ಬೇಸಿಗೆ ಆರೋಗ್ಯ 
ಫೋಟೋ ಗ್ಯಾಲರಿ

ಬೇಸಿಗೆ ಎಚ್ಚರ: ಮುಂಜಾನೆ ಈ ಕೆಲಸ ಮರೆತೂ ಮಾಡಬೇಡಿ! Summer Health

ಭಾನುಪ್ರಿಯ ಡಿ.ಕೆ

ಬೇಸಿಗೆ ಆರೋಗ್ಯ

ಬೇಸಿಗೆ ಸಮಯದಲ್ಲಿ ವಾತಾವರಣದ ಬದಲಾವಣೆಯಿಂದಾಗಿ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹಾಗಾಗಿ ಈ ರೀತಿಯ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ

ಕೆಫೀನ್ ಆಧಾರಿತ ಪಾನೀಯಗಳು

ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಕುಡಿದರೆ ಹೊಟ್ಟೆಯ ಆಮ್ಲ ಸ್ರಾವ ಹೆಚ್ಚಾಗಿ ಎದೆಯುರಿ ತಲೆ ಸುತ್ತುವಿಕೆ ಬರಬಹುದು. ಹಾಗಾಗಿ ಕಾಫಿ/ಚಹಾ ಕುಡಿಯುವ ಮೊದಲು ಏನಾದರೂ ತಿಂದುಕೊಳ್ಳಿ.

ಮಸಾಲೆಯುಕ್ತ ಆಹಾರಗಳು

ಖಾರ, ಮೆಣಸು, ಬೆಳ್ಳುಳ್ಳಿ ಹೆಚ್ಚಿರುವ ಪದಾರ್ಥಗಳು ಹೊಟ್ಟೆಯ ಒಳಪದರವನ್ನು ಕಿರಿಕಿರಿಗೊಳಿಸಿ ಉರಿ, ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಅಲ್ಸರ್​ನಂತಹ ಅಪಾಯ ಹೆಚ್ಚಿಸಬಹುದು.

ಸಿಟ್ರಸ್ ಹಣ್ಣುಗಳು

ಕಿತ್ತಳೆ, ಮೂಸಂಬಿ, ನಿಂಬೆ ಈ ರೀತಿಯ ಹಣ್ಣುಗಳಲ್ಲಿ ಆಮ್ಲತೆ ಹೆಚ್ಚಾಗಿರುವುದರಿಂದ ಖಾಲಿ ಹೊಟ್ಟೆಯಲ್ಲಿ ತಿಂದರೆ ಎದೆಯುರಿ, ಹೊಟ್ಟೆ ಉರಿ ಮತ್ತು ಅಸಿಡಿಟಿ ತೀವ್ರವಾಗುತ್ತದೆ.

ಸಕ್ಕರೆ ಹೆಚ್ಚಿರುವ ಪಾನೀಯಗಳು

ಚಾಕಲೇಟ್​, ಕೇಕ್​, ಜ್ಯೂಸ್​ಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಆಯಾಸ, ಹೆಚ್ಚು ಹಸಿವು ಮತ್ತು ಇನ್ಸುಲಿನ್ ಸಮಸ್ಯೆಗಳು ಉಂಟಾಗಬಹುದು.

ಹಸಿ ತರಕಾರಿ ಸಲಾಡ್

ಈ ತರಕಾರಿಗಳಲ್ಲಿ ಫೈಬರ್ ಹೆಚ್ಚಿರುವುದರಿಂದ ಖಾಲಿ ಹೊಟ್ಟೆಯಲ್ಲಿ ಸೇವಿಸಯವುದರಿಂದ ಗ್ಯಾಸ್, ಎದೆಉರಿ, ಹೊಟ್ಟೆಯಲ್ಲಿ ಅಜೀರ್ಣದಂತಹ ಸಮಸ್ಯೆ ಹೆಚ್ಚಾಗುತ್ತದೆ.