ದೈಹಿಕ ಚಟುವಟಿಕೆಯ ಕೊರತೆ 
ಫೋಟೋ ಗ್ಯಾಲರಿ

ನಿಮ್ಮ ಈ 5 ಸಣ್ಣ ತಪ್ಪುಗಳೇ ಕೀಲು ನೋವಿಗೆ ಅಸಲಿ ಕಾರಣ!

ಮಣಿಕಂಠ ಪಾ ಹಿರೇಮಠ

ದೈಹಿಕ ಚಟುವಟಿಕೆಯ ಕೊರತೆ

ಒಂದೇ ಕಡೆ ದೀರ್ಘಕಾಲ ಕುಳಿತು ಕೆಲಸ ಮಾಡುವುದು ಕೀಲುಗಳನ್ನು ಬಿಗಿಗೊಳಿಸುತ್ತದೆ. ವ್ಯಾಯಾಮ ಮಾಡದಿದ್ದರೆ ಕೀಲುಗಳ ಸುತ್ತಲಿನ ಸ್ನಾಯುಗಳು ದುರ್ಬಲಗೊಂಡು ನೋವು ಹೆಚ್ಚಾಗುತ್ತದೆ.

ಹೆಚ್ಚಿನ ತೂಕ

ದೇಹದ ತೂಕ ಹೆಚ್ಚಾದಂತೆ ಮೊಣಕಾಲು ಮತ್ತು ಸೊಂಟದ ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಕೇವಲ 1 ಕೆಜಿ ತೂಕ ಇಳಿಕೆಯೂ ಕೀಲುಗಳ ಮೇಲಿನ 4 ಕೆಜಿ ಒತ್ತಡವನ್ನು ಕಡಿಮೆ ಮಾಡುತ್ತದೆ.

ತಪ್ಪು ಭಂಗಿ

ಬಾಗಿ ಕುಳಿತುಕೊಳ್ಳುವುದು ಬೆನ್ನುಮೂಳೆ ಮತ್ತು ಕುತ್ತಿಗೆಯ ಕೀಲುಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.

ಧೂಮಪಾನ

ಸಿಗರೇಟ್ ಸೇವನೆಯು ಮೂಳೆಗಳಿಗೆ ರಕ್ತಸಂಚಾರವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ, ಇದರಿಂದ ಮೂಳೆಗಳು ಬೇಗನೆ ಸವೆಯುತ್ತವೆ.

ನಿರ್ಜಲೀಕರಣ

ಕೀಲುಗಳ ಮಧ್ಯೆ ಇರುವ ದ್ರವವು ಶೇ. 80 ರಷ್ಟು ನೀರಿನಿಂದ ಕೂಡಿದೆ. ನೀರು ಕಡಿಮೆ ಕುಡಿದರೆ ಕೀಲುಗಳ ನಡುವಿನ ಘರ್ಷಣೆ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ.