ಕಿಡ್ನಿ ಆರೋಗ್ಯ 
ಫೋಟೋ ಗ್ಯಾಲರಿ

ಕಿಡ್ನಿಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಅತ್ಯುತ್ತಮ ಆಹಾರಗಳಿವು! Kidney Health

ಭಾನುಪ್ರಿಯ ಡಿ.ಕೆ

ಕಿಡ್ನಿ ಆರೋಗ್ಯ

ಮೂತ್ರಪಿಂಡಗಳು ದೇಹದಲ್ಲಿರುವ ತ್ಯಾಜ್ಯ ಮತ್ತು ನಂಜಿನಂಶಗಳನ್ನು ಹೊರಹಾಕುವ ಪ್ರಮುಖ ಅಂಗಗಳಾಗಿವೆ. ದಿನನಿತ್ಯದ ಆಹಾರದಲ್ಲಿ ಕೆಲವೊಂದು ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ಕಿಡ್ನಿಗಳನ್ನು ನೈಸರ್ಗಿಕವಾಗಿ ಸ್ವಚ್ಛವಾಗಿಡಬಹುದು.

ಕಿಡ್ನಿ ಬೀನ್ಸ್

ಇವುಗಳಲ್ಲಿ ನಾರಿನಂಶ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಸಾಂಪ್ರದಾಯಿಕವಾಗಿ ರಾಜ್ಮಾವನ್ನು ಕಿಡ್ನಿ ಆಕಾರದಲ್ಲಿರುವುದರಿಂದ ಮಾತ್ರವಲ್ಲ, ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಮತ್ತು ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಹೊರಹಾಕಲು ಬಳಸಲಾಗುತ್ತದೆ.

ನಿಂಬೆ ನೀರು

ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಸಮೃದ್ಧವಾಗಿದ್ದು, ಇದು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗದಂತೆ ತಡೆಯುತ್ತದೆ. ಪ್ರತಿದಿನ ಬೆಚ್ಚಗಿನ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಹೋಗುತ್ತವೆ.

ಸೌತೆಕಾಯಿ

ಶೇ. 95 ಕ್ಕಿಂತ ಹೆಚ್ಚು ನೀರಿನಂಶ ಹೊಂದಿರುವ ಸೌತೆಕಾಯಿ ದೇಹವನ್ನು ಹೈಡ್ರೇಟ್ ಆಗಿಡಲು ಅತ್ಯುತ್ತಮ. ಇದು ಯೂರಿಕ್ ಆಸಿಡ್ ಪ್ರಮಾಣವನ್ನು ತಗ್ಗಿಸಿ ಕಿಡ್ನಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ 'ಅಲಿಸಿನ್' ಎಂಬ ಸಂಯುಕ್ತವು ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕಿಡ್ನಿಯಲ್ಲಿ ಉರಿಯೂತವಾಗದಂತೆ ತಡೆದು, ವಿಷಕಾರಿ ಅಂಶಗಳನ್ನು ಸ್ವಚ್ಛಗೊಳಿಸುತ್ತದೆ.

ಬೆರ್ರಿ ಹಣ್ಣುಗಳು

ಇವುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಅಧಿಕವಾಗಿದೆ. ಕ್ರ್ಯಾನ್‌ಬೆರ್ರಿ ಹಣ್ಣಿನ ರಸವು ಮೂತ್ರನಾಳದ ಸೋಂಕನ್ನು ತಡೆದು ಕಿಡ್ನಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.