ಹಾರ್ಟ್ ಅಂಡ್ ಬ್ರೈನ್ ಹೆಲ್ತ್‌ಗೆ ಇವೇ ಪಕ್ಕಾ ಸೂಪರ್‌ಫುಡ್ಸ್.. 
ಫೋಟೋ ಗ್ಯಾಲರಿ

ಹಾರ್ಟ್ ಅಂಡ್ ಬ್ರೈನ್ ಹೆಲ್ತ್‌ಗೆ ಇವೇ ಪಕ್ಕಾ ಸೂಪರ್‌ಫುಡ್ಸ್

ವಿಶ್ವಾಸ್​ ಎನ್​ ಜೋಳದಾಳು

ಹಾರ್ಟ್ ಅಂಡ್ ಬ್ರೈನ್ ಹೆಲ್ತ್‌ಗೆ ಇವೇ ಪಕ್ಕಾ ಸೂಪರ್‌ಫುಡ್ಸ್..

ಬೆಂಗಳೂರು: ಮೆದುಳಿನ ಆಕಾರದಲ್ಲಿರುವ ಅಕ್ರೋಟ್ (Walnuts) ನೆನಪಿನ ಶಕ್ತಿ ಮತ್ತು ಹೃದಯದ ಆರೋಗ್ಯಕ್ಕೆ ರಾಮಬಾಣ ಎಂಬುದು ನಿಜ. ಆದರೆ, ಒಮೆಗಾ-3 ಅಂಶದ ವಿಷಯಕ್ಕೆ ಬಂದರೆ ಅಕ್ರೋಟ್ ಅನ್ನು ಮೀರಿಸುವ ಅನೇಕ ಸಸ್ಯಾಹಾರಿ ಮತ್ತು ಮಾಂಸಾಹಾರಿ ಮೂಲಗಳು ನಮ್ಮ ನಡುವೆ ಇವೆ.

1. ಅಗಸೆ ಬೀಜಗಳು

ಸಸ್ಯಾಹಾರಿಗಳಿಗೆ ಇದು ಒಮೆಗಾ-3 ನ ಗಣಿ. ಕೇವಲ ಒಂದು ಚಮಚ ಅಗಸೆ ಬೀಜದಲ್ಲಿ ಅಕ್ರೋಟ್‌ಗಿಂತ ಹೆಚ್ಚಿನ ಆಲ್ಫಾ-ಲಿನೋಲೆನಿಕ್ ಆಸಿಡ್ (ALA) ಇರುತ್ತದೆ. ಇದನ್ನು ಪುಡಿ ಮಾಡಿ ಮೊಸರು ಅಥವಾ ಸ್ಮೂಥಿ ಜೊತೆ ಸೇವಿಸಬಹುದು.

2. ಚಿಯಾ ಬೀಜಗಳು

ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್ ಪ್ರೇಮಿಗಳ ನೆಚ್ಚಿನ ಆಹಾರವಿದು. ಚಿಯಾ ಬೀಜಗಳಲ್ಲಿ ಫೈಬರ್ ಮಾತ್ರವಲ್ಲದೆ, ಒಮೆಗಾ-3 ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೂ ಉತ್ತಮ.

3. ಸಾಲ್ಮನ್ ಮೀನು

ಒಮೆಗಾ-3 ಎಂದ ತಕ್ಷಣ ನೆನಪಿಗೆ ಬರುವುದು ಸಾಲ್ಮನ್. ಇದರಲ್ಲಿರುವ EPA ಮತ್ತು DHA ಅಂಶಗಳು ಹೃದಯದ ಬಡಿತವನ್ನು ಸಮತೋಲನದಲ್ಲಿಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತವೆ.

4. ಸಾರ್ಡೀನ್ ಮೀನು

ಬಹಳಷ್ಟು ಜನರಿಗೆ ಈ ಸಣ್ಣ ಮೀನುಗಳ ಮಹತ್ವ ತಿಳಿದಿಲ್ಲ. ಸಾರ್ಡೀನ್‌ಗಳಲ್ಲಿ ವಿಟಮಿನ್ ಡಿ, ಬಿ12 ಮತ್ತು ಅತಿ ಹೆಚ್ಚಿನ ಪ್ರಮಾಣದ ಒಮೆಗಾ-3 ಇರುತ್ತದೆ.

5. ಕಿಡ್ನಿ ಬೀನ್ಸ್

ಸೋಯಾಬೀನ್‌ನಲ್ಲಿ ಒಮೆಗಾ-3 ಮತ್ತು ಒಮೆಗಾ-6 ಸಮತೋಲನದಲ್ಲಿದೆ. ಇದು ಸಸ್ಯಾಹಾರಿಗಳಿಗೆ ಅತ್ಯುತ್ತಮವಾದ ಪ್ರೋಟೀನ್ ಮತ್ತು ಫ್ಯಾಟಿ ಆಸಿಡ್ ಮೂಲವಾಗಿದೆ.

6. ಸೋಯಾಬೀನ್

ಸೋಯಾಬೀನ್‌ನಲ್ಲಿ ಒಮೆಗಾ-3 ಮತ್ತು ಒಮೆಗಾ-6 ಸಮತೋಲನದಲ್ಲಿದೆ. ಇದು ಸಸ್ಯಾಹಾರಿಗಳಿಗೆ ಅತ್ಯುತ್ತಮವಾದ ಪ್ರೋಟೀನ್ ಮತ್ತು ಫ್ಯಾಟಿ ಆಸಿಡ್ ಮೂಲವಾಗಿದೆ.

7. ಸೆಣಬಿನ ಬೀಜಗಳು

ಇವುಗಳಲ್ಲಿ ಸತು, ಕಬ್ಬಿಣ ಮತ್ತು ಒಮೆಗಾ-3 ಹೇರಳವಾಗಿದೆ. ಇದು ಚರ್ಮದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

8. ಸಾಸಿವೆ ಎಣ್ಣೆ

ನಮ್ಮ ಸಾಂಪ್ರದಾಯಿಕ ಸಾಸಿವೆ ಎಣ್ಣೆಯಲ್ಲಿ ಅಕ್ರೋಟ್‌ಗಿಂತಲೂ ಉತ್ತಮವಾದ ಒಮೆಗಾ-3 ಮತ್ತು ಒಮೆಗಾ-6 ಅನುಪಾತವಿದೆ.