ಟೀ ಕುಡಿಯುವುದು 
ಫೋಟೋ ಗ್ಯಾಲರಿ

ಆರೋಗ್ಯದ ಮೇಲೆ ಸದ್ದಿಲ್ಲದೆ ದಾಳಿ ಮಾಡುತ್ತಿವೆ ಈ 5 ದೈನಂದಿನ ಹವ್ಯಾಸಗಳು.. ಬೇಗ ಗುಡ್‌ಬೈ ಹೇಳಿ

ಮಣಿಕಂಠ ಪಾ ಹಿರೇಮಠ

ಟೀ ಕುಡಿಯುವುದು

ಬೆಳಿಗ್ಗೆ ಸರಿಯಾದ ಉಪಾಹಾರವಿಲ್ಲದೆ, ಕೇವಲ ಚಹಾ ಕುಡಿದು ದಿನವನ್ನು ಪ್ರಾರಂಭಿಸುವುದು ಪ್ರಾರಂಭದಲ್ಲಿ ಸರಿ ಎನಿಸುತ್ತದೆ, ಆದರೆ ಕಾಲಕ್ರಮೇಣ ಶಕ್ತಿ ಕಡಿಮೆಯಾಗುತ್ತದೆ.

ತಡವಾಗಿ ಊಟ ಮಾಡುವುದು

ರಾತ್ರಿ ತಡವಾಗಿ ಜಾಸ್ತಿ ಊಟ ಮಾಡುವುದರಿಂದ ನಿದ್ರೆ ಪ್ರಕ್ಷುಬ್ಧವಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ತುಂಬಾ ಹೊತ್ತು ಸ್ಕ್ರೀನ್​ ನೋಡುವುದು

ಸೂರ್ಯನ ಬೆಳಕನ್ನು ತಾಗಿಸಿಕೊಳ್ಳದೆ, ಹೆಚ್ಚಾಗಿ ಒಳಾಂಗಣದಲ್ಲಿ ಕುಳಿತುಕೊಳ್ಳುವುದು, ನಿರಂತರವಾಗಿ ಮೊಬೈಲ್ ಮತ್ತು ಕಂಪ್ಯೂಟರ್​​ ಸ್ಕ್ರೀನ್​ ನೋಡುವುದರಿಂದ ಮನಸ್ಥಿತಿ ಕುಸಿಯುತ್ತದೆ, ಇದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ಫ್ಲಾಟ್ ಚಪ್ಪಲಿ ಬಳಕೆ

ದೀರ್ಘಕಾಲದವರೆಗೆ ಫ್ಲಾಟ್ ಚಪ್ಪಲಿಗಳನ್ನು ಧರಿಸುವುದು ಮನೆಯಲ್ಲಿ ಅಥವಾ ಹತ್ತಿರದ ಕೆಲಸಗಳಿಗೆ ಹೋಗುವಾಗ ಆರಾಮದಾಯಕ ಎನಿಸುತ್ತವೆ. ಆದರೆ, ಪಾದಗಳಿಗೆ ಕೇವಲ ಆರಾಮವಷ್ಟೇ ಸಾಲದು, ಸರಿಯಾದ ಆಧಾರ ಕೂಡ ಬೇಕು.

ಮಾತ್ರೆ ಸೇವನೆ

ತಲೆನೋವು ಬರುತ್ತದೆ ಎಂದ ತಕ್ಷಣ ಮಾತ್ರೆ ತೆಗೆದುಕೊಳ್ಳಲಾಗುತ್ತದೆ. ವೈದ್ಯರನ್ನು ಸಂಪರ್ಕಿಸದೆ ಬೇಗನೆ ಆರಾಮ ಸಿಗಲಿ ಎನ್ನುವ ಕಾರಣಕ್ಕೆ ಮಾತ್ರೆ ಸೇವಿಸುತ್ತಾರೆ, ಅದು ದೈನಂದಿನ ಅಭ್ಯಾಸವಾಗುತ್ತದೆ.