ಮೊಸರು 
ಫೋಟೋ ಗ್ಯಾಲರಿ

ನಿಮ್ಮ ಕರುಳಿನ ಆಯಸ್ಸು ಹೆಚ್ಚಿಸುತ್ತೆ ಈ 6 ಸುಲಭ ಆಹಾರ

ಮಣಿಕಂಠ ಪಾ ಹಿರೇಮಠ

ಮೊಸರು

ಇದರಲ್ಲಿ 'ಪ್ರೋಬಯಾಟಿಕ್' ಎಂಬ ಒಳ್ಳೆಯ ಬ್ಯಾಕ್ಟೀರಿಯಾಗಳಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಹೊಟ್ಟೆಯ ಉಬ್ಬರ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.

ಬಾಳೆಹಣ್ಣು

ಇದರಲ್ಲಿರುವ ನಾರಿನಂಶ ಕರುಳಿನ ಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕೆಲಸ ಮಾಡುತ್ತದೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ.

ಮಜ್ಜಿಗೆ

ಬೇಸಿಗೆಯಲ್ಲಿ ಅಥವಾ ಅತಿಯಾದ ಮಸಾಲೆಯುಕ್ತ ಆಹಾರ ಸೇವಿಸಿದ ನಂತರ ಮಜ್ಜಿಗೆ ಕುಡಿಯುವುದು ಕರುಳಿಗೆ ತಂಪು ನೀಡುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಪಪ್ಪಾಯಿ

ಇದರಲ್ಲಿ 'ಪಪೈನ್' ಎಂಬ ಕಿಣ್ವವಿದೆ. ಇದು ಪ್ರೋಟೀನ್ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ ಮತ್ತು ಕರುಳನ್ನು ಶುದ್ಧವಾಗಿರಿಸುತ್ತದೆ.

ಸೇಬು

ಸೇಬಿನಲ್ಲಿ 'ಪೆಕ್ಟಿನ್' ಎಂಬ ನಾರಿನಂಶವಿದೆ. ಇದು ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊರಹಾಕಿ, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.