ಮಾನಸಿಕ ಆರೋಗ್ಯ ಎಂದರೇನು? 
ಫೋಟೋ ಗ್ಯಾಲರಿ

ಮನಸ್ಥಿತಿ ಸುಧಾರಿಸಲು ಈ ಆಹಾರಗಳೇ ಬೆಸ್ಟ್ ಆಯ್ಕೆ! Mental Health

ಭಾನುಪ್ರಿಯ ಡಿ.ಕೆ

ಮಾನಸಿಕ ಆರೋಗ್ಯ ಎಂದರೇನು?

ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳುವ, ಜೀವನದ ಸಾಮಾನ್ಯ ಒತ್ತಡಗಳನ್ನು ನಿಭಾಯಿಸುವ, ಉತ್ಪಾದಕವಾಗಿ ಕೆಲಸ ಮಾಡುವ ಮತ್ತು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ಒಂದು ಸಂಪೂರ್ಣ ಸ್ಥಿತಿ

ಬೆರ್ರಿ ಹಣ್ಣುಗಳು

ಈ ಹಣ್ಣುಗಳಲ್ಲಿ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ C ಹೆಚ್ಚಾಗಿದ್ದು, ಮೆದುಳಿನ ಉರಿಯೂತ ಕಡಿಮೆ ಮಾಡಿ, ಮನಸ್ಥಿತಿ ಸುಧಾರಿಸಲು ಸಹಾಯ ಮಾಡುತ್ತವೆ.

ಕೊಬ್ಬಿನ ಮೀನುಗಳು

ಒಮೆಗಾ-3 ಫ್ಯಾಟಿ ಆಸಿಡ್‌ಗಳು ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮ. ಖಿನ್ನತೆ ಕಡಿಮೆ ಮಾಡಿ, ಮನಸ್ಥಿತಿ ಉತ್ತಮಗೊಳಿಸುವಲ್ಲಿ ವೈಜ್ಞಾನಿಕ ಸಾಕ್ಷ್ಯ ಇದೆ.

ಡಾರ್ಕ್ ಚಾಕೊಲೇಟ್

ಫ್ಲೇವನಾಲ್‌ಗಳು ಇದ್ದು ರಕ್ತಪರಿಚಲನೆ ಸುಧಾರಿಸಿ, ಎಂಡಾರ್ಫಿನ್‌ಗಳನ್ನು ಹೆಚ್ಚಿಸುತ್ತದೆ. ಸಣ್ಣ ಪ್ರಮಾಣದಲ್ಲಿ ತಿನ್ನಿ – ಮನಸ್ಸಿಗೆ ತಕ್ಷಣ ಸಂತೋಷ ನೀಡುತ್ತದೆ.

ಬಾಳೆಹಣ್ಣು

ಟ್ರಿಪ್ಟೋಫಾನ್, ವಿಟಮಿನ್ B6 ಇದ್ದು ಸೆರೊಟೊನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ನೈಸರ್ಗಿಕ ಸಕ್ಕರೆ ಮತ್ತು ಪೊಟ್ಯಾಶಿಯಂ ತಕ್ಷಣ ಶಕ್ತಿ ಮತ್ತು ಒತ್ತಡ ಕಡಿಮೆ ಮಾಡುತ್ತದೆ.

ಹಸಿರು ಎಲೆ ತರಕಾರಿಗಳು

ಫೋಲೇಟ್ (B9), ಮ್ಯಾಗ್ನೀಷಿಯಂ ಮತ್ತು B ವಿಟಮಿನ್‌ಗಳು ಸಮೃದ್ಧವಾಗಿದ್ದು, ಸೆರೊಟೊನಿನ್ ಉತ್ಪಾದನೆಗೆ ಸಹಾಯ ಮಾಡಿ, ಖಿನ್ನತೆ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ.