'ಇಯರ್ ಇನ್ ಸರ್ಚ್ 2025' ರಿಪೋರ್ಟ್​ 
ಫೋಟೋ ಗ್ಯಾಲರಿ

ಗೂಗಲ್​ನಲ್ಲಿ ಹೆಚ್ಚು ಸರ್ಚ್​ ಆದ ಟಾಪ್​ 10 ಹೆಸರುಗಳಿವು

ಮೋಹನ್​ ಶೆಟ್ಟಿ

'ಇಯರ್ ಇನ್ ಸರ್ಚ್ 2025' ರಿಪೋರ್ಟ್​

ಗೂಗಲ್ ಇತ್ತೀಚೆಗಷ್ಟೇ ತನ್ನ 'ಇಯರ್ ಇನ್ ಸರ್ಚ್ 2025' ವರದಿಯನ್ನು ಬಿಡುಗಡೆಗೊಳಿಸಿತು. ಈ ವರ್ಷ, ನೆಟ್ಟಿಗರು ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಕ್ರೀಡೆ, ಬಿಜಿನೆಸ್​, ರಾಜಕೀಯ, ಸಿನಿಮಾ ಮತ್ತು ಸಂಶೋಧನಾ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಹೆಸರನ್ನು ಪ್ರಕಟಿಸಲಾಯಿತು.

ಟ್ರೆಂಡಿಂಗ್​ ವಿಷಯಗಳ ಆಧಾರದ ಮೇಲೆ...

ಪ್ರತಿ ವರ್ಷ, ಗೂಗಲ್‌ನಲ್ಲಿ ಜನರು ಅತಿ ಹೆಚ್ಚು ಸರ್ಚ್​ ಮಾಡಿದ ಜನಪ್ರಿಯ ವ್ಯಕ್ತಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಪ್ರಸ್ತುತ ಘಟನೆಗಳು, ಟ್ರೆಂಡಿಂಗ್ ವಿಷಯಗಳ ಆಧಾರದ ಮೇಲೆ ನೆಟ್ಟಿಗರು ತಮ್ಮ ಇಚ್ಛೆಯ ಸೆಲೆಬ್ರಿಟಿಗಳು ಅಥವಾ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಆಸಕ್ತಿ ಹೊಂದಿರುತ್ತಾರೆ.

ವೈಭವ್ ಸೂರ್ಯವಂಶಿ

14ನೇ ವಯಸ್ಸಿನಲ್ಲಿ, ಐಪಿಎಲ್​ 18ನೇ ಆವೃತ್ತಿಯಲ್ಲಿ ಆರ್​ಆರ್​ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ, ಒಂದು ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 101 ರನ್ ಸಿಡಿಸುವ ಮೂಲಕ ಸ್ಫೋಟಕ ಇನ್ನಿಂಗ್ಸ್ ಆಡಿದರು. ಪುರುಷರ ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾದರು.

ಡೇವಿಡ್ ಆಂಥೋನಿ ಬರ್ಕ್

ಡೇವಿಡ್ ಆಂಥೋನಿ ಬರ್ಕ್ ಒಬ್ಬ ಅಮೇರಿಕನ್ ಗಾಯಕ ಮತ್ತು ಸಾಹಿತಿ. ಅವರನ್ನು D4vd ಎಂದೂ ಕರೆಯುತ್ತಾರೆ. ಹಿಯರ್ ವಿತ್ ಮಿ ಮತ್ತು ರೊಮ್ಯಾಂಟಿಕ್ ಹೋಮಿಸೈಡ್​ನಂತಹ ಹಾಡುಗಳನ್ನು ರಿಲೀಸ್​ ಮಾಡಿದ ಬಳಿಕ ಅವರು 2022ರಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು.

ಕೆಂಡ್ರಿಕ್ ಲಾಮರ್

ಈತ ಓರ್ವ ಅಮೇರಿಕನ್ ರ‍್ಯಾಪರ್, ಗಾಯಕ, ಸಾಹಿತಿ ಮತ್ತು ರೆಕಾರ್ಡ್ ಪ್ರೊಡ್ಯೂಸರ್​. ಜೂನ್ 17, 1987ರಂದು ಜನಿಸಿದ ಅವರು, ಪುಲಿಟ್ಜರ್ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಜಿಮ್ಮಿ ಕಿಮ್ಮೆಲ್

ಅಮೇರಿಕನ್ ಕಾಮಿಡಿಯನ್​ ಮತ್ತು ದೂರದರ್ಶನ ನಿರೂಪಕ ಜೇಮ್ಸ್ ಕ್ರಿಶ್ಚಿಯನ್ ಕಿಮ್ಮೆಲ್, 2003ರಿಂದ ಎಬಿಸಿಯಲ್ಲಿ ಪ್ರಸಾರವಾಗುವ ಜಿಮ್ಮಿ ಕಿಮ್ಮೆಲ್ ಲೈವ್‌ನ ಕಾರ್ಯನಿರ್ವಾಹಕ ನಿರ್ಮಾಪಕ ಮತ್ತು ನಿರೂಪಕರಾಗಿ ಅವರು ಹೆಚ್ಚು ಖ್ಯಾತಿ ಗಳಿಸಿದ್ದಾರೆ.

