ಉರಿಯೂತ 
ಫೋಟೋ ಗ್ಯಾಲರಿ

ದೇಹದಲ್ಲಿ ಉರಿಯೂತ ಹೆಚ್ಚಿಸುತ್ತವೆ ನಾವು ತಿನ್ನುವ ಈ ಆಹಾರಗಳು! Health Tips

ಭಾನುಪ್ರಿಯ ಡಿ.ಕೆ

ಉರಿಯೂತ

ದೇಹದಲ್ಲಿ ದೀರ್ಘಕಾಲದ ಉರಿಯೂತವು ಹೃದಯ ಕಾಯಿಲೆ, ಮಧುಮೇಹ, ಕ್ಯಾನ್ಸರ್ ಮತ್ತು ಸಂಧಿವಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಮ್ಮ ದೈನಂದಿನ ಆಹಾರ ಪದ್ಧತಿಯು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸಕ್ಕರೆ ಮತ್ತು ಸಿಹಿತಿಂಡಿಗಳು

ಅಧಿಕ ಸಕ್ಕರೆ, ಕಾರ್ನ್ ಸಿರಪ್ ಹಾಗೂ ಸಂಸ್ಕರಿಸಿದ ಸಕ್ಕರೆ ಹೊಂದಿರುವ ಆಹಾರಗಳು ದೇಹದಲ್ಲಿ ಸೈಟೊಕಿನ್‌ಗಳಂತಹ ಉರಿಯೂತದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಇದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ.

ಮರುಬಳಕೆ ಎಣ್ಣೆ

ಬೇಕರಿ ಉತ್ಪನ್ನಗಳು, ಫಾಸ್ಟ್ ಫುಡ್ ಮತ್ತು ಕರಿದ ಆಹಾರಗಳಲ್ಲಿ ಕಂಡುಬರುವ ಹೈಡ್ರೋಜನೀಕರಿಸಿದ ಎಣ್ಣೆಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸಿ ಉರಿಯೂತಕ್ಕೆ ಕಾರಣವಾಗುತ್ತವೆ.

ಸಂಸ್ಕರಿಸಿದ ಮಾಂಸ

ಸಾಸೇಜ್, ಬೆಕಾನ್ ಮತ್ತು ಹ್ಯಾಮ್‌ನಂತಹ ಸಂಸ್ಕರಿಸಿದ ಮಾಂಸಗಳಲ್ಲಿ ಅಡ್ವಾನ್ಸ್ಡ್ ಗ್ಲೈಕೇಶನ್ ಎಂಡ್-ಪ್ರೊಡಕ್ಟ್ಸ್ ಅಧಿಕವಾಗಿರುತ್ತದೆ, ಇದು ಕೊಲೊನ್ ಉರಿಯೂತವನ್ನು ಪ್ರಚೋದಿಸುತ್ತದೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್

ಮೈದಾ, ಬಿಳಿ ಬ್ರೆಡ್, ಪಾಸ್ತಾ ಮತ್ತು ಸಿದ್ಧಪಡಿಸಿದ ತಿಂಡಿಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಕ್ಷಣವೇ ಹೆಚ್ಚಿಸಿ, ಉರಿಯೂತದ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ.

ಅತಿಯಾದ ಮದ್ಯಪಾನ

ಆಲ್ಕೋಹಾಲ್ ಅತಿಯಾದ ಸೇವನೆಯು ಕರುಳಿನ ಬ್ಯಾಕ್ಟೀರಿಯಾದ ಸಮತೋಲನವನ್ನು ಹಾನಿಗೊಳಿಸುತ್ತದೆ ಮತ್ತು ಯಕೃತ್ತಿನಲ್ಲಿ ತೀವ್ರ ಉರಿಯೂತವನ್ನು ಪ್ರಚೋದಿಸುತ್ತದೆ.