ಮಾಸ್ಟರ್ ಬ್ಲಾಸ್ಟರ್ ಮರೆಯಲಾಗದ 5 ಕ್ಷಣಗಳು! 
ಫೋಟೋ ಗ್ಯಾಲರಿ

ಈ ಫೋಟೋಗಳಲ್ಲಿವೆ ಕ್ರಿಕೆಟ್​ ದೇವರ ಗೋಲ್ಡನ್ ಮೊಮೆಂಟ್ಸ್! | Sachin Tendulkar

ಮಣಿಕಂಠ ಪಾ ಹಿರೇಮಠ

ಮಾಸ್ಟರ್ ಬ್ಲಾಸ್ಟರ್ ಮರೆಯಲಾಗದ 5 ಕ್ಷಣಗಳು!

ಭಾರತದ ದಂತಕಥೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಕ್ರಿಕೆಟ್​ ದೇವರ ಕ್ರಿಕೆಟ್ ಪಯಣದ ಐದು ಪ್ರಮುಖ ಘಟನಾವಳಿಗಳ ವಿವರ ಇಲ್ಲಿದೆ.

ಮೊದಲ ಅಂತರರಾಷ್ಟ್ರೀಯ ಶತಕ (1990)

ಮಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕ (ಅಜೇಯ 119*) ಬಾರಿಸಿ ಪೆವಿಲಿಯನ್‌ಗೆ ಮರಳಿದ ಕ್ಷಣ. ಈ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 68 ಮತ್ತು 119 ರನ್ ಗಳಿಸಿದ ಸಚಿನ್, ಪಂದ್ಯವನ್ನು 'ಡ್ರಾ' ಮಾಡಿಕೊಳ್ಳಲು ನೆರವಾಗಿ 'ಪಂದ್ಯಶ್ರೇಷ್ಠ' ಪ್ರಶಸ್ತಿ

ತಂದೆಗೆ ಗೌರವ ಸಮರ್ಪಣೆ (1999 ವಿಶ್ವಕಪ್)

1999ರ ವಿಶ್ವಕಪ್ ಟೂರ್ನಿಯ ಮಧ್ಯದಲ್ಲೇ ತಂದೆಯ ನಿಧನದ ಸುದ್ದಿ ಕೇಳಿ ಭಾರತಕ್ಕೆ ಮರಳಿದ್ದ ಸಚಿನ್, ಅಂತ್ಯಕ್ರಿಯೆ ಮುಗಿಸಿ ತಂಡವನ್ನು ಕೂಡಿಕೊಂಡರು. ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಕೇವಲ 101 ಎಸೆತಗಳಲ್ಲಿ ಅಜೇಯ 140 ರನ್ ಬಾರಿಸಿ, ಆಕಾಶದತ್ತ ಬ್ಯಾಟ್ ಎತ್ತಿ ತಮ್ಮ ತಂದೆಗೆ ಭಾವನಾತ್ಮಕವಾಗಿ ಗೌರವ ಸಮರ್ಪಿಸಿದರು.

ಏಕದಿನ ಕ್ರಿಕೆಟ್‌ನ ಮೊದಲ ದ್ವಿಶತಕ (2010)

2010ರ ಫೆಬ್ರವರಿ 24 ರಂದು ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುರುಷರ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದ್ವಿಶತಕ ಬಾರಿಸಿ ದಾಖಲೆ ಬರೆದರು. ಅವರು 147 ಎಸೆತಗಳಲ್ಲಿ 25 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 200 ರ

ಐತಿಹಾಸಿಕ 50ನೇ ಟೆಸ್ಟ್ ಶತಕ

ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದ 50ನೇ ಟೆಸ್ಟ್ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಈ ಪಂದ್ಯದಲ್ಲಿ ಅವರು ಅಜೇಯ 111 ರನ್ ಬಾರಿಸಿದರೂ, ಭಾರತವನ್ನು ಇನ್ನಿಂಗ್ಸ್ ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.

2011ರ ಏಕದಿನ ವಿಶ್ವಕಪ್ ಗೆಲುವು

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಭಾರತ ಚಾಂಪಿಯನ್ ಆದಾಗ, ಸಚಿನ್ ತೆಂಡೂಲ್ಕರ್ ಅವರನ್ನು ಸಹಪಾಠಿ ಆಟಗಾರರು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ತಮ್ಮ 6ನೇ ವಿಶ್ವಕಪ್ ಸರಣಿಯಲ್ಲಿ ಸಚಿನ್ ಅಂತಿಮವಾಗಿ ವಿಶ್ವಕಪ್ ಎತ್ತಿಹಿಡಿಯುವ ಕನಸನ್ನು