ಟೈಲರ್ ಜೇಮ್ಸ್ ರಾಬಿನ್ಸನ್

ಟೈಲರ್ ಜೇಮ್ಸ್ ರಾಬಿನ್ಸನ್​ಗೆ ಈಗ 22 ವರ್ಷ. ಕಳೆದ ವರ್ಷ, ವಿದೇಶಿ ನೆಲದಲ್ಲಿ ಚಾರ್ಲಿ ಕಿರ್ಕ್ ಹತ್ಯೆಯಲ್ಲಿ ಈತನೇ ಗುಂಡು ಹಾರಿಸಿದ್ದು ಎಂಬ ಆರೋಪ ಜೇಮ್ಸ್​ ಮೇಲಿದೆ.

ಪೋಪ್ ಲಿಯೋ XIV

ಪೋಪ್ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರು. ಪೋಪ್ ಫ್ರಾನ್ಸಿಸ್ ನಂತರ ಪೋಪ್ ಲಿಯೋ XIV ಇತಿಹಾಸದಲ್ಲಿ ಮೊದಲ ಅಮೇರಿಕನ್ ಪೋಪ್ ಆಗಿ ಆಯ್ಕೆಯಾದರು.

ಶೆಡ್ಯೂಲ್ ಸ್ಯಾಂಡರ್ಸ್

ಈತ ಒಬ್ಬ ಅಮೇರಿಕನ್ ಫುಟ್ಬಾಲ್ ಕ್ವಾರ್ಟರ್‌ಬ್ಯಾಕ್. ನ್ಯಾಷನಲ್ ಫುಟ್‌ಬಾಲ್ ಲೀಗ್ (ಎನ್‌ಎಫ್‌ಎಲ್) ನಲ್ಲಿ ಕ್ಲೀವ್‌ಲ್ಯಾಂಡ್ ಬ್ರೌನ್ಸ್ ಪರ ಆಡುತ್ತಾರೆ.

ಬಿಯಾಂಕಾ ಸೆನ್ಸೋರಿ

ಆಸ್ಟ್ರೇಲಿಯಾದ ವಾಸ್ತುಶಿಲ್ಪ ವಿನ್ಯಾಸಕಿ, ರೂಪದರ್ಶಿ ಆಗಿರುವ ಈಕೆ, ಅಮೇರಿಕನ್ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಎರಡನೇ ಪತ್ನಿ. ಅಂದು ಕಾನ್ಯೆ ಜತೆ ಮದುವೆಯಾದ ವಿಚಾರಕ್ಕೆ ಜಾಗತಿಕವಾಗಿ ಭಾರೀ ಸದ್ದು ಮಾಡಿದ್ದರು. ಈ ವರ್ಷ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ಈಕೆ ಭಾರೀ ವಿವಾದಕ್ಕೆ ಗುರಿಯಾಗಿದ್ದರು.

ಜೋಹ್ರಾನ್ ಮಮ್ದಾನಿ

ಜೋಹ್ರಾನ್ ಕ್ವಾಮಿ ಮಮ್ದಾನಿ ಓರ್ವ ಭಾರತೀಯ-ಅಮೇರಿಕನ್ ರಾಜಕಾರಣಿ. ಅಕ್ಟೋಬರ್ 1991ರಲ್ಲಿ ಉಗಾಂಡಾದ ಕಂಪಾಲಾದಲ್ಲಿ ಜನಿಸಿದ ಇವರು, ನ್ಯೂಯಾರ್ಕ್ ನಗರದ ಪ್ರಸ್ತುತ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗ್ರೇಟಾ ಥನ್‌ಬರ್ಗ್

ಸ್ವೀಡಿಷ್ ಪರಿಸರ ಕಾರ್ಯಕರ್ತೆಯಾಗಿರುವ ಗ್ರೇಟಾ, ಚಿಕ್ಕ ವಯಸ್ಸಿನಲ್ಲೇ ಪರಿಸರದಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ಮತ್ತು ರಾಜಕೀಯ ನಾಟಕಗಳ ಬಗ್ಗೆ ಅವರು ಜಗತ್ತಿಗೆ ನೇರವಾಗಿ ಹೇಳುವ ಗಟ್ಟಿತನವನ್ನು ಹೊಂದಿರುವುದು ವಿಶೇಷ.