ಹಸಿ ಪಪ್ಪಾಯಾದಲ್ಲಿ ಅಡಗಿದೆ ಹೆಣ್ಣುಮಕ್ಕಳ ಆರೋಗ್ಯದ ರಹಸ್ಯ!
ಹಸಿ ಪಪ್ಪಾಯಾದಲ್ಲಿ ಅಡಗಿದೆ ಹೆಣ್ಣುಮಕ್ಕಳ ಆರೋಗ್ಯದ ರಹಸ್ಯ!
ಮಹಿಳೆಯರ ಆರೋಗ್ಯಕ್ಕೆ ಹಸಿ ಪಪ್ಪಾಯ ಅತ್ಯಂತ ಉಪಯುಕ್ತವಾಗಿದ್ದು, ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆ ಹೆಚ್ಚಿಸುವುದರ ಜೊತೆಗೆ ಹಾರ್ಮೋನ್ ಸಮತೋಲನ, ತ್ವಚೆಯ ಸೌಂದರ್ಯ ಮತ್ತು ಒಟ್ಟಾರೆ ದೈಹಿಕ ಶಕ್ತಿಗೆ ಅಪಾರವಾಗಿ ನೆರವಾಗುತ್ತವೆ.ಋತುಚಕ್ರದ ತೊಂದರೆ ನಿವಾರಣೆ
ಹಸಿ ಪಪ್ಪಾಯ ಗರ್ಭಾಶಯದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಪೀರಿಯಡ್ಸ್ ಸರಿಯಾದ ಸಮಯಕ್ಕೆ ಬರಲು ಮತ್ತು ಆ ಸಮಯದಲ್ಲಿ ಆಗುವ ತೀವ್ರ ಹೊಟ್ಟೆನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ.ಜೀರ್ಣಕ್ರಿಯೆಗೆ ಅನುಕೂಲ
ಇದರಲ್ಲಿ ಪಪೈನ್ ಎಂಬ ಕಿಣ್ವ ಅಧಿಕವಾಗಿದ್ದು, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ.ತ್ವಚೆಯ ಸೌಂದರ್ಯ ಮತ್ತು ಕಾಂತಿ
ಹಸಿ ಪಪ್ಪಾಯಾದಲ್ಲಿ ವಿಟಮಿನ್ 'ಸಿ' ಮತ್ತು 'ಎ' ಸಮೃದ್ಧವಾಗಿದೆ. ಇದು ಚರ್ಮದ ಮೇಲಿನ ಕಪ್ಪು ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡಿ, ತ್ವಚೆಗೆ ನೈಸರ್ಗಿಕ ಕಾಂತಿ ಹಾಗೂ ಯೌವನದ ಕಳೆಯನ್ನು ನೀಡುತ್ತದೆ.ಎದೆಹಾಲು ಹೆಚ್ಚಿಸಲು ನೆರವು
ಬಾಣಂತಿಯರಲ್ಲಿ ಎದೆಹಾಲಿ ಉತ್ಪಾದನೆಯನ್ನು ಹೆಚ್ಚಿಸಲು ಸಾಂಪ್ರದಾಯಿಕವಾಗಿ ಹಸಿ ಪಪ್ಪಾಯವನ್ನು ಬಳಸಲಾಗುತ್ತದೆ. ಇದು ಹಾಲಿನ ಪ್ರಮಾಣವನ್ನು ಹೆಚ್ಚಿಸಲು ಅತ್ಯುತ್ತಮ ಗಿಡಮೂಲಿಕೆ ಆಹಾರವಾಗಿದೆ.ರೋಗನಿರೋಧಕ ಶಕ್ತಿ ಹೆಚ್ಚಳ
ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಅಗತ್ಯ ಪೋಷಕಾಂಶಗಳಿಂದ ಕೂಡಿದ ಹಸಿ ಪಪ್ಪಾಯ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಪದೇ ಪದೇ ಬರುವ ಸೋಂಕುಗಳಿಂದ ದೇಹವನ್ನು ಕಾಯುತ್ತದೆ.