ಅತಿದೊಡ್ಡ ರಿಯಾಲಿಟಿ ಶೋ
ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ ಮೂರು ತಿಂಗಳಿಗೂ ಹೆಚ್ಚು ಸಮಯ ಆಗಿದೆ. ಇದೀಗ ಕಾರ್ಯಕ್ರಮವು ಕೊನೆಯ ಹಂತಕ್ಕೆ ತಲುಪಿದ್ದು, ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭಗೊಂಡಿದೆ.ಕಿಚ್ಚನ ಕಿಚ್ಚಿನ ನಿರೂಪಣೆ
ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ನೋಡುಗರಲ್ಲಿ ಖುಷಿ ನೀಡಿದೆ. ಫಿನಾಲೆ ರೇಸ್ನಲ್ಲಿರುವ ಆರು ಫೈನಲಿಸ್ಟ್ಗಳ ಪೈಕಿ ಯಾರ ಮುಡಿಗೆ ಸೀಸನ್ 12ರ ಕಿರೀಟ ಸೇರಲಿದೆ ಎಂಬ ಕುತೂಹಲ ಸದ್ಯ ವೀಕ್ಷಕರಲ್ಲಿ ಕಾಡುತ್ತಿದೆ.ಆರು ಫೈನಲಿಸ್ಟ್
ಗಿಲ್ಲಿ ನಟ, ಅಶ್ವಿನಿ, ರಘು, ಕಾವ್ಯ, ರಕ್ಷಿತಾ ಮತ್ತು ಧನುಷ್ ಫಿನಾಲೆ ರೇಸ್ನಲ್ಲಿದ್ದಾರೆ. ಇವರ ಪೈಕಿ ಯಾರ ಮುಡಿಗೆ ಗೆಲುವಿನ ಕಿರೀಟ ಸೇರಲಿದೆ ಎಂಬುದು ಇಂದು (ಜ.18) ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಕೊನೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ. ಆರು ಫೈನಲಿಸ್ಟ್ಗಳು ಕೂಡ ಭಾನುವಾರದ ಸಂಚಿಕೆಗೆ ತಲುಪಿದ್ದು, ವಿನ್ನರ್ ಸ್ಥಾನಕ್ಕೆ ಜಿದ್ದಾಜಿದ್ದಿ ನಡೆಸಲಿದ್ದಾರೆ.ಬಿಗ್ ಬಾಸ್ ಇತಿಹಾಸದಲ್ಲೇ ಇದು ಮೊದಲು!
ಬಿಗ್ ಬಾಸ್ ಇತಿಹಾಸದಲ್ಲೇ ಇದು ಮೊದಲು ಅನಿಸುತ್ತದೆ. ಫಿನಾಲೆಗೂ ಮೊದಲೇ ಜನರು ಇವರೇ ಗೆಲ್ತಾರೆ ಮತ್ತು ಸೀಸನ್ 12ರ ಟ್ರೋಫಿ ಎತ್ತಿಹಿಡಿಯಲಿದ್ದಾರೆ ಎಂದು ಬಹಳ ಖಚಿತವಾಗಿ ಹೇಳುತ್ತಿರುವುದು. ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ, ರಸ್ತೆಬದಿ ಮತ್ತು ನಗರದ ಸರ್ಕಲ್ಗಳಲ್ಲಿ ಬೃಹತ್ ಪೋಸ್ಟರ್, ಬ್ಯಾನರ್ಗಳನ್ನು ಹಾಕುವ ಮೂಲಕ ಅಭಿಮಾನ ತೋರಿದ್ದಾರೆದಾಖಲೆಯ ವೋಟಿಂಗ್
ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚಿನ ವೋಟಿಂಗ್ ನಡೆದಿದೆ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಬಹಿರಂಗಪಡಿಸಿದರು. ಕಳೆದ ಸೀಸನ್ನಲ್ಲಿ ವಿಜೇತ ಹನುಮಂತು ಅವರಿಗೆ 5 ಕೋಟಿ ಚಿಲ್ಲರೆ ಮತಗಳು ಬಿದ್ದಿತು. ಆದರೆ, ಸೀಸನ್ 12ರ ಮತಗಳು ಮಾತ್ರ ಹೊಸ ದಾಖಲೆ ಮಾತ್ರವಲ್ಲದೇ, ಮತ್ತೊಂದು ಆಯಾಮವನ್ನೇ ನೀಡಿದೆ. ಈ ಬಾರಿಯ ವಿನ್ನರ್ಗೆ ಬರೋಬ್ಬರಿ 37 ಕೋಟಿ ಮತಗಳುವಿನ್ನರ್-ರನ್ನರ್ಅಪ್ ಸ್ಥಾನದಲ್ಲಿ ಇವರಿಬ್ಬರ ಹೆಸರು...
ಒಂದೆಡೆ ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಗಿಲ್ಲಿ ನಟ ಹೊರಹೊಮ್ಮಲಿದ್ದಾರೆ ಎಂದು ಜನರು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಮತ್ತೊಂದೆಡೆ, ಗಿಲ್ಲಿ ಮೊದಲ ಸ್ಥಾನ ಗೆದ್ದು, ಟ್ರೋಫಿ ಎತ್ತಿಹಿಡಿದರೆ, ಅವರ ನಂತರದ ಸ್ಥಾನದಲ್ಲಿ ರಕ್ಷಿತಾ ಶೆಟ್ಟಿ ಅಥವಾ ಅಶ್ವಿನಿ ಗೌಡ ಹೆಸರು ಕೇಳಿಬಂದಿದೆ.