ಬೇಸಿಗೆ 
ಫೋಟೋ ಗ್ಯಾಲರಿ

ಬೇಸಿಗೆಯ ದಗೆಗೆ ಈ ಆಹಾರಗಳೇ ಮದ್ದು! ಈಗಿನಿಂದಲೇ ಪ್ರಾರಂಭಿಸಿ.. Summer Foods

ಭಾನುಪ್ರಿಯ ಡಿ.ಕೆ

ಬೇಸಿಗೆ

ಮಾರ್ಚ್​ ತಿಂಗಳು ಶುರುವಾದಂತೆಯೇ ಬಿಸಲಿನ ಬೆಗೆ ಪ್ರಾರಂಭವಾಗುತ್ತದೆ. ಈ ದಿನಗಳಲ್ಲಿ ದೇಹವು ನೀರಿನಾಂಶವನ್ನು ಹೆಚ್ಚಾಗಿ ಬಯಸುತ್ತಿರುತ್ತದೆ. ಹಾಗಾಗಿ ಈ ರೀತಿಯ ಆಹಾರಗಳನ್ನು ಸೇವಿಸುವುದು ಉತ್ತಮ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿಯಲ್ಲಿ ಸುಮಾರು 92% ನೀರಿನಾಂಶ ಇರುತ್ತದೆ. ಇದು ದೇಹಕ್ಕೆ ತಕ್ಷಣದ ಹೈಡ್ರೇಶನ್ ನೀಡುವುದಲ್ಲದೆ, ಇದರಲ್ಲಿರುವ 'ಲೈಕೋಪೀನ್' ಅಂಶವು ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಮಜ್ಜಿಗೆ

ಬೇಸಿಗೆಗೆ ಮಜ್ಜಿಗೆಯನ್ನು ಮೀರಿದ ಅಮೃತವಿಲ್ಲ. ಇದರಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ ಮತ್ತು ದೇಹದ ಒಳಗಿನ ತಾಪಮಾನವನ್ನು ತಕ್ಷಣವೇ ಕಡಿಮೆ ಮಾಡುತ್ತವೆ. ಇದಕ್ಕೆ ಸ್ವಲ್ಪ ಶುಂಠಿ ಮತ್ತು ಕರಿಬೇವು ಸೇರಿಸಿದರೆ ಅದರ ಪೌಷ್ಟಿಕಾಂಶ ಇನ್ನೂ ಹೆಚ್ಚುತ್ತದೆ.

ಸೌತೆಕಾಯಿ

ಸೌತೆಕಾಯಿಯಲ್ಲಿ ನೀರಿನಂಶ ಹೆಚ್ಚಿದ್ದು, ಕ್ಯಾಲೋರಿಗಳು ಕಡಿಮೆ ಇರುತ್ತವೆ. ಇದು ದೇಹವನ್ನು ಒಳಗಿನಿಂದ ತಂಪಾಗಿಸುವುದಲ್ಲದೆ, ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಸಲಾಡ್ ರೂಪದಲ್ಲಿ ಇದನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು.

ಎಳನೀರು

ಎಳನೀರು ಪ್ರಕೃತಿ ನೀಡಿದ ಅತ್ಯುತ್ತಮ ಎಲೆಕ್ಟ್ರೋಲೈಟ್ ಪಾನೀಯ. ಬಿಸಿಲಿನಿಂದಾಗಿ ದೇಹ ಕಳೆದುಕೊಳ್ಳುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಲವಣಗಳನ್ನು ಇದು ಮರುಪೂರಣ ಮಾಡುತ್ತದೆ. ಇದು ಕೇವಲ ಬಾಯಾರಿಕೆ ನೀಗಿಸುವುದಲ್ಲದೆ, ಶಕ್ತಿಯನ್ನೂ ನೀಡುತ್ತದೆ.

ಮೊಸರು

ಮೊಸರು ದೇಹಕ್ಕೆ ತಂಪು ನೀಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಕಾಡುವ ಹೊಟ್ಟೆಯ ಸಮಸ್ಯೆಗಳಿಗೆ ಇದು ರಾಮಬಾಣ. ಮೊಸರನ್ನ ಅಥವಾ ಲಸ್ಸಿ ರೂಪದಲ್ಲಿ ಇದನ್ನು ಸೇವಿಸುವುದು ಹಿತಕರ.