ಸ್ಟೈಲಿಶ್ ಲುಕ್​ 
ಫೋಟೋ ಗ್ಯಾಲರಿ

ಸೆಖೆಯಲ್ಲೂ ನಿಮ್ಮನ್ನು ಕೂಲ್ ಆಗಿರಿಸುವ ಬೆಸ್ಟ್ ಕುರ್ತಾಗಳು! Summer Fashion

ಭಾನುಪ್ರಿಯ ಡಿ.ಕೆ

ಸ್ಟೈಲಿಶ್ ಲುಕ್​

ಬೇಸಿಗೆ ಹತ್ತಿರ ಬರುತ್ತಿದ್ದಂತೆಯೇ ಮಹಿಳೆಯರಿಗೆ ಯಾವ ರೀತಿ ಬಟ್ಟೆ ಧರಿಸಬೇಕು ಎಂದು ಗೊಂದಲಕ್ಕೀಡಾಗುತ್ತಾರೆ. ಈ ಧಗೆಯಿಂದ ಪಾರಾಗಲು ಮತ್ತು ಸ್ಟೈಲಿಶ್ ಆಗಿ ಕಾಣಲು ಈ ರೀತಿಯ ಕುರ್ತಾಗಳನ್ನು ಬಳಸಿರಿ.

ಪ್ಯೂರ್ ಕಾಟನ್ ಕುರ್ತಾ

ಬೇಸಿಗೆಗೆ ಹತ್ತಿ ಬಟ್ಟೆಗಿಂತ ಮಿಗಿಲಾದ ಆಯ್ಕೆ ಬೇರೊಂದಿಲ್ಲ. ಇದು ಗಾಳಿಯಾಡಲು ಅನುವು ಮಾಡಿಕೊಡುತ್ತದೆ ಮತ್ತು ಬೆವರಿನಂಶವನ್ನು ಹೀರಿಕೊಳ್ಳುತ್ತದೆ. ತಿಳಿ ಬಣ್ಣದ ಕಾಟನ್ ಕುರ್ತಾಗಳು ಕಣ್ಣಿಗೆ ತಂಪಾಗಿ ಕಾಣುತ್ತವೆ.

ಲಿನಿನ್ ಕುರ್ತಾ

ಲಿನಿನ್ ಬಟ್ಟೆಯು ಅತ್ಯಂತ ಹಗುರವಾಗಿ ಮತ್ತು ಗಟ್ಟಿಯಾಗಿರುತ್ತದೆ. ಇದು ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ, ಆದ್ದರಿಂದ ದಿನವಿಡೀ ಆರಾಮದಾಯಕವಾಗಿರಲು ಇದನ್ನು ಬಳಸಬಹುದು. ಆಫೀಸ್ ಅಥವಾ ಔಪಚಾರಿಕ ಭೇಟಿಗಳಿಗೆ ಇದು ಸೂಕ್ತ.

ಚಿಕನ್ಕಾರಿ ಕುರ್ತಾ

ಲಕ್ನೋ ಶೈಲಿಯ ಚಿಕನ್ಕಾರಿ ಕುರ್ತಾಗಳು ಬೇಸಿಗೆಯಲ್ಲಿ ಹೆಚ್ಚು ಜನಪ್ರಿಯ. ನವಿರಾದ ದಾರದಿಂದ ಮಾಡಿದ ಡಿಸೈನ್‌ಗಳು ಕುರ್ತಾಗೆ ಸುಂದರವಾದ ನೋಟ ನೀಡುವುದಲ್ಲದೆ, ಬಟ್ಟೆಯನ್ನು ಹಗುರವಾಗಿರಿಸುತ್ತವೆ.

ಫ್ಲೇರ್ಡ್ ಕುರ್ತಾ

ಬಿಗಿಯಾದ ಬಟ್ಟೆಗಳಿಗಿಂತ ಬೇಸಿಗೆಯಲ್ಲಿ ಸ್ವಲ್ಪ ಸಡಿಲವಾದ (Loose fit) ಕುರ್ತಾಗಳು ಉತ್ತಮ. ಎ-ಲೈನ್ ಕುರ್ತಾಗಳು ಸೊಂಟದಿಂದ ಕೆಳಕ್ಕೆ ಅಗಲವಾಗಿರುವುದರಿಂದ ಆರಾಮವಾಗಿ ಓಡಾಡಲು ಸಹಕಾರಿ.

ಶಾರ್ಟ್ ಕುರ್ತಿಗಳು

ಜೀನ್ಸ್ ಅಥವಾ ಲಿನಿನ್ ಪ್ಯಾಂಟ್‌ಗಳೊಂದಿಗೆ ಶಾರ್ಟ್ ಕುರ್ತಿಗಳನ್ನು ಧರಿಸುವುದು ಇಂದಿನ ಟ್ರೆಂಡ್. ಇವು ಕಾಲೇಜು ಅಥವಾ ಪಾರ್ಟ್-ಟೈಮ್ ಕೆಲಸಕ್ಕೆ ಹೋಗುವಾಗ ಧರಿಸಲು ತುಂಬಾ ಕಂಫರ್ಟಬಲ್ ಆಗಿರುತ್ತವೆ.