ಡಾರ್ಕ್ ಚಾಕೊಲೇಟ್ 
ಫೋಟೋ ಗ್ಯಾಲರಿ

ಬರಿ ಮೆದುಳಿಗಷ್ಟೇ ಅಲ್ಲ, ಮನಸ್ಸಿಗೂ ನೆಮ್ಮದಿ ಈ 5 ಸೂಪರ್ ಫುಡ್ಸ್

ಮಣಿಕಂಠ ಪಾ ಹಿರೇಮಠ

ಡಾರ್ಕ್ ಚಾಕೊಲೇಟ್

ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್​ನ್ನು ಕಡಿಮೆ ಮಾಡುತ್ತವೆ.

ಕಿತ್ತಳೆ

ಈ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಸಿ ಸಿಗುತ್ತದೆ. ಇದು ಕಾರ್ಟಿಸೋಲ್ ಹಾರ್ಮೋನ್​​ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಡ್ರೈ ಫ್ರೂಟ್ಸ್​​

ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ ಹೊಂದಿರುವ ಇವು ನರಮಂಡಲಕ್ಕೆ ವಿಶ್ರಾಂತಿ ನೀಡುವುದರಿಂದ ನಮ್ಮ ಒತ್ತಡ ನಿವಾರಣೆಯಾಗುತ್ತದೆ.

ಮೊಸರು

ಕರುಳಿನ ಆರೋಗ್ಯವು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮೊಸರಿನಲ್ಲಿರುವ ಪ್ರೋಬಯೋಟಿಕ್ಸ್ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ.

ಬಾಳೆಹಣ್ಣು

ಇದರಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ.