ಸೇಬು 
ಫೋಟೋ ಗ್ಯಾಲರಿ

ಹೃದಯದ ಆರೋಗ್ಯಕ್ಕೆ ಈ ಹಣ್ಣುಗಳೇ ಸಂಜೀವಿನಿ! | Heart Health

ಮಣಿಕಂಠ ಪಾ ಹಿರೇಮಠ

ಸೇಬು

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು" ಎಂಬ ಮಾತಿದೆ. ಸೇಬಿನಲ್ಲಿರುವ ಫೈಬರ್ ಮತ್ತು ಪಾಲಿಫಿನಾಲ್ಸ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯಾಘಾತದ ಅಪಾಯವನ್ನು ತಗ್ಗಿಸುತ್ತದೆ.

ದಾಳಿಂಬೆ

ದಾಳಿಂಬೆಯು ಆಂಟಿಆಕ್ಸಿಡೆಂಟ್‌ಗಳ ಆಗರ. ಇದು ರಕ್ತದೊತ್ತಡವನ್ನು (BP) ನಿಯಂತ್ರಿಸುವುದಲ್ಲದೆ, ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ. ರಕ್ತಹೀನತೆ ಇರುವವರಿಗೂ ಇದು ರಾಮಬಾಣ.

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಸಮೃದ್ಧವಾಗಿರುವ ಪೊಟ್ಯಾಸಿಯಮ್, ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ಹೃದಯದ ಬಡಿತವನ್ನು ಸ್ಥಿರವಾಗಿಡಲು ಮತ್ತು ಸೋಡಿಯಂನ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಸಹಕಾರಿ.

ಬೆರ್ರಿ ಹಣ್ಣುಗಳು

ಸ್ಟ್ರಾಬೆರಿ, ಬ್ಲೂಬೆರಿ ಅಥವಾ ನಮ್ಮಲ್ಲಿ ಸಿಗುವ ನೇರಳೆ ಹಣ್ಣುಗಳಲ್ಲಿ ಆಂಥೋಸಯಾನಿನ್ ಎಂಬ ಅಂಶವಿದೆ. ಇದು ರಕ್ತನಾಳಗಳನ್ನು ಬಲಪಡಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಕಿತ್ತಳೆ

ಕಿತ್ತಳೆಯಲ್ಲಿರುವ ವಿಟಮಿನ್ ಸಿ ಮತ್ತು ಪೆಕ್ಟಿನ್ ಎಂಬ ಫೈಬರ್ ಅಂಶವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ.