ಡೂಮ್​ಸ್ಕ್ರೋಲಿಂಗ್​ 
ಫೋಟೋ ಗ್ಯಾಲರಿ

ನಿರಂತರ ಮೊಬೈಲ್​ ಸ್ಕ್ರೋಲಿಂಗ್‌ನಿಂದ ಈ ಅಪಾಯಗಳು ಖಚಿತ!

ಭಾನುಪ್ರಿಯ ಡಿ.ಕೆ

ಡೂಮ್​ಸ್ಕ್ರೋಲಿಂಗ್​

ಸಾಮಾಜಿಕ ಜಾಲತಾಣಗಳಲ್ಲಿ ಗಂಟೆಗಟ್ಟಲೆ ಸತತವಾಗಿ ನಕಾರಾತ್ಮಕ ಅಥವಾ ಕೆಟ್ಟ ಸುದ್ದಿಗಳನ್ನು ಓದುತ್ತಾ, ಸ್ಕ್ರಾಲ್ ಮಾಡುವುದನ್ನು 'ಡೂಮ್‌ಸ್ಕ್ರೋಲಿಂಗ್' ಎನ್ನಲಾಗುತ್ತದೆ. ಈ ಅಭ್ಯಾಸದಿಂದ ನಮಗೆ ತಿಳಿಯದಂತೆ ಆಗುವ ಪ್ರಮುಖ ಹಾನಿಗಳು ಇಲ್ಲಿವೆ.

ಮಾನಸಿಕ ಒತ್ತಡ ಮತ್ತು ಆತಂಕ

ನಿದ್ರಾಹೀನತೆ

ತಡರಾತ್ರಿಯವರೆಗೆ ಮೊಬೈಲ್ ಸ್ಕ್ರೀನ್ ನೋಡುವುದರಿಂದ ಅದರಿಂದ ಹೊರಬರುವ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಉತ್ಪತ್ತಿಯನ್ನು ಕುಂಠಿತಗೊಳಿಸುತ್ತದೆ. ಪರಿಣಾಮವಾಗಿ ಗಾಢ ನಿದ್ರೆ ಬಾರದೆ ಆರೋಗ್ಯ ಕೆಡುತ್ತದೆ.

ಸಮಯ ಮತ್ತು ಉತ್ಪಾದಕತೆಯ ನಷ್ಟ

ಫೋನ್‌ಗೆ ದಾಸರಾಗುವುದರಿಂದ ದೈನಂದಿನ ಕೆಲಸಗಳ ಮೇಲಿನ ಗಮನ ತಪ್ಪುತ್ತದೆ. ಓದು, ಉದ್ಯೋಗ ಅಥವಾ ಮುಖ್ಯವಾದ ಕೆಲಸಗಳತ್ತ ಗಮನಹರಿಸಲಾಗದೆ ಸಮಯ ವ್ಯರ್ಥವಾಗಿ, ಕ್ರಿಯಾಶೀಲತೆ ಕಡಿಮೆಯಾಗುತ್ತದೆ.

ದೈಹಿಕ ಆರೋಗ್ಯದ ಮೇಲಿನ ಪರಿಣಾಮ

ಒಂದೇ ಕಡೆ ಕುಳಿತು ಸ್ಕ್ರಾಲ್ ಮಾಡುವುದರಿಂದ ಕಣ್ಣಿನ ಆಯಾಸ, ತಲೆನೋವು, ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತವೆ. ದೈಹಿಕ ಶ್ರಮವಿಲ್ಲದೆ ಬೊಜ್ಜು ಮತ್ತು ಹೃದಯದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ಆಶಾವಾದದ ಕೊರತೆ

ಜಗತ್ತಿನಲ್ಲಿ ಬರೀ ಕೆಟ್ಟದ್ದೇ ನಡೆಯುತ್ತಿದೆ ಎಂಬ ತಪ್ಪು ಕಲ್ಪನೆ ಮೂಡುತ್ತದೆ. ಇದು ಸಮಾಜದ ಮೇಲಿನ ನಂಬಿಕೆಯನ್ನು ಕುಗ್ಗಿಸಿ, ಮನಸ್ಸಿನಲ್ಲಿ ಸದಾ ನಕಾರಾತ್ಮಕ ಆಲೋಚನೆಗಳು ತುಂಬಿಕೊಳ್ಳುವಂತೆ ಮಾಡುತ್ತದೆ.