ ತಯಾರಿಸಲು ಏನೆಲ್ಲ ಬೇಕು ಎನ್ನುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ
ಹೆಸರು ಬೇಳೆ 1 ಕಪ್
ಸಕ್ಕರೆ: 1 ಕಪ್
ತುಪ್ಪ: ಉರಿದುಕೊಳ್ಳಲು ಬೇಕಾಗುವಷ್ಟು
ಹಾಲು: 1.5ಕಪ್
ಏಲಕ್ಕಿ ಪುಡಿ: ಸ್ವಲ್ಪ
ಗೋಡಂಬಿ, ದ್ರಾಕ್ಷಿ, ಬಾದಾಮಿ: ಸ್ವಲ್ಪ
ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಕೊಂಡು 2-3 ಗಂಟೆ ನೀರಿನಲ್ಲಿ ನೆನಸಿಡಿ. ನಂತರ ನೀರನ್ನು ಸೋಸಿ ಹೆಚ್ಚು ನೀರು ಹಾಕದೆ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಒಂದು ಬಾಣಲೆಗೆ ಡ್ರೈ ಫ್ರೂಟ್ ಹಾಕಿ ಉರಿದುಕೊಂಡು ಅದನ್ನು ಪಕ್ಕದಲ್ಲಿಟ್ಟುಕೊಳ್ಳಿ. ಅದೇ ಬಾಣಲಿಗೆ ರುಬ್ಬಿಟ್ಟ ಹೆಸರು ಬೇಳೆಯ ಮಿಕ್ಸ್ ಅನ್ನು ಹಾಕಿ ಉರಿದು ಕೊಳ್ಳಿ. ಹೆಸರು ಬೇಳೆಯು ಚಿನ್ನದ ಬಣ್ಣಕ್ಕೆ ತಿರುಗುವವರೆಗೂ ಉರಿದುಕೊಳ್ಳಬೇಕಾಗುತ್ತದೆ.
ಹೆಸರು ಬೇಳೆ ಚಿನ್ನದ ಬಣ್ಣಕ್ಕೆ ತಿರುಗಿದ ನಂತರ ಅದಕ್ಕೆ ಹಾಲು ಹಾಕಿ ಮತ್ತೊಮ್ಮೆ ಬೇಯಿಸಿಕೊಳ್ಳಿ. ಹಾಲು ಗಟ್ಟಿಯಾದ ನಂತರ ಮತ್ತೆ ಅದಕ್ಕೆ ಸಕ್ಕರೆ ಹಾಕಿ ಉರಿದುಕೊಳ್ಳಬೇಕಾಗುತ್ತದೆ. ಈಗ ಹೆಸರು ಬೇಳೆ ಮಿಶ್ರಣದಿಂದ ತುಪ್ಪ ಬಿಟ್ಟುಕೊಳ್ಳಲು ಬರುವಾಗ ಉರಿದಿಟ್ಟ ಡ್ರೈ ಫ್ರೂಟ್ಸ್ ಮತ್ತು ಏಲಕ್ಕಿ ಹಾಕಿ ಕಲಿಸಿ..ಈಗ ನಿಮ್ಮ ಹಲ್ವಾ ತಿನ್ನಲು ರೆಡಿಯಾಗಿದೆ. ದೀಪಾವಳಿ ಹಬ್ಬಕ್ಕೆ ನಿಮ್ಮ ನಿವಾಸಕ್ಕೆ ಆಗಮಿಸುವ ಸ್ನೇಹಿತರಿಗೆ ಈ ಹಲ್ವಾ ತಯಾರಿಸಿ ಕೊಡಬಹುದಾಗಿದೆ, (ಏಜೆನ್ಸೀಸ್).