ಮುಖದ ಉರಿಯೂತಕ್ಕೆ ಬೈ ಹೇಳಿ! 
ಫೋಟೋ ಗ್ಯಾಲರಿ

ಮುಖದ ಉರಿಯೂತವನ್ನು ಕಡಿಮೆ ಮಾಡಲಿವೆ ಈ ಸಲಹೆಗಳು! facial inflammation

ಭಾನುಪ್ರಿಯ ಡಿ.ಕೆ

ಮುಖದ ಉರಿಯೂತಕ್ಕೆ ಬೈ ಹೇಳಿ!

ಮುಖದ ಉರಿಯೂತ ಸಾಮಾನ್ಯವಾಗಿ ಸರಳ ಕಾರಣಗಳಿಂದ ಬರುತ್ತದೆ. ಔಷಧಿ, ಧೂಳು, ಪರಾಗ, ಕೀಟ ಕಡಿತ ಅಥವಾ ಪರಿಸರ ಅಲರ್ಜಿನ್‌ಗಳಿಂದ ಮುಖದಲ್ಲಿ ತ್ವರಿತ ಊತ, ಕೆಂಪು ಬಣ್ಣ ಮತ್ತು ತುರಿಕೆ ಬರುತ್ತದೆ.

ಐಸ್ ಮಸಾಜ್

ತಣ್ಣೀರು ಅಥವಾ ಐಸ್ ಕ್ಯೂಬ್‌ಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿ ಮುಖದ ಮೇಲೆ ಮೃದುವಾಗಿ ಒತ್ತಿಕೊಳ್ಳಿ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಿ, ಊತ ಮತ್ತು ಕೆಂಪಾಗುವಿಕೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ.

ಸೌತೆಕಾಯಿ ಪ್ಯಾಕ್

ಸೌತೆಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ತಂಪಾಗಿಸುವ ಗುಣಗಳಿವೆ. ಸೌತೆಕಾಯಿಯ ಸ್ಲೈಸ್‌ಗಳನ್ನು ಮುಖದ ಮೇಲೆ ಇರಿಸಿಕೊಳ್ಳುವುದು ಅಥವಾ ಅದರ ರಸವನ್ನು ಹಚ್ಚುವುದರಿಂದ ಚರ್ಮದ ಉರಿ ಕಡಿಮೆಯಾಗಿ ಚರ್ಮಕ್ಕೆ ತಂಪು ನೀಡುತ್ತದೆ.

ಅಧಿಕ ಉಪ್ಪು ಸೇವನೆ ಕಡಿಮೆ ಮಾಡಿ

ಆಹಾರದಲ್ಲಿ ಅತಿಯಾದ ಉಪ್ಪು ಸೇವನೆಯಿಂದ ದೇಹದಲ್ಲಿ ನೀರು ಶೇಖರಣೆಯಾಗಿ ಮುಖ ಊದಿಕೊಳ್ಳುತ್ತದೆ. ವಿಶೇಷವಾಗಿ ರಾತ್ರಿ ವೇಳೆ ಸಂಸ್ಕರಿಸಿದ ಆಹಾರ ಅಥವಾ ಅತಿಯಾದ ಉಪ್ಪು ಬಳಸಬೇಡಿ.

ಗ್ರೀನ್ ಟೀ ಬ್ಯಾಗ್ಸ್ ಬಳಕೆ

ಬಳಸಿದ ಗ್ರೀನ್ ಟೀ ಬ್ಯಾಗ್‌ಗಳನ್ನು ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಮಾಡಿ, ಕಣ್ಣುಗಳ ಮೇಲೆ ಮತ್ತು ಮುಖದ ಉರಿ ಇರುವ ಜಾಗದಲ್ಲಿ ಇರಿಸಿ. ಇದರಲ್ಲಿರುವ ಕೆಫೀನ್ ಮತ್ತು ಟ್ಯಾನಿನ್ ಅಂಶಗಳು ಊತವನ್ನು ಬೇಗನೆ ಇಳಿಸುತ್ತವೆ.

ಹೆಚ್ಚು ನೀರು ಕುಡಿಯಿರಿ

ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಚರ್ಮವು ನೀರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ, ಇದರಿಂದ ಮುಖ ಊದಿದಂತೆ ಕಾಣುತ್ತದೆ. ದಿನವಿಡೀ ಧಾರಾಳವಾಗಿ ನೀರು ಕುಡಿಯುವುದರಿಂದ ವಿಷಕಾರಿ ಅಂಶಗಳು ಹೊರಹೋಗಿ ಉರಿಯೂತ ಕಡಿಮೆಯಾಗುತ್ತದೆ.