ದೇಹಕ್ಕೆ ತಂಪು
ಫಾಲ್ಸಾ ಹಣ್ಣು ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುವ ಗುಣ ಹೊಂದಿದೆ. ಬೇಸಿಗೆಯಲ್ಲಿ ಉಂಟಾಗುವ ಸನ್ ಸ್ಟ್ರೋಕ್ ಮತ್ತು ಅತಿಯಾದ ಬಾಯಾರಿಕೆಯನ್ನು ಇದು ತಡೆಯುತ್ತದೆ.ಜೀರ್ಣಕ್ರಿಯೆ ಸುಧಾರಣೆ
ಇದರಲ್ಲಿ ನಾರಿನಂಶ ಅಧಿಕವಾಗಿದ್ದು, ಬೇಸಿಗೆಯಲ್ಲಿ ಕಾಡುವ ಮಲಬದ್ಧತೆ ಮತ್ತು ಹೊಟ್ಟೆ ನೋವಿನ ಸಮಸ್ಯೆಯನ್ನು ದೂರ ಮಾಡುತ್ತದೆ.ಹೃದಯದ ಆರೋಗ್ಯ
ಈ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ರಕ್ತಹೀನತೆಗೆ ಮದ್ದು
ಫಾಲ್ಸಾ ಹಣ್ಣಿನಲ್ಲಿ ಕಬ್ಬಿಣದಂಶ ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ.ಮಧುಮೇಹ ನಿಯಂತ್ರಣ
ಈ ಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯಿರುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದಿಢೀರ್ ಹೆಚ್ಚಿಸುವುದಿಲ್ಲ. ಇದು ಮಧುಮೇಹಿಗಳಿಗೆ ಸುರಕ್ಷಿತ ಹಣ್ಣು.