ಈ ಕ್ಯಾನ್ಸರ್ಗಳ ಬಗ್ಗೆ ಇರಲಿ ಎಚ್ಚರ!
ಈ ಕ್ಯಾನ್ಸರ್ಗಳ ಬಗ್ಗೆ ಇರಲಿ ಎಚ್ಚರ!
ಭಾರತದಲ್ಲಿ, ಕೆಲವೊಂದು ರೀತಿಯ ಕ್ಯಾನ್ಸರ್ಗಳು ಮೂಕ ಕೊಲೆಗಾರರಂತೆ ಹರಡುತ್ತಿವೆ. ಇದು ಜನಸಾಮಾನ್ಯರು ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿ, ಸಣ್ಣ ಕಾಯಿಲೆ ಎಂದು ಭಾವಿಸುತ್ತಾರೆ. ಇದರಿಂದ ದೊಡ್ಡ ಕಾಯಿಲೆಗಳಿಗೆ ತುತ್ತಾಗುತ್ತಾರೆ.ಸ್ತನ ಕ್ಯಾನ್ಸರ್
ಮಹಿಳೆಯರ ಸ್ತನದಲ್ಲಿ ಗಡ್ಡೆಗಳು, ಮೊಲೆ ತೊಟ್ಟುಗಳಿಂದ ರಕ್ತ ಸ್ರಾವ ಅಥವಾ ಸ್ತನಗಳ ಗಾತ್ರದಲ್ಲಿ ಹಠಾತ್ ಬದಲಾವಣೆಗಳು ಕಂಡುಬಂದರೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲು ಹೋಗಬೇಡಿ. ಇದು ಸ್ತನ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳಾಗಿರಬಹುದು.ಬಾಯಿಯ ಕ್ಯಾನ್ಸರ್
ತಂಬಾಕು ಸೇವನೆಯಿಂದಾಗಿ ಪ್ರಪಂಚದಾದ್ಯಂತ ಬಾಯಿಯ ಕ್ಯಾನ್ಸರ್ ವೇಗವಾಗಿ ಹರಡುತ್ತವೆ. ಇದು ಬಾಯಲ್ಲಿ ಹುಣ್ಣಾಗುವುದು, ಅಥವಾ ದದ್ದು ರೀತಿಯಲ್ಲಿ ಕಂಡುಬರುತ್ತದೆ. ಹಾಗೆಯೇ ಬಾಯಿಯಲ್ಲಿ ಬಿಳಿ ಅಥವಾ ಕೆಂಪು ಕಲೆಗಳು, ಒರಟಾಗಿರುವುದು ಮತ್ತು ನುಂಗಲು ತೊಂದರೆಯಂತಹ ಸಮಸ್ಯೆಗಳು ಕಂಡುಬಂದರೆ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.ಗರ್ಭಕಂಠದ ಕ್ಯಾನ್ಸರ್
ಗರ್ಭಕಂಠದ ಕ್ಯಾನ್ಸರ್ ಭಾರತೀಯ ಮಹಿಳೆಯರಲ್ಲಿ ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ.ಇದು ಮುಟ್ಟಿನ ಸಮಯದಲ್ಲಿ ಅಥವಾ ಸಂಭೋಗದ ನಂತರ ರಕ್ತಸ್ರಾವವಾಗುವುದು, ನಿರಂತರ ಬೆನ್ನು ನೋವು ಕಾಣಿಸಿಕೊಳ್ಳಬಹುದು.ಶ್ವಾಸಕೋಶದ ಕ್ಯಾನ್ಸರ್
ಧೂಮಪಾನ ಮಾಡದವರಲ್ಲಿಯೂ ಸಹ ಶ್ವಾಸಕೋಶದ ಕ್ಯಾನ್ಸರ್ ವೇಗವಾಗಿ ಹರಡುತ್ತಿದೆ. ಇದರ ಲಕ್ಷಣಗಳು ನಿರಂತರ ಕೆಮ್ಮು, ರಕ್ತಸಿಕ್ತ ಕಫ, ಉಸಿರಾಟದ ತೊಂದರೆ ಮತ್ತು ಹಠಾತ್ ತೂಕ ನಷ್ಟದಿಂದ ಕಾಣಿಸಿಕೊಳ್ಳುತ್ತದೆ. ಇದು ಗಂಭೀರ ಹಂತವನ್ನು ತಲುಪಿದಾಗ ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.ದೊಡ್ಡ ಕರುಳು ಕ್ಯಾನ್ಸರ್
ಜಂಕ್ ಫುಡ್ ಮತ್ತು ಕಡಿಮೆ ಫೈಬರ್ ಆಹಾರಗಳು ಯುವಜನರಲ್ಲಿ ಕೊಲೊನ್ ಕ್ಯಾನ್ಸರ್ (ದೊಡ್ಡ ಕರುಳು) ಪ್ರಕರಣಗಳ ತ್ವರಿತ ಹೆಚ್ಚಿಸುತ್ತಿವೆ. ಈ ಸಮಸ್ಯೆಯು ಮಲವಿಸರ್ಜನೆಯಲ್ಲಿ ತೊಂದರೆ, ರಕ್ತಸಿಕ್ತ ಮಲ, ಹೊಟ್ಟೆ ನೋವು ಮತ್ತು ಹಸಿವಿನ ಕೊರತೆ ಇದರ ಲಕ್ಷಣಗಳಾಗಿವೆ